Advertisement
ಬೇರೆ ದೇಶದಿಂದ ಆಮದು ಮಾಡಿಕೊಂಡರೆ ಆ ದೇಶದ ಕರೆನ್ಸಿ ಅಥವಾ ಅಮೆರಿಕನ್ ಡಾಲರ್, ಪೌಂಡ್, ಸ್ಟರ್ಲಿಂಗ್, ಯುರೋ ಮುಂತಾದ ಅಂತರಾಷ್ಟ್ರೀಯ ಕರೆನ್ಸಿಗಳಲ್ಲಿ ವ್ಯವಹಾರ (ಪೇಮೆಂಟ್) ಮಾಡಬೇಕಾಗುತ್ತದೆ. ಇದು ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರದಲ್ಲಿ ಲಾಗಾಯ್ತಿನಿಂದ ನಡೆದು ಬಂದ ಪದ್ಧತಿ. ಜಾಗತಿಕ ವ್ಯಾಪಾರದಲ್ಲಿ ಡಾಲರ್, ಪೌಂಡ್ ಸ್ಟರ್ಲಿಂಗ್ಸ್, ಯೆನ್, ಯುರೊ ಮತ್ತು ಸ್ವಿಸ್Ì ಫ್ರಾಂಕ್‌ಗಳ ಬಳಕೆಯೇ ಹೆಚ್ಚು. ಇಡೀ ಜಗತ್ತಿನ ವ್ಯವಹಾರಗಳು ಶೇ. 52ರಷ್ಟು ಅಮೇರಿಕನ್ ಡಾಲರ್‌ನಲ್ಲಿ ಹಾಗೂ ಶೇ. 64ರಷ್ಟು ವಿದೇಶಿ ವಿನಿಮಯ ಸಂಗ್ರಹ ಕೂಡಾ ಡಾಲರ್ ನಲ್ಲಿಯೇ ನಡೆಯುತ್ತದೆ.
ನಮ್ಮ ದೇಶದ ತೈಲ ವ್ಯವಹಾರ ಕಡಿಮೆ ಏನಿಲ್ಲ. ಇಡೀ ಜಗತ್ತಲ್ಲಿ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಎರಡನೇ ರಾಷ್ಟ್ರ ಭಾರತ. 2018 ರಲ್ಲಿ ದಿನಕ್ಕೆ ಸರಾಸರಿ 4,34, 150 ಬ್ಯಾರೆಲ್ ನಂತೆ, 217.80 ಮಿಲಿಯನ್‌ಮೆಟ್ರಿಕ್ ಟನ್ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ. ಇದಕ್ಕೆ 125.53 ಬಿಲಿಯನ್ ಡಾಲರ್‌ಅನ್ನು ಪಾವತಿಸಿದೆ. ಈ ವರ್ಷ ಇರಾನ್ ದೇಶ ಒಂದರಿಂದಲೇ 25 ಮಿಲಿಯನ್ ಟನ್ ತೈಲವನ್ನು ಪಡೆದಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 13.34% ಹೆಚ್ಚಳ. ಈ ಹಿಂದಿನ ಎಲ್ಲ ತೈಲ ವ್ಯವಹಾರಕ್ಕೂ ಅಮೆರಿಕ, ಯೂರೋಪಿಯನ್ ಬ್ಯಾಂಕ್‌ಗಳ ಮಧ್ಯಸ್ಥಿಕೆ ಬೇಕಿತ್ತು. ಈಗ ಹಾಗಿಲ್ಲ. ಭಾರತದ ರೂಪಾಯಿಯಲ್ಲೇ ವ್ಯವಹಾರ ಆಗುತ್ತಿರುವುದರಿಂದ ಕೋಟ್ಯಂತರ ರೂ. ಕಮೀಷನ್ ಉಳಿತಾಯವಾಗಿದೆ. ಲಾಭವಿದೆ ಇದರಿಂದ ಲಾಭ ಏನು? ಹೀಗಂತ ಕೇಳಬಹುದು. ಪೆಟ್ರೋಲ್, ಡಾಲರ್, ಈ ಚಿನ್ನ- ಮೂರಕ್ಕೂ ಒಳಗೊಳಗೆ ಸಂಬಂಧವಿದೆ. ತೈಲ ಬೆಲೆ ಇಳಿದರೆ ಚಿನ್ನದ ಬೆಲೆಯಲ್ಲೂ ಏರುಪೇರಾಗಬಹುದು. ಕಳೆದ ಮೂರು ತಿಂಗಳಿನ ಆರ್ಥಿಕ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿ. ಈ ಅವಧಿಯಲ್ಲಿ ಚಿನ್ನದ ಬೆಲೆ ಅತಿಯಾಗಿ ಏರಿಲ್ಲ, ಹಾಗೆಯೇ
ಪೆಟ್ರೋಲ್ ಬೆಲೆ ಬ್ಯಾರಲ್‌ಗೆ 70ಡಾಲರ್ ಇದ್ದದ್ದು ಈಗ ಅಂದಾಜು 64 ಡಾಲರ್‌ಗೆ ಇಳಿದಿದೆ. ಬ್ಯಾರಲ್ ಬೆಲೆ 70ಡಾಲರ್ ಇದ್ದಾಗ ಭವಿಷ್ಯದಲ್ಲಿ 80ಡಾಲರ್‌ಗೂ ತಲುಪಿ, ನಮ್ಮ ಪೆಟ್ರೋಲ್ ಬೆಲೆ ಲೀಟರ್ 100ರೂ. ಆಗುತ್ತದೆ. ಇದರ ಪರಿಣಾಮ, ಅಡುಗೆ ಸಿಲಿಂಡರ್ ಬೆಲೆ ಸಾವಿರ ರೂ. ದಾಟುವ ಎಲ್ಲ ಲಕ್ಷಣಗಳು ಇವೆ ಅಂತ ತಜ್ಞರು ಅಂದಾಜು ಮಾಡಿದ್ದರು. ಆದರೆ ಆ ರೀತಿ ಆಗಲೇ ಇಲ್ಲ. ತೈಲ ಕಂಪೆನಿಗಳೊಂದಿಗೆ ನಡೆಯುತ್ತಿರುವ ರೂಪಾಯಿ ವ್ಯವಹಾರವೇ ಇದಕ್ಕೆ ಕಾರಣ. ಈ ಪೇಮೆಂಟ್‌ಗೆ Financial Benchmarks India ದ ರೆಫರೆನ್ಸ್ ರೇಟ್‌ಅನ್ನು ಬಳಸಲಾಗುವುದು. ಇರಾನ್‌ನಿಂದ ಕಚ್ಚಾತೈಲ ಆಮದು ಮಾಡಿಕೊಂಡರೆ ರೂಪಾಯಿಯಲ್ಲಿ ಪೇಮೆಂಟ್ ಮಾಡುವುದು ಹೊಸ ಬೆಳವಣಿಗೆಯಲ್ಲ. ಈ ಮೊದಲು ಶೇ.45ರಷ್ಟನ್ನು ರೂಪಾಯಿಯಲ್ಲಿ ಮತ್ತು ಶೇ.55ರಷ್ಟನ್ನೂ ಯುರೋ ದಲ್ಲಿ ಮಾಡಬೇಕಾಗಿತ್ತು. ಈಗ ಶೇ. ನೂರಕ್ಕೆ ನೂರರಷ್ಟು ನಮ್ಮ ರೂಪಾಯಿಯಲ್ಲಿ ಪಾವತಿ ಮಾಡಬಹುದು.
Related Articles
Advertisement
ಪ್ರಸ್ತುತ ಭಾರತ 23 ದೇಶಗಳೊಂದಿಗೆ ಈ ರೀತಿ ದ್ವಿಪಕ್ಷೀಯ ವ್ಯವಹಾರ ಮಾಡುತ್ತಿದೆ. ಪರಸ್ಪರ ವ್ಯಾಪಾರ-ವ್ಯವಹಾರಗಳಲ್ಲಿ ಮೂರನೇ ದೇಶದ ಕರೆನ್ಸಿಯ ಬಳಕೆಯನ್ನು ಕಡಿಮೆ ಮಾಡಿದರೆ ಮಧ್ಯಮವರ್ಗದ ಬಳಕೆಯ ವಸ್ತುಗಳ ಬೆಲೆಯನ್ನು ಎಷ್ಟೆಲ್ಲ ಕಡಿಮೆ ಮಾಡಬಹುದು? ಇಂಥ ಚಿಂತನೆ ಈಗ ನಡೆಯುತ್ತಿದೆ.
– ರಮಾನಂದ ಶರ್ಮ