Advertisement

ಈಕೆ ಶಾಂಪೂಗೆ ರೂಪದರ್ಶಿ; ಹಿಜಾಬ್‌ ಧರಿಸಿ ಜಾಹೀರಾತಿಗೆ ಪೋಸ್‌ 

11:01 AM Jan 20, 2018 | Team Udayavani |

ನವದೆಹಲಿ: ಇದೇ ಮೊದಲ ಬಾರಿಗೆ ಹಿಜಾಬ್‌ ಧರಿಸಿರುವ ಮಹಿಳೆಯೊಬ್ಬರು ಪ್ರಖ್ಯಾತ ಶಾಂಪೂ ಕಂಪನಿಯ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಹಿಜಾಬ್‌ ಧರಿಸಿದಾಕೆ ಕೇಶ ಸೌಂದರ್ಯದ ಬಗ್ಗೆ ಹೇಗೆ ಪ್ರಚಾರ ಮಾಡುತ್ತಾರೆ ಎಂದುಕೊಂಡಿರಾ? ಈ ಥರದ ಪೂರ್ವಗ್ರಹವನ್ನು ಹೋಗಲಾಡಿಸುವುದೇ ಈ ಜಾಹೀರಾತಿನ ಉದ್ದೇಶವಂತೆ. ಅದರಲ್ಲಿ ಕಾಣಿಸಿಕೊಂಡಿರುವ ಹಿಜಾಬ್‌ ಧಾರಿ ಮುಸ್ಲಿಂ ಮಹಿಳೆ ಅಮೇನಾ ಖಾನ್‌.

Advertisement

ಇವರು ಬ್ರಿಟನ್‌ ಮೂಲದ ಸೌಂದರ್ಯ ಕುರಿತ ಬ್ಲಾಗ್‌ ಬರಹಗಾರ್ತಿ. ತಲೆಗೆ ಗುಲಾಬಿ ಬಣ್ಣದ ಸ್ಕಾರ್ಫ್ ಧರಿಸಿ ಈ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. “ಇದೊಂದು ಮನಸ್ಥಿತಿಗಳನ್ನು ಬದಲಾ ಯಿಸುವ ಹೊಸ  ಪ್ರಚಾರ ಕಾರ್ಯಕ್ರಮ. ಸ್ಕಾರ್ಫ್ ತೆಗೆದಾಗ ಕೂದಲು ಹೊಳೆಯುತ್ತಿರಬೇಕು ಎಂದು ಬಯಸುತ್ತೇನೆ. ಸ್ಕಾರ್ಫ್ ಧರಿಸುವ ಮಹಿಳೆಯರು ಇದನ್ನೇ ಬಯಸುವುದು.

ಲೋರಿಯಲ್‌ ಪ್ಯಾರಿಸ್‌ನಂಥ ದೊಡ್ಡ ಕಂಪನಿಯ ಭಾಗವಾಗುತ್ತಿರುವುದರ ಬಗ್ಗೆ ಹೆಮ್ಮೆ ಇದೆ. ಅದರ ಕಳಾಹೀನ ಕೂದಲಿಗೆ ಹೊಳಪು ತರುವ ಶಾಂಪೂ ರೂಪದರ್ಶಿ ಆಗಿದ್ದೇನೆ’ ಎಂದಿದ್ದಾರೆ. “ಎಷ್ಟು ಉತ್ಪನ್ನಗಳು ಹಿಜಾಬ್‌ ಧರಿಸಿರುವ ಮಹಿಳೆಯನ್ನು ರೂಪದರ್ಶಿ ಮಾಡಿಕೊಂಡಿವೆ? ಕೂದಲ ಆರೈಕೆ ಸ್ವಯಂ ಆರೈಕೆಯ ಭಾಗ. ಹಿಜಾಬ್‌ ಧರಿಸಿದ ಮಾತ್ರಕ್ಕೆ ಕೂದಲ ಬಗ್ಗೆ ಕಾಳಜಿ ಇರುವುದಿಲ್ಲ ಎಂದಲ್ಲ’ ಎಂದಿದ್ದಾರೆ ಖಾನ್‌.

Advertisement

Udayavani is now on Telegram. Click here to join our channel and stay updated with the latest news.

Next