Advertisement
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಆಪರೇಷನ್ ಕಮಲದ ಅಗತ್ಯವಿಲ್ಲ. ಮೈತ್ರಿ ಪಕ್ಷಗಳೆರಡೂ ತಾವೇ ಖುದ್ದು ಆಪರೇಷನ್ ಮಾಡಿಕೊಳ್ತಾರೆ. ಬಳಿಕ, ಒಮ್ಮೇಲೆ ವಿಭಜನೆಯಾಗುತ್ತದೆ. ತನ್ಮೂಲಕ ಸರ್ಕಾರ ತಂತಾನೆ ಪತನವಾಗಲಿದೆ. ಉಪಚುನಾವಣೆ ನಂತರ ಮೈತ್ರಿ ಸರ್ಕಾರ ಪತನ ಖಚಿತ. ಮೈತ್ರಿ ಸರ್ಕಾರ ಪತನಗೊಂಡ ನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ರಾಜಕೀಯದ ಹೊಸ ಅಧ್ಯಾಯ ಆರಂಭವಾಗಲಿದೆ ಎಂದರು.ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಸಮಯಸಾಧಕರು. ಅವರಪ್ಪನ ಆಣೆಗೂ ಕುಮಾರಸ್ವಾಮಿ ಸಿಎಂ ಆಗೊಲ್ಲ ಎಂದಿದ್ದ ಸಿದ್ದರಾಮಯ್ಯ, ಅವರಪ್ಪನ (ದೇವೇಗೌಡರು) ಮೂಲಕ ತಬ್ಬಿಕೊಂಡಿದ್ದಾರೆ. ಈ ಎಲ್ಲಾ ನಾಟಕವನ್ನು ಜನರು ನೋಡುತ್ತಿದ್ಧಾರೆ. ಸೂಕ್ತ ಕಾಲದಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು.