ಚಿಕ್ಕಮಗಳೂರು/ಕಳಸ: ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಒಳ್ಳೆ ಫಲಿತಾಂಶ ಬರಲಿದೆ. ಈ ಚುನಾವಣೆ ಶೋಭಾ ಕರಂದ್ಲಾಜೆ, ದೀಪಕ್ ದೊಡ್ಡಯ್ಯ ಚುನಾವಣೆಯಲ್ಲ. ಕರ್ನಾಟಕ ಅಭಿವೃದ್ಧಿಯ ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಶುಕ್ರವಾರ ಜಿಲ್ಲೆಯ ಮೂಡಿಗೆರೆ ತಾಲೂಕು ಕಳಸ ಪಟ್ಟಣದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಈ ಚುನಾವಣೆ ಕರ್ನಾಟಕ ಮುಂದಿನ ಭವಿಷ್ಯದ ಚುನಾವಣೆ. ಸರಿಯಾದ ಬಟನ್ ಒತ್ತಿದರೇ ಸರಿಯಾದ ಸರ್ಕಾರ ಬರುತ್ತದೆ. ಇಲ್ಲದಿದ್ದರೇ ಭ್ರಷ್ಟಚಾರದ ಸರ್ಕಾರ ಬರುತ್ತದೆ. ಆದ್ದರಿಂದ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮೀಸಲಾತಿಯನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಾಪಸ್ಸು ಪಡೆಯುತ್ತೇವೆ ಎನ್ನುತ್ತಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದರೂ. ಸಿದ್ದರಾಮಯ್ಯ ಅವರು ಅವರ ಪಿಎಫ್‌ಐ ಕಾರ್ಯ ಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಸ್ಸು ಪಡೆದರು ಎಂದರು.
Related Articles
2018ರಲ್ಲಿ ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ, ಅರ್ಕಾವತಿ ಹಗರಣ, ಪ್ಲೇವೋವರ್ ಸ್ಕಾö್ಯಮ್, ಬಿಬಿಎಂಪಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಗರಣ ನಡೆದವು. ಸಿದ್ದರಾಮ ಯ್ಯ ಅವಧಿಯಲ್ಲಿ ಇಷ್ಟೇಲ್ಲ ಭ್ರಷ್ಟಚಾರ ನಡೆದಿದ್ದರೂ ಭ್ರಷ್ಟಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನು ತಪ್ಪು ಮಾಡಿಲ್ಲ, ಸತ್ಯವಾಗಿದ್ದೇನೆ ಎಂದು ಹೇಳಲಿ. ಅವರ ಮೇಲೆ ಪ್ರಕರಣಗಳಿಲ್ಲವೇ, ಜಾಮೀನಿನ ಮೇಲೆ ಹೊರಗೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಯಡಿಯೂ ರಪ್ಪ ಅವರು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದರೂ. ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣ ನಿರ್ಮಾಣ ನಿಲ್ಲಿಸಲು ಮುಂದಾಗಿದ್ದರು ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಲಿಂಗಾಯತರಿಗೆ ಶೇ.೨ರಷ್ಟು ಮೀಸಲಾತಿ ನೀಡಿ ದ್ದೇವೆ. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮೀಸಲಾತಿಯನ್ನು ಹಿಂಪಡೆಯುತ್ತೇವೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಲಿಂಗಾಯತರ ಬಗ್ಗೆ ಚಿಂತೆಯಾಗಿದೆ. ನಿಜಲಿಂಗಪ್ಪ, ವೀರೆಂದು ಪಾಟೀಲ್‌ಗೆ ಕಾಂಗ್ರೆಸ್ ಏನು ಮಾಡಿದೆ ಗೊತ್ತಿಲ್ಲ, ಆದರೆ, ಸಿದ್ದರಾಮಯ್ಯ ಕಾಲದಲ್ಲಿ ರಾಜ್ಯದಲ್ಲಿ ದಂಗೆ ಯಾಗಿದೆ ಎಂದು ದೂರಿದರು.
ಯಡಿಯೂರಪ್ಪ ಅವರು ಪಿಎಫ್ ಸಂಘಟನೆಯ ಮೇಲೆ 175 ಪ್ರಕರಣ ಹಾಕಿಸಿದ್ದರು. ಸಿದ್ದರಾಮಯ್ಯ ಪ್ರಕರಣಗಳನ್ನು ಹಿಂಪಡೆದರು. ಇದಕ್ಕೆಲ್ಲ ಸಿದ್ದರಾಮಯ್ಯ ಅವರು ಉತ್ತರ ನೀಡಬೇಕಿದೆ. ಕಾಂಗ್ರೆಸ್ ಅಧಿ ಕಾರಕ್ಕೆ ಬಂದರೇ ಎಲ್ಲವನ್ನೂ ವಾಪಸ್ ಪಡೆಯುತ್ತಾರೆ ಎಂದು ಗುಡುಗಿದರು.
ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಕೇಂದ್ರ ಸಚಿವೆ ಶೋಭಾ ಕರಂದ್ಲಜೆ, ಬಿಜೆಪಿ ಮೂಡಿಗೆರೆ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಸೇರಿದಂತೆ ಅನೇಕರು ಇದ್ದರು.