Advertisement
ಇದನ್ನೂ ಓದಿ:Seer Arrested: ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ದೈಹಿಕ ದೌರ್ಜನ್ಯ; ಸ್ವಾಮೀಜಿ ಬಂಧನ
Related Articles
Advertisement
ಮೂಲಗಳ ಪ್ರಕಾರ, ವೃತ್ತಿಪರ ವೈದ್ಯರಲ್ಲದ ಜನರು ಆಸ್ಪತ್ರೆ, ಕ್ಲಿನಿಕ್ ಮತ್ತು ಪೆಥಾಲಜಿ ಪ್ರಯೋಗಾಲಯ ನಡೆಸಲು ಆರೋಗ್ಯ ಇಲಾಖೆಯಿಂದ ವೈದ್ಯರ ಹೆಸರಿನಲ್ಲಿ ಪರವಾನಿಗೆ ಪಡೆಯುತ್ತಾರೆ ಎಂದು ತಿಳಿಸಿದೆ.
ಆಸ್ಪತ್ರೆ, ಕ್ಲಿನಿಕ್ ಗಳ ಲೈಸೆನ್ಸ್ ನವೀಕರಣ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕವೇ ನಡೆಸಬೇಕೆಂದು ಉತ್ತರಪ್ರದೇಶ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ನಂತರ ಈ ಹಗರಣ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ.
ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ, 2022-2023ರ ಸಾಲಿನಲ್ಲಿ 1,269 ಮೆಡಿಕಲ್ ಸೆಂಟರ್ಸ್ ಗಳು ರಿಜಿಸ್ಟರ್ಡ್ ಆಗಿತ್ತು. ಇದರಲ್ಲಿ 494 ಆಸ್ಪತ್ರೆಗಳು, 493 ಕ್ಲಿನಿಕ್ಸ್, 170 ಪೆಥಾಲಜಿ ಲ್ಯಾಬ್ಸ್, 104 ಡಯಾಗ್ನೋಸ್ಟಿಕ್ಸ್ ಸೆಂಟರ್ಸ್ ಹಾಗೂ ಒಂದು ಡಯಾಲಿಸಿಸ್ ಸೆಂಟರ್ ಸೇರಿದೆ.
2023-2024ರ ಸಾಲಿನ ಪರವಾನಿಗೆ ನವೀಕರಣ ಅರ್ಜಿಗಳ ಪರಿಶೀಲನೆ ನಂತರ ಈವರೆಗೆ 570 ಆಸ್ಪತ್ರೆ ಮತ್ತು ಕ್ಲಿನಿಕ್ಸ್ ಗಳ ಪರವಾನಿಗೆ ನವೀಕರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.