Advertisement

ಗೋವಾದಲ್ಲಿ ನಿಮ್ಮ ಎಂಜಾಯ್ ನಿಂದ ನಮಗೆ ಜಯ; ದಿಗ್ವಿಜಯ್ ಗೆ ಪರ್ರಿಕರ್!

06:48 PM Mar 16, 2017 | Team Udayavani |

ಗೋವಾ: ನೀವು ಗೋವಾಕ್ಕೆ ಬರೇ ಮೋಜು ಮಾಡಲು ಬಂದಿದ್ದರಿಂದ ಈ ಫಲಿತಾಂಶ ಬರಲು ಕಾರಣವಾಯ್ತು! ಇದು ನೂತನ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಕಾಲೆಳೆದ ಪರಿ!

Advertisement

ಗುರುವಾರ ಗೋವಾ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಮನೋಹರ್ ಪರ್ರಿಕರ್ ಅವರು 22 ಮತ ಗಳಿಸುವ ಮೂಲಕ ಬಹುಮತ ಸಾಬೀತುಪಡಿಸಿದ್ದರು. ಕಾಂಗ್ರೆಸ್ ಮುಖಭಂಗ ಅನುಭವಿಸಿತ್ತು.

ವಿಶ್ವಾಸಮತದಲ್ಲಿ ಕಾಂಗ್ರೆಸ್ ಪರಾಭವಗೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಪರ್ರಿಕರ್, ನೀವು(ದಿಗ್ವಿಜಯ್ ಸಿಂಗ್) ಗೋವಾಕ್ಕೆ ಕೇವಲ ಎಂಜಾಯ್ ಮಾಡಲು ಬಂದಿದ್ದೀರಿ ವಿನಃ ಪಕ್ಷದ ಪರವಾಗಿ ಶ್ರಮವಹಿಸಿ ಕಾರ್ಯ ನಿರ್ವಹಿಸಲು ಅಲ್ಲ ಎಂದು ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ.

ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು ಬೇಕಾದಷ್ಟು ಸದಸ್ಯರ ಬೆಂಬಲ ಇರಲಿಲ್ಲವಾಗಿತ್ತು. ಆದರೆ ನೀವು ಗೋವಾಕ್ಕೆ ಮೋಜು ಮಾಡಲು ಬಂದಿದ್ದರಿಂದ ಈ ಫಲಿತಾಂಶ ಬರುವಂತಾಗಿದೆ ಎಂದು ಗೋವಾ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಗೆ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಮನೋಹರ್ ಪರ್ರಿಕರ್ ಅವರನ್ನು ಸೋಲಿವಷ್ಟು ಸದಸ್ಯರ ಬೆಂಬಲ ಇದೆ ಎಂದು ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದರು. ಆದರೆ ಬಿಜೆಪಿಗೆ ಎಷ್ಟು ಬಹುಮತ ಇದೆ ಎಂಬುದು ಇಂದು ಬೆಳಗ್ಗೆ ವಿಶ್ವಾಸಮತ ಯಾಚನೆಯಲ್ಲಿ ಸಾಬೀತಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next