ಶಿವಮೊಗ್ಗ: ಮೇ 10 ರಂದು ರಾಜ್ಯದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ನಡೆಯುತ್ತಿದೆ. ಪ್ರಧಾನಿ ಮೋದಿಯವರೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಇದರ ಪರಿಣಾಮ ಜನರು ಸೇರಿದಂತೆ ಮೇ. 13 ರಂದು ವಿಪಕ್ಷಗಳಿಗೆ ಗೊತ್ತಾಗುತ್ತದೆ ಎಂದು ಶಿಕಾರಿಪುರ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಹೇಳಿದರು.
ಆಯನೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಬರುವುದರಿಂದ ವೋಟ್ ಬರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ. ಪ್ರಧಾನಿ ಮೋದಿಯ ಭೇಟಿ ಪರಿಣಾಮ ನಿಮಗೆ ಗೊತ್ತಾಗುತ್ತದೆ. ಜಿಲ್ಲೆಯ ಏಳು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಹಗಲು ಕನಸನ್ನು ವಿಪಕ್ಷಗಳು ಕಾಣುತ್ತಿವೆ. ಅವರ ಕನಸು ಮೇ 13 ರಂದು ಭಗ್ನವಾಗುತ್ತದೆ. 140 ಕ್ಕೂ ಹೆಚ್ಚು ಸ್ಥಾನ ಪಡೆದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಇದನ್ನೂ ಓದಿ:IPL 2023 ಮುನಿಸು ಮರೆತ ದಾದಾ- ಕಿಂಗ್: DC- RCB ಪಂದ್ಯದ ಬಳಿಕ ನಡೆದಿದ್ದೇನು?
ಕೋವಿಡ್ ಸಮಯದಲ್ಲಿ ಪ್ರಧಾನಿ ಮೋದಿ ದೇಶವನ್ನು ರಕ್ಷಣೆ ಮಾಡಿದ್ದರು. ಗ್ರಹಚಾರ ಕೆಟ್ಟು ಅದೇ ರಾಹುಲ್ ಗಾಂಧಿ ಪ್ರಧಾನಿಯಾಗಿದರೆ ಪರಿಸ್ಥಿತಿ ಉಹಿಸಲು ಸಾಧ್ಯವಿರಲಿಲ್ಲ. ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಆರ್ಥಿಕ ಸಂಕಷ್ಟದ ಕಾಲದಲ್ಲಿವೆ. ರಾಹುಲ್ ಗಾಂಧಿ ಪ್ರಧಾನಿಯಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ದೇಶದ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಶ್ರೀಲಂಕಾ, ಪಾಕಿಸ್ತಾನಕ್ಕಿಂತ ಮೊದಲೇ ಭಾರತ ದಿವಾಳಿಯಾಗುತ್ತಿತ್ತು ಎಂದರು.
ರಾಜ್ಯದ ಜನರು ಬಿಜೆಪಿಗೆ ಅಧಿಕಾರಕ್ಕೆ ನೀಡುವ ಮೋದಿ ಕೈ ಬಲಪಡಿಸಬೇಕು. ನಾನು ಕೂಡ ಜೀವನದ ಮೊದಲ ಚುನಾವಣೆ ಎದುರಿಸುತ್ತಿದ್ದೇನೆ. ಜಿಲ್ಲೆಯ ಏಳು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ವಿಜಯೆಂದ್ರ ಮನವಿ ಮಾಡಿದರು.