ಕಾರ್ಕಳ: ರಾಜಕೀಯ ಚರಿತ್ರೆಯಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರ ಹಲವು ವೈಶಿಷ್ಟéಗಳಿಗೆ ಕಾರಣವಾಗಿದೆ. 1952ರಲ್ಲಿ ಮದ್ರಾಸ್ ಪ್ರಾಂತ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.ಬಿ. ಶೆಟ್ಟಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ತಮ್ಮ ಮೊದಲ ಅವಧಿಯಲ್ಲೇ ಆರೋಗ್ಯ ಮಂತ್ರಿಯಾದರು.
ಕರಾವಳಿಯ ಮೊದಲ ಸಿಎಂ !
ಇದೇ ಕ್ಷೇತ್ರದಿಂದ ಗೆದ್ದು ಸಚಿವರಾದವರು ಕಾಂಗ್ರೆಸ್‌ನ ಡಾ| ಎಂ. ವೀರಪ್ಪ ಮೊಯಿಲಿಯವರು. 1972ರಲ್ಲಿ ಮೊಲಿಯವರು ಶಾಸಕರಾದರು. 1974ರಲ್ಲಿ ದೇವರಾಜು ಅರಸು ಮಂತ್ರಿಮಂಡಲ ಸೇರಿ ಸಣ್ಣ ಕೈಗಾರಿಕೆ ಸಚಿವರಾದರು. ಸತತವಾಗಿ ಗೆದ್ದು ಬಂದ ಅವರು ಮುಂದೆ ಶಿಕ್ಷಣ, ವಿತ್ತ, ಕಾನೂನು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1982ರಲ್ಲಿ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದರು. 1992ರಲ್ಲಿ ಮುಖ್ಯಮಂತ್ರಿ ಅರಸಿ ಬಂದಿತ್ತು. ಆ ಮೂಲಕ ಕರಾವಳಿಯಿಂದ ಮೊದಲ ಬಾರಿ ಮುಖ್ಯಮಂತ್ರಿಯಾದ ಕೀರ್ತಿ ಇವರ ಪಾಲಿಗೆ ಸಲ್ಲುತ್ತದೆ.