Advertisement

ಈ ಬಾಲಕಿ 11ರಲ್ಲೇ ಪತ್ರಕರ್ತೆ

07:40 AM Dec 06, 2017 | Team Udayavani |

ವಾಷಿಂಗ್ಟನ್‌: ಪತ್ರಿಕೋದ್ಯಮದತ್ತ 11 ವರ್ಷದಲ್ಲೇ ಆಸಕ್ತಿ ಮೂಡಿಸಿಕೊಂಡಿರುವ ಅಮೆರಿಕ ಪೆನ್ಸಿಲ್ವೇನಿಯದ ಹಿಲ್ಡೆ ಕೇಟ್‌ ಲೈಸಿಯಾಕ್‌, ಸ್ವಂತವಾಗಿ ನಿಯತಕಾಲಿಕೆ ನಡೆಸುತ್ತಿದ್ದಾಳೆ. ಒರೇಂಜ್‌ ಸ್ಟ್ರೀಟ್‌ ನ್ಯೂಸ್‌ ಎಂಬ ಮಾಸಿಕವನ್ನು ಕಳೆದ ಹಲವು ವರ್ಷಗಳಿಂದಲೂ ಆಕೆ ನಡೆಸುತ್ತಿದ್ದಾಳೆ. ನ್ಯೂಯಾರ್ಕ್‌ ಡೈಲಿ ನ್ಯೂಸ್‌ನಲ್ಲಿ ಪತ್ರಕರ್ತರಾಗಿದ್ದ ತಂದೆಯ ಜತೆಗೆ ವರದಿಗಾರಿಕೆಗೆ ಕುತೂಹಲದಿಂದ ತೆರಳುತ್ತಿದ್ದ ಹಿಲ್ಡೆ, ತಂದೆ ಪತ್ರಿಕಾವೃತ್ತಿ ತೊರೆದ ನಂತರ ತಾನೇ ಮಾಸಿಕ ಪತ್ರಿಕೆ ಸ್ಥಾಪಿಸಿ ವರದಿಗಾರಿಕೆ ಮುಂದುವರಿಸಿದ್ದಾಳೆ.

Advertisement

ಪ್ರತಿ ಆವೃತ್ತಿಯಲ್ಲೂ ಏಳರಿಂದ ಎಂಟು ಸುದ್ದಿಗಳು, ಒಂದು ಕಥೆ ಇರುತ್ತದೆ. ಇವೆಲ್ಲವನ್ನೂ ಹಿಲ್ಡೆ ಬರೆಯುತ್ತಾಳೆ. ಆರಂಭದಲ್ಲಿ ತಂದೆ ಸುದ್ದಿಗಳನ್ನು ಸಂಪಾದಿಸುವಲ್ಲಿ ಸಹಾಯ ಮಾಡುತ್ತಿದ್ದರು. ಈಗ ಕೇವಲ ಸುದ್ದಿಯ ವಿನ್ಯಾಸದಲ್ಲಷ್ಟೇ ಸಹಾಯ ಮಾಡುತ್ತಾರೆ. ಈಕೆಯ ಸೋದರಿ ಇಝಿ ಕೂಡ ವರದಿಗಾರಿಕೆಯಲ್ಲಿ ಹಾಗೂ ವೆನ್‌ಸೈಟ್‌ ನಿರ್ವಹಣೆ ಮತ್ತು ವಿಡಿಯೋ ಅಪ್‌ಲೋಡ್‌ಗೆ ಸಹಾಯ ಮಾಡುತ್ತಾಳೆ. ಪೆನ್ಸಿಲ್ವೇನಿಯಾ ಪ್ರಾಂತ್ಯದಲ್ಲಿ ಯಾವುದೇ ಪ್ರಮುಖ ಘಟನೆ ನಡೆದರೂ ಅಲ್ಲಿಗೆ ಹಾಜರಾಗಿ ವರದಿ ಮಾಡುತ್ತಾಳೆ ಜತೆಗೆ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ತನ್ನ ಮಾಸಿಕದಲ್ಲಿ ವರದಿ ಮಾಡುತ್ತಾಳೆ. ಕಳೆದ ವರ್ಷ ಈ ಭಾಗದಲ್ಲಿ ನಡೆದ ಕೊಲೆಯೊಂದರ ವರದಿ ತೀವ್ರ ಸಂಚಲನ ಮೂಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next