Advertisement
ಈ ಮೊದಲು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಿದ್ದು, ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರ ಎದುರು ಅಭ್ಯರ್ಥಿ ನಿಲ್ಲಿಸದೇ ಇದ್ದದ್ದು, ಕಟ್ಟರ್ ವಿರೋಧಿ ಎನ್ನಲಾಗಿದ್ದ ಮುಸ್ಲಿಂ ಲೀಗ್ ವಿರುದ್ಧವೂ ಸ್ಪರ್ಧಿಸದೇ ಇದ್ದ ಶಿವಸೇನೆ ಕೆಲವು ಹಂತಗಳಲ್ಲಿ ವಿಪಕ್ಷಗಳಿಗೂ ಆಪ್ತನಾಗಿ ಕಂಡಿತ್ತು. ಸುಮಾರು 5 ದಶಕಗಳಲ್ಲಿ ಶಿವಸೇನೆಯ ಮುಖ್ಯಸ್ಥರೇ ಮುಖ್ಯಮಂತ್ರಿ ಹುದ್ದೆಗೇರಿಲ್ಲ. ಅದರ ನಾಯಕರನ್ನು ಹುದ್ದೆಗೇರಿಸಿ, ತಾವೇ ಹಿನ್ನೆಲೆಯಲ್ಲಿರುತ್ತಿದ್ದರು.
Related Articles
Advertisement
ಇತಿಹಾಸ ನಿರ್ಮಿಸಿದ ಉದ್ಧವ್ ಠಾಕ್ರೆ : ಶಿವಸೇನೆಯ ಸುದೀರ್ಘ ಇತಿಹಾಸವನ್ನು ಗಮನಿಸಿದಾಗ ಮುಖ್ಯಸ್ಥರು ಎಂದಷ್ಟೇ ಗುರುತಿಸಿಕೊಳ್ಳುತ್ತಿದ್ದ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹುದ್ದೆಗೆ ಏರಿರುವುದು ವಿಶೇಷ. 1966ರಲ್ಲಿ ಬಾಳಾ ಠಾಕ್ರೆ ಹುಟ್ಟು ಹಾಕಿದ ಶಿವಸೇನೆ ರಾಜ್ಯ ಮತ್ತುಕೇಂದ್ರಗಳಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿದ್ದರೂತನ್ನದೇ ಪಕ್ಷದ ಮುಖ್ಯಸ್ಥನನ್ನು ಅಧಿಕಾರಕ್ಕೆ ಇಳಿಸಿರಲಿಲ್ಲ. ಹೀಗಾಗಿ ಉದ್ಧವ್‌ರ ಸಾಧನೆಹೊಸ ದಾಖಲೆ. ಉದ್ಧವ್ ಠಾಕ್ರೆಯನ್ನು ಅವರ ಚಿಕ್ಕಪ್ಪ (ಬಾಳ ಠಾಕ್ರೆಯವರ ತಮ್ಮ) ಶ್ರೀಕಾಂತ್ ಠಾಕ್ರೆ ಅವರು ಪ್ರೀತಿಯಿಂದ ಡಿಂಗ ಎಂದೇ ಕರೆಯುತ್ತಿದ್ದರು. ತಂದೆ ಬಾಳ ಠಾಕ್ರೆ, ಚಿಕ್ಕಪ್ಪ ಶ್ರೀಕಾಂತ್ ಠಾಕ್ರೆ ಮತ್ತು ಚಿಕ್ಕಪ್ಪನ ಮಗ ರಾಜ್ ಠಾಕ್ರೆ ಅವರಂತೆಯೇ ಉದ್ಧವ್ ಕೂಡ ವ್ಯಂಗ್ಯಚಿತ್ರಕಾರ. ಚಿಕ್ಕಪ್ಪನ ಒಡನಾಟ ದಲ್ಲೇ ಹೆಚ್ಚು ಬೆಳೆದ ಉದ್ಧವ್ ಬಳಿಕ ಛಾಯಾ ಗ್ರಹಣ ದತ್ತ ಹೊರಳಿದರು. 9 ವರ್ಷದ ಮಗು ವಾಗಿದ್ದಾಗ ತೀವ್ರ ಕಾಯಿಲೆಗೆ ಒಳಗಾಗಿದ್ದ ಉದ್ಧವ್ ಅವರನ್ನು ತಮ್ಮ ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡು ಆರೈಕೆ ಮಾಡಿದವರು ಶ್ರೀಕಾಂತ್ ಠಾಕ್ರೆ. ಮೌನಕ್ಕೆ ಶರಣಾದ ರಾಜ್‌ಠಾಕ್ರೆ ತಂದೆಯ ಕಾಲದ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿರುವ ಉದ್ಧವ್, ಕುಟುಂಬದ ಇದು ವರೆಗಿನ ನಡೆಯ ದಿಕ್ಕನ್ನು ಬದಲಿಸುವ ಸೂಚನೆ ನೀಡಿದ್ದಾರೆ. ಇದೇ ವೇಳೆ ಠಾಕ್ರೆ ಕುಟುಂಬದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮೌನಕ್ಕೆ ಶರಣಾಗಿದ್ದಾರೆ.
ಶಿವಸೇನೆ- ಹಿಂದೂ ಧೋರಣೆ: 1995 ರಲ್ಲಿ ಶಿವಸೇನೆಯ ಮನೋಹರ ಜೋಶಿಮೊಟ್ಟ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಅದಾದ ಬಳಿಕ ಈಗ ಉದ್ಧವ್ ಠಾಕ್ರೆ ಆಸ್ಥಾನವನ್ನು ಅಲಂಕರಿಸುತ್ತಿದ್ದಾರೆ. “ಮಣ್ಣಿನ ಮಕ್ಕಳಿಗೆ ಮುಂಬಯಿ’ ಎನ್ನುವ ಧೋರಣೆಯನ್ನು ಸಡಿಲಿಸಿ ಈ ನಾಡು ಹಿಂದೂಗಳದ್ದು ಎಂದು ಘೋಷಿಸಿದ್ದವರು ಬಾಳಾ ಠಾಕ್ರೆ. ಈ ಹಂತದಲ್ಲಿ ಮರಾಠಿಯೇತರರನ್ನೂ ಸ್ವಾಗತಿಸಿತು ಶಿವಸೇನೆ. ಹಲವು ರಾಜ್ಯಗಳ ಮುಖ್ಯ ಮಂತ್ರಿಗಳು, ಪಕ್ಷಗಳ ನಾಯಕರು, ಧಾರ್ಮಿಕ ಮುಂದಾಳು ಗಳಷ್ಟೇ ಅಲ್ಲ. ಪಾಪ್ ಗಾಯಕ ಮೈಕಲ್ ಜಾಕ್ಸನ್ ನಂಥವರೂ ಮಾತೋಶ್ರೀಯ ಅತಿಥಿ ಯಾಗಲು ಉತ್ಸಾಹ ತೋರಿದ್ದರು. ಬಾಳಾ ಠಾಕ್ರೆ ಅವರು ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಜನರ ನೋವು, ಹತಾಶೆಯನ್ನು ಅಭಿವ್ಯಕ್ತಿ ಸುತ್ತಿದ್ದರು. “ಮಾರ್ಮಿಕ್’ ಪತ್ರಿಕೆ ಯನ್ನು ಪ್ರಾರಂಭಿಸಿ, ಬಳಿಕ “ಸಾಮ್ನಾ’ವನ್ನು ಪ್ರಕಟಿಸಿದರು. ವ್ಯಂಗ್ಯಚಿತ್ರ ರಚನೆಯಿಂದ ಏಕೆ ವಿಮುಖರಾದಿರಿ ಎಂಬ ಪ್ರಶ್ನೆಗೆ ಠಾಕ್ರೆಯವರು, “ಒಳ್ಳೆಯ ಚಹರೆಗಳೇ ರಾಜಕೀಯದಲ್ಲಿ ಕಂಡು ಬಾರದಿದ್ದಾಗ ನಿಲ್ಲಿಸಿದೆ ‘ಎಂದಿದ್ದರು.