Advertisement

ಈ ಕಾಕ್‌ಟೈಲ್‌ ಕುಡಿದ್ರೆ ಚಿರಯೌವನ ಖಚಿತ!- ಯೌವನಕ್ಕೆ ಮರಳಲು ಕೆಮಿಕಲ್‌ ಕಾಕ್‌ಟೈಲ್‌

08:32 PM Jul 16, 2023 | Team Udayavani |

ವಾಷಿಂಗ್ಟನ್‌: ವಿಜ್ಞಾನದ ಆವಿಷ್ಕಾರಗಳು ಮುಂದುವರಿದಂತೆಲ್ಲ, ಅಸಾಧ್ಯವೆಂಬುದೂ ಸಾಧ್ಯವಾಗುತ್ತಿದೆ. ಇದೀಗ ಹಾರ್ವರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂಥದ್ದೇ ಅಚ್ಚರಿ ಕಾರ್ಯವೊಂದಕ್ಕೆ ಮುನ್ನುಡಿ ಬರೆದಿದ್ದು, ಮನುಷ್ಯನ ವಯಸ್ಸನ್ನೇ ಯೌವನಕ್ಕೆ ಬದಲಿಸುವ ಔಷಧಿಯ ಕಾಕ್‌ಟೈಲ್‌ಗ‌ಳನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದ್ದಾರೆ.

Advertisement

“ಕೆಮಿಕಲ್‌ ಇಂಡ್ನೂಸ್ಡ್ ರೀ ಪ್ರೋಗ್ರಾಮಿಂಗ್‌ ಟು ರಿವರ್ಸ್‌ ಸೆಲ್ಯೂಲರ್‌ ಏಜಿಂಗ್‌’ ಶೀರ್ಷಿಕೆಯ ಅಧ್ಯಯನ ವರದಿಯನ್ನು ಏಜಿಂಗ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ವಿಜ್ಞಾನಿಗಳ ತಂಡವು 6 ಕೆಮಿಕಲ್‌ ಕಾಕ್‌ಟೈಲ್‌ ಅಭಿವೃದ್ಧಿಪಡಿಸಿದ್ದು, ಇದು ಮನುಷ್ಯರು ಹಾಗೂ ಇಲಿಗಳ ಚರ್ಮದಲ್ಲಿರುವ ಕೋಶಗಳಲ್ಲಿ ವಯಸ್ಸನ್ನು ಯೌವನಕ್ಕೆ ಮರಳಿಸಿದೆ ಎನ್ನಲಾಗಿದೆ.

ಹಾರ್ವರ್ಡ್‌ ಸಂಶೋಧಕ ಡೇವಿಡ್‌ ಸಿಂಕ್ಲೇರ್‌ ಕೂಡ ಟ್ವಿಟರ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದು, ವಂಶವಾಹಿ ಚಿಕಿತ್ಸೆ ಮೂಲಕ ಯೌವನಕ್ಕೆ ಮರಳಲು ಸಾಧ್ಯವೆಂಬುದನ್ನು ನಮ್ಮ ಈ ಸಂಶೋಧನೆ ಸಾಬೀತುಪಡಿಸಿದೆ. ಇದಕ್ಕಾಗಿ ಕೆಮಿಕಲ್‌ ಕಾಕ್‌ಟೈಲ್‌ ಅಭಿವೃದ್ಧಿ ಪಡಿಸಿದ್ದೇವೆ. ಇದನ್ನು ಮಾತ್ರೆಗಳನ್ನಾಗಿಯೂ ಪರಿವರ್ತಿಸಬಹುದು ಎಂದಿದ್ದಾರೆ. ಪ್ರತಿ ಕಾಕ್‌ಟೈಲ್‌ನಲ್ಲಿ ವಿವಿಧ 5ರಿಂದ 7 ರಾಸಾಯನಿಕ ಅಂಶಗಳು ಒಳಗೊಂಡಿದ್ದು, ಈ ಕಾಕ್‌ಟೈಲ್‌ಗ‌ಳ ಅಭಿವೃದ್ಧಿಗಾಗಿ ಸತತ 3 ವರ್ಷದಿಂದ ತಂಡ ಕಾರ್ಯನಿರ್ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next