Advertisement
ಎಸ್‌ಡಿಪಿಐ ರಾಜ್ಯ ಮುಖಂಡ ಶಾಫಿ ಬೆಳ್ಳಾರೆ ಮಾತನಾಡಿ, ಈ ಚುನಾವಣೆ ಸಂವಿಧಾನ, ಪ್ರಜಾಪ್ರಭುತ್ವ ಉಳಿವಿನ ಚುನಾವಣೆ. ಜನವಿರೋಧಿ, ಕೋಮುವಾದಿ ಬಿಜೆಪಿ ಪಕ್ಷವನ್ನು ತೊಲಗಿಸಿ ಜನಪರ ಸರಕಾರದ ಸ್ಥಾಪನೆಗಾಗಿ ಎಸ್‌ಡಿಪಿಐ ಅಭ್ಯರ್ಥಿಯ ಗೆಲುವು ಅನಿವಾರ್ಯ ಎಂದರು.
ಅಯೋಧ್ಯೆ ಸ್ಥಳದ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಹೊತ್ತಿನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಬಿಜೆಪಿ ಹೊರಟಿತ್ತು. ಆ ವೇಳೆ ಜಾತ್ಯತೀತ ಮುಖವಾಡ ಧರಿಸಿದ್ದ ಕಾಂಗ್ರೆಸ್ ಕೂಡ ಬಿಜೆಪಿ ನಡೆಯನ್ನು ಖಂಡಿಸಲಿಲ್ಲ ಎಂದರು. ಎಸ್‌ಡಿಪಿಐ ನ್ಯಾಯಾಲಯದ ಕಾನೂನು ರಕ್ಷಣೆಗೆ ಸಿದ್ಧವಿರುವುದಾಗಿ ಘೋಷಿಸಿದ ಕಾರಣ ಬಿಜೆಪಿ ಶಿಲಾನ್ಯಾಸದಿಂದ ಹಿಂದೆ ಸರಿದಿತ್ತು ಎಂದು ಹೇಳಿದರು. ಅಭ್ಯರ್ಥಿ ಇಲ್ಯಾಸ್ ಮೊಹಮ್ಮದ್ ತುಂಬೆ ಮಾತನಾಡಿ, ಜಿಲ್ಲೆ ಸಮಗ್ರ ಅಭಿವೃದ್ಧಿಗೆ, ಶಾಂತಿ, ನೆಮ್ಮದಿಗೆ ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
Related Articles
Advertisement
ಗೆಲ್ಲುವುದಿಲ್ಲವೆಂದು ವಿದೇಶ ಪ್ರವಾಸ!ಐದು ವರ್ಷ ಕಳೆದರೆ ಮತ್ತೆ ತಾನು ಗೆಲ್ಲುವುದಿಲ್ಲ ಎನ್ನುವುದು ಮೋದಿಗೆ ಖಚಿತವಾದ ಕಾರಣ ವಿದೇಶಗಳಿಗೆ ಸುತ್ತಾಡಿದ್ದಾರೆ ಎಂದು ಟೀಕಿಸಿದ ಶಾಫಿ ಬೆಳ್ಳಾರೆ, ಅಲ್ಪಸಂಖ್ಯಾಕರ, ದಲಿತರನ್ನು ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಮೋದಿ ಸರಕಾರ ಸಂವಿಧಾನ ವಿರೋಧಿ. ನೀರವ್ ಮೋದಿ, ಮಲ್ಯ ಅವರು ಕೋಟ್ಯಂತರ ರೂ. ವಂಚಿಸಿ ಪರಾರಿಯಾಗಲು ರಕ್ಷಣೆ ನೀಡಿದ್ದೇ ಮೋದಿ ಅವರು ಕಾವಲುದಾರಿಕೆ ಎಂದು ಶಾಫಿ ಬೆಳ್ಳಾರೆ ಹೇಳಿದರು.