Advertisement

ಸಿದ್ದು ಸಿಎಂ ಆಗಲು ಈ ಚುನಾವಣೆ ದಿಕ್ಸೂಚಿ : ರೇವಣ್ಣ

08:24 PM Apr 09, 2021 | Team Udayavani |

ಗೋಕಾಕ: ಐದು ವರ್ಷ ಹಲವಾರು ಜನಪರ ಯೋಜನೆಗಳ ಅನುಷ್ಠಾನದೊಂದಿಗೆ ಕಳಂಕ ರಹಿತ ಆಡಳಿತ ನೀಡಿದ ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಈ ಲೋಕಸಭಾ ಉಪಚುನಾವಣೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಸಚಿವ ಎಚ್‌.ಎಮ್‌.ರೇವಣ್ಣ ಹೇಳಿದರು.

Advertisement

ಬುಧವಾರ ಸಂಜೆ ನಗರದ ಬೀರೇಶ್ವರ ಸಮುದಾಯ ಭವನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಮತಯಾಚಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಜನಸಾಮಾನ್ಯರಿಗಾಗಿ ಜಾರಿಗೆ ತಂದ ಭಾಗ್ಯಗಳ ಸರಮಾಲೆಯ ಯೋಜನೆಗಳು ಇಂದಿಗೂ ಪ್ರಚಲಿತದಲ್ಲಿದ್ದು, ಅವುಗಳ ಬಗ್ಗೆ ಜನಸಾಮಾನ್ಯರಿಗೂ ಅರಿವು ಇದೆ. ಅವು ಸತೀಶ ಜಾರಕಿಹೊಳಿ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಪ್ರಧಾನಿಯಾಗಿ ಮೋದಿ ಅವರ ಕೊಡುಗೆ ಶೂನ್ಯವಾಗಿದೆ. ಬಾಂಗ್ಲಾ ದೇಶ ಸ್ವತಂತ್ರ್ಯ ಹೊರಾಟದಲ್ಲಿ ಜೈಲಿಗೆ ಹೋಗಿದ್ದೆ ಎಂಬ ಮೋದಿ ಹೇಳಿಕೆಗೆ ವ್ಯಂಗ್ಯ ಮಾಡಿದ ಅವರು ಬಾಂಗ್ಲಾ ವಿಮೋಚನೆಯಲ್ಲಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಪಾತ್ರ ಮಹತ್ವದ್ವಾಗಿದೆ.

ಈ ಉಪಚುನಾವಣೆ ಚಿಕ್ಕಮಗಳೂರು ಚುನಾವಣೆಯನ್ನು ನೆನಪಿಸುತ್ತಿದ್ದು, ಕರ್ನಾಟಕ ಸದಾ ಕಾಂಗ್ರೆಸ್‌ ಪರವಾಗಿದೆ ಎಂಬುದನ್ನು ತೋರಿಸಿಕೊಡುವಂತೆ ಮತದಾರರಲ್ಲಿ ಕೋರಿದರು. ಮುಖಂಡರಾದ ಡಾ| ರಾಜೇಂದ್ರ ಸಣ್ಣಕ್ಕಿ, ಸೋಮಣ್ಣ ಬೇವಿನಮರದ, ಲಕ್ಷ್ಮಣರಾವ ಚಿಂಗಳೆ, ಶ್ರೀಶೈಲ ದಳವಾಯಿ, ಸಿದ್ದಲಿಂಗ ದಳವಾಯಿ, ರಕ್ಷಿತಾ ಈಟಿ, ಡಾ: ವನಿತಾ, ವಿಠ್ಠಲ ಪಾಟೀಲ, ವಿಠ್ಠಲ ಚಂದರಗಿ, ಮಹಾದೇವ ತುಕ್ಕಾನಟ್ಟಿ, ಸಂಗಮೇಶ ಬಬಲೇಶ್ವರ, ಅರವಿಂದ ದಳವಾಯಿ, ನಜೀರ ಶೇಖ, ಮೋಸಿನ್‌ ಖೋಜಾ, ಅಶೋಕ ಪಾಟೀಲ, ವಿವೇಕ ಜತ್ತಿ, ಪ್ರಕಾಶ ಡಾಂಗೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next