Advertisement

ಈ ಸರ್ಕಾರ ತನಿಖೆ ಮಾಡಿಸುವುದರಲ್ಲೇ ತಲ್ಲೀನವಾಗಿದೆ : ದಿನೇಶ್ ಗುಂಡೂರಾವ್

02:50 PM Sep 17, 2019 | Suhan S |

ಬೆಂಗಳೂರು: ಇವತ್ತಿನ ಸರ್ಕಾರ ಸತ್ತು ಬಿದ್ದಿದೆ. ಹಿಂದಿನ ಸರ್ಕಾರದ ಯೋಜನೆಗಳನ್ನು ತನಿಖೆ ಮಾಡುವುದರಲ್ಲಿಯೇ ಹೆಚ್ಚು ತಲ್ಲೀನವಾಗಿದೆ. ಮೈತ್ರಿ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಡೂರಾವ್ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು  ಕೇಂದ್ರದವರು ಸಿಎಂಗೆ ಮರ್ಯಾದೆ ಕೊಡ್ತಿಲ್ಲ. ಮಂತ್ರಿಗಳು ಮರ್ಯಾದೆ ಕೊಡ್ತಿಲ್ಲ. ಈ ಸರ್ಕಾರ ಬಂದ ಮೇಲೆ ಜನರಿಗೆ ಭ್ರಮ ನಿರಸನ ಆಗಿದೆ. ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸುವ ಬಯಕೆ ಹೊಂದಿದ್ದರೆ ಅವರ ಇಚ್ಚೆ.  ನಾವು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಎಲ್ಲ ರೀತಿಯ ತಯಾರಿ ನಡೆಸುತ್ತಿದ್ದೇವೆ. ಅನರ್ಹ ಶಾಸಕರ ಪ್ರಕರಣ ರಮೇಶ್ ಕುಮಾರ್ ಕಾನೂನಾತ್ಮಕವಾಗಿಯೇ ಕ್ರಮ. ಕೈಗೊಂಡಿದ್ದಾರೆ. ಅವರ ಆದೇಶವನ್ನು ಯಾವ ಕೋರ್ಟ್ ಗಳನ್ನು ಏಕಾ ಏಕಿ ತೆಗೆದು ಹಾಕಲು ಸಾಧ್ಯವಿಲ್ಲ ಎಂದರು.

ಅವರಿಗೆ ಬಿಜೆಪಿ ನಂಬದಂತೆ ಹೇಳಿದ್ದೆ. ಕಾಂಗ್ರೆಸ್ ನಲ್ಲಿ ರಾಜರಾಗಿದ್ದರು. ಈಗ ಅವರ ಪರಿಸ್ಥಿತಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ. ಅನರ್ಹ ಶಾಸಕರು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರು ಬಿಜೆಪಿ ಜೊತೆ ಸೇರಿಕೊಂಡು ರಾಜಕಾರಣ ರೂಪಿಸಿಕೊಳ್ಳಲಿ ಎಂದು ಹೇಳಿದರು.

ಶಿವಕುಮಾರ್ ವಿಚಾರದಲ್ಲಿ ಪಕ್ಷ ಅವರೊಂದಿಗೆ ನಿಂತಿದೆ. ಕುಮಾರಸ್ವಾಮಿ ಅವರೂ ಡಿಕೆಶಿ ಪರವಾಗಿ ಮಾತನಾಡಿದ್ದಾರೆ. ಅವರ ಬಗ್ಗೆ ಬೇರೆ ಏನು ಮಾತನಾಡುವುದಿಲ್ಲ. ಡಿಕೆಶಿಗೆ ನ್ಯಾಯಾಲಯದಲ್ಲಿ ಜಯ ಸಿಗುವ ಭರವಸೆ ಇದೆ, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲು ಸಿಎಸ್ ಮೌಖಿಕ ಅನುಮತಿ ನೀಡಿದ್ದರು ಆದರೆ, ಲಿಖಿತ ರೂಪದಲ್ಲಿ ಅನುಮತಿ ನೀಡಲು ನಿರಾಕರಿಸಿದ್ದಾರೆ. ಬಹುಶಃ ಇದರಲ್ಲಿಯೂ ಬಿಜೆಪಿ.ರಾಜಕಾರಣ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next