Advertisement
ಹಲವು ವರ್ಷಗಳಿಂದ ಎದುರು ನೋಡುತ್ತಿದ್ದ ಈ ಯೋಜನೆಯಲ್ಲಿ 12 ಕಿಲೋ ಮೀಟರ್ ಮೇಲ್ಸೇತುವೆ ಮತ್ತು ಎರಡೂವರೆ ಕಿಲೋ ಮೀಟರ್ ನೀಳಕ್ಕೆ ಸುರಂಗವನ್ನೂ ನಿರ್ಮಿಸಬೇಕಾಗಿ ಬರಲಿದೆ. ಸುಮಾರು 50 ಸಾವಿರ ಮಂದಿಗೆ ಉದ್ಯೋಗ ಲಭಿಸುವ ಸಾಧ್ಯತೆಯಿದ್ದು, ವಿಶ್ವ ಮಟ್ಟದ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಈ ಮೂಲಕ ಉಪಗ್ರಹಗಳೊಂದಿಗೆ ಸಂಪರ್ಕವನ್ನು ಹೊಂದಿರುವ ನಗರಗಳೂ ಸೃಷ್ಟಿಯಾಗಲಿವೆ. ರೈಲು ಹಳಿಗೆ ಇಕ್ಕಡೆಗಳಲ್ಲಿ ಸರ್ವಿಸ್ ರಸ್ತೆಗಳು ನಿರ್ಮಾಣವಾಗಲಿರುವುದರಿಂದ ಕೆಲವು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಲಿವೆ.
Related Articles
ಕಾಸರಗೋಡು-ತಿರುವನಂತಪುರ ಸೆಮಿ ಹೈಸ್ಪೀಡ್ ರೈಲು ಹಳಿಯಾಗಿರುವ “ಸಿಲ್ವರ್ ಲೈನ್’ಗಾಗಿ ಹೆಲಿಕಾಪ್ಟರ್ ಬಳಸಿ ಸರ್ವೆ ಡಿಸೆಂಬರ ತಿಂಗಳಾಂತ್ಯದಲ್ಲಿ ನಡೆಯ ಲಿದೆ. ಹೆಲ್ಲಿಕಾಪ್ಟರ್‌ನ ಪರಿಶೋ ಧನೆ ಡಿ.20 ರಂದು ದೆಹಲಿಯಲ್ಲಿ ನಡೆಯಲಿದೆ. ರಕ್ಷಣಾ ಸಚಿವಾಲಯದ ಮತ್ತು ನಾಗರಿಕ ವ್ಯೋಮಯಾನ ಡೈರೆಕ್ಟರೇಟ್‌ನ ಅಧಿಕಾರಿಗಳು ಹೆಲಿಕಾಪ್ಟರ್‌ನ ಪರಿಶೋಧನೆ ನಡೆಸುವರು. ಆ ಬಳಿಕವಷ್ಟೇ ಹೆಲಿಕಾಪ್ಟರ್‌ನ್ನು ಕೇರಳಕ್ಕೆ ಕಳುಹಿಸಿಕೊಡಲಾಗುವುದು. ನಂತರ ಆಗಸದಲ್ಲಿ ಸರ್ವೆ ನಡೆಯುವುದು. ಇದಕ್ಕಾಗಿ ಈಗಾಗಲೇ ರಕ್ಷಣಾ ಸಚಿವಾಲಯದ ಮತ್ತು ನಾಗರಿಕ ವ್ಯೋಮಯಾನ ಡೈರೆಕ್ಟರೇಟ್‌ನ ಅನುಮತಿಯು ಯೋಜನೆ ಜಾರಿಗೊಳಿಸುವ ಕೇರಳ ರೈಲ್ವೇ ಅಭಿವೃದ್ಧಿ ಕಾರ್ಪೊರೇಶನ್ ಲಿಮಿಟೆಡ್(ಕೆಆರ್‌ಡಿಸಿಎಲ್)ಗೆ ಕಳೆದ ಅಕ್ಟೋಬರ್ ತಿಂಗಳಲ್ಲೇ ಲಭಿಸಿದೆ. ಆದರೆ ದಿಲ್ಲಿಯಲ್ಲಿ ಹವಾಮಾನ ಹಾಗೂ ತಾಂತ್ರಿಕ ಅಡಚಣೆಯಿಂದಾಗಿ ಮುಂದಿನ ಪ್ರಕ್ರಿಯೆ ವಿಳಂಬವಾಗಲು ಕಾರಣವಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement