ಇಷ್ಟೆಲ್ಲಾ ಆದ್ಮೇಲೆ ನಮ್ಮೂರೇನೂ ಕಡಿಮೆಯೇ. ಮೂರು ಪಾರ್ಟಿ ಇದ್ದೇ ಇದೆ. ಒಂದು ಅವ್ರದ್ದು, ಇನ್ನೊಂದು ಇವ್ರದ್ದು. ಮತ್ತೂಂದು ನೋಟಾದ್ದು. ಇಂಡಿಪೆಂಡೆಂಟ್ ಅಪರೂಪ.
ಬೆಳಗ್ಗೆಯಿಂದ ರಾತ್ರಿವರೆಗೂ ವಾದ-ಪ್ರತಿವಾದ. ಸಂವಾದಕ್ಕೆ ನಾಲ್ಕು ವರ್ಷ ಎಂಟು ತಿಂಗಳು ನಿರಂತರವಾಗಿ ದುಡಿದಿದ್ದಕ್ಕೆ 60 ದಿನಗಳ ಗಳಿಕೆ ರಜೆ (ಇ.ಎಲ್.). ಇದರ ಮಧ್ಯೆ ಈ ಎರಡೂ ಪಾರ್ಟಿಯೋರು ವಾದ-ಪ್ರತಿವಾದ ಮಾಡಿ, ಸುಸ್ತಾದಾಗ ವೋಟು ಹಾಕೋದು ನೋಟಾಕ್ಕೆ !
ಮೊನ್ನೆ ತನಕ ಒಟ್ಟಾಗಿ ಹೋಗ್ತಾ ಇರೋರು ಈಗ ಎದುರು ಬದುರು ನಿಂತು ವಾದ ಮಾಡೌರೆ. ಇಬ್ಬರೂ ಗುರುತು ಇರಲಿ ಅಂತ ಹೆಗಲ ಮೇಲಿನ ಶಾಲಿನ ಬಣ್ಣ ಬದಲಾಯಿಸಿದ್ದಾರೆ. ಕಾಲೇಜಿನ ಭಾಷಣ ಸ್ಪರ್ಧೆಯ ತರಹ. ವಿಷಯದ ಪರವಾಗಿ ಇರುವವರು ಒಂದು ಬಣ್ಣ. ವಿರೋಧವಾಗಿರುವವರು ಮತ್ತೂಂದು ಬಣ್ಣ.
ಎರಡು ದಿನಗಳ ಹಿಂದೆ ದೇವಸ್ಥಾನದ ಕಲ್ಲಿನ ಮೇಲೆ ಈ ಪಾರ್ಟಿ ಪಾಲಿಟಿಕ್ಸ್ ಶುರುವಾಯಿತು. ಮೊದಲಿನವ, “ನೋಡಯ್ನಾ, ಈ ಬಾರೀನೂ ನಿಮ್ಮ ಲೀಡರು ಸೋಲೋದೇ. ಒಂದು ಬಾರಿಯೂ ಗೆದ್ದಿಲ್ಲ, ಈ ಬಾರಿಯೋ ಗೆಲ್ಲೋಲ್ಲ” ಎಂದ. ಇದನ್ನು ಕೇಳಿದ ಮತ್ತೂಬ್ಬನಿಗೆ ಕೋಪ ನೆತ್ತಿಗೇರಿತು. “ಅದೆಂಗೆ ಹೇಳ್ತೀಯಾ? ಈ ವರ್ಷ ನಮ್ಮೊರೇ ಗೆಲ್ಲೋದು. ನಿಮ್ದು ಇನ್ನೇನಿದ್ದರೂ ಬ್ಯಾಕ್‌ಪ್ಯಾಕ್ ಹಾಕ್ಕೊಂಡು ಹೊರಡೋದಷ್ಟೇ’ ಅಂದ. ಅದಕ್ಕೆ ಮೊದಲಿನವ, “ಗೊತ್ತಾಗುತ್ತೆ ಬಿಡಯ್ಯ. ಯಾರದ್ದು ಬ್ಯಾಕ್‌ಪ್ಯಾಕ್, ಯಾರದ್ದು ಕೇಕ್ ವಾಕ್ (ಸುಲಭದ ವಿಜಯ) ಅಂತ’ ಎಂದ. ಎರಡನೆಯವ, “ಈ ಕೇಕು, ವಾಕು ಎಲ್ಲ ಬಿಡು. ದಿನಾ ಬರಲಿ, ಯಾರಿಗೆ ಗುನ್ನಾ ಇಡ್ತಾರೆ ನೋಡೋಣ’ ಎಂದ.
ಇಬ್ಬರ ಈ ಮುಗಿಲು ಮುಟ್ಟೋ ಹಂಬಲದ ವಾದ ಕಾಣ್ತಾ ಇದ್ದ ಹಿರಿಯೊಬ್ಬರು ಜಡ್ಜ್ ಮೆಂಟ್ ಕೊಡುವಂತೆ, “ಲೋ ದಡ್ಡೆತ್ತುಗಳಾ, ನಾವು ವೋಟು ಹಾಕದ್ದೇ ಇದ್ದರೆ ಇಬ್ಬರ ಫ್ಯಾಮಿಲಿನೂ ಫ್ಯಾಕ್! ಗೊತ್ತಾ” ಎಂದರು.
ಹತ್ತಿರದಲ್ಲೆಲ್ಲೋ ನೋಟಾ ಪಾರ್ಟಿ ಮಂದಿ, “ಚಿಯರ್” ಅಂತ ಪಾರ್ಟಿ ಮಾಡೋವಾಗೆ ಕೇಳಿಸಿತು !