Advertisement

ಅಮೆಜಾನ್‌ ಮಾಲಕ ಈಗ ವಿಶ್ವದ 2ನೇ ಅತಿ ಶ್ರೀಮಂತ!

01:54 AM Mar 31, 2017 | Karthik A |

ಹೊಸದಿಲ್ಲಿ: ಆನ್‌ಲೈನ್‌ ಮಾರುಕಟ್ಟೆ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಆಗಿದೆ ಎನ್ನುವಂತೆ ಗಮನ ಸೆಳೆದಿರುವವರಲ್ಲಿ ಒಬ್ಬರಾದ ಅಮೆಜಾನ್‌ ಸ್ಥಾಪಕ ಜೆಫ್ ಬೆಝಾನ್ಸ್‌ ಈಗ ವಿಶ್ವದ ಅತೀ ಶ್ರೀಮಂತರಲ್ಲಿ ದ್ವಿತೀಯರೆನಿಸಿಕೊಂಡಿದ್ದಾರೆ. ಅಮೆನ್ಸಿಯೋ ಒರ್ಟೆಗಾ ಮತ್ತು ವಾರನ್‌ ಬಫೆಟ್‌ರನ್ನೂ ಹಿಂದಿಕ್ಕಿದ್ದಾರೆ. 53 ವರ್ಷದ ಜೆಫ್ ಬೆಝಾನ್ಸ್‌, ದುಬೈ ಮೂಲದ ಆನ್‌ಲೈನ್‌ ರಿಟೇಲರ್‌ ಸಾಕ್‌.ಕಾಂ ಕೊಳ್ಳಲು ಮುಂದಾಗುತ್ತಿದ್ದಂತೆ ವಿಶ್ವಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಬ್ಲೂಮ್‌ಬರ್ಗ್‌ ಶ್ರೀಮಂತರ ಪಟ್ಟಿಯಲ್ಲಿ ಹೆಚ್ಚುಕಡಿಮೆ 1,15,916 ಕೋಟಿ ರೂ. ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಮೌಲ್ಯ ಹೆಚ್ಚಿಸಿಕೊಂಡಿರುವ ಜೆಫ್ ಅವರ ಈಗಿನ ಒಟ್ಟಾರೆ ಆಸ್ತಿ 4,77,565 ಕೋಟಿ ರೂ. ಆಗಿದೆ. ಮೊದಲ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಇದ್ದಾರೆ. ಅವರ ಒಟ್ಟು ಆಸ್ತಿ 5,57,787 ಕೋಟಿ ರೂ. ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next