ಕಟಪಾಡಿ: ಪ್ಲಾಸ್ಟಿಕ್‌ನಿಂದ ಹೊರಬರಲು ಜನಸಾಮಾನ್ಯರಲ್ಲಿ ಜಾಗೃತಿಗಾಗಿ ಹಳ್ಳಿಗಳಲ್ಲಿ ಈ ಪಾದಯಾತ್ರೆ ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅ.6ರಂದು ಉಡುಪಿ ಜಿಲ್ಲೆಯ ಕುರ್ಕಾಲು ಸುಭಾಸ್ ನಗರ ಜಂಕ್ಷನ್‌ನಿಂದ ಕುಂಜಾರುಗಿರಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದವರೆಗೆ 150 ಗಾಂಧಿ ಸಂಕಲ್ಪ ಯಾತ್ರೆಯಡಿ ಸುಮಾರು 3 ಕಿ.ಮೀ. ಪಾದಯಾತ್ರೆ ಮಾಡಿ ಅವರು ಮಾತನಾಡಿದರು.
ಕಾಪು ಕ್ಷೇತ್ರ ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾಗುರುರಾಜ್, ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ಉಡುಪಿ, ದ.ಕ., ಕೊಡಗು ಬಿಜೆಪಿ ಉಸ್ತುವಾರಿ ಕೆ. ಉದಯ ಕುಮಾರ್ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ ಕುತ್ಯಾರು, ಸಂಧ್ಯಾರಮೇಶ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಎಸ್. ಶೆಟ್ಟಿ, ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಪಾಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ, ಪವಿತ್ರಾ ಆರ್. ಶೆಟ್ಟಿ, ಮಹಿಳಾ ಮೋರ್ಚಾ ಕ್ಷೇತ್ರ ಪ್ರ|ಕಾರ್ಯದರ್ಶಿ ಸುಮಾ ಯು. ಶೆಟ್ಟಿ ಕುರ್ಕಾಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ರಾವ್, ಇನ್ನಂಜೆ ಗ್ರಾ.ಪಂ. ಉಪಾಧ್ಯಕ್ಷೆ ಮಾಲಿನಿ ಶೆಟ್ಟಿ , ಗಿರಿಧರ ಐತಾಳ್, ಗ್ರಾ.ಪಂ. ಸದಸ್ಯರು ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು
ವರ್ಷಾಂತ್ಯದಲ್ಲಿ ಸಮಾರೋಪ
ಪರಿಸರ ಸಂರಕ್ಷಣೆ, ಅದೇ ರೀತಿ ನೀರಿನ ಹನಿ ನೀರನ್ನೂ ಉಳಿಸುವ ಸಲುವಾಗಿ ಜಲಮರುಪೂರಣ, ಹನಿ ನೀರಾವರಿ ಸ್ವತ್ಛತೆ ಪರಿಸರ ಕಾಪಾಡಲು ವಿಶೇಷ ಆದ್ಯತೆ ನೀಡುತ್ತಿದ್ದು,ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯ ಸಂಭ್ರಮಾಚರಣೆಯ ಸಲುವಾಗಿ ವರ್ಷ ಪರ್ಯಂತ ಗಾಂಧೀಜಿ ಅವರ ಸರಳ ಜೀವನ, ಆದರ್ಶ, ಸ್ವತ್ಛತೆಯನ್ನು ಪಾಲಿಸಲು ತೀರ್ಮಾನಿಸಲಾಗಿದೆ. ಈ ಸಂಭ್ರಮಾಚರಣೆ ಆಚರಿಸಿ ವರ್ಷಾಂತ್ಯದಲ್ಲಿ ಸಮಾರೋಪವನ್ನು ನಡೆಸಲಾಗುತ್ತದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.