ತೀರ್ಥಹಳ್ಳಿ: ಶ್ರೀರಾಮೇಶ್ವರ ದೇವರ ತೆಪ್ಪೋತ್ಸವ ಸಡಗರ ಸಂಭ್ರಮದಿಂದ ಮುಕ್ತಾಯಗೊಂಡಿತು. ಇದರೊಂದಿಗೆ ವೈಭವದ ಎಳ್ಳಮಾವಾಸ್ಯೆ ಜಾತ್ರೆಗೆ ತೆರೆ ಬಿದ್ದಿತ್ತು.
ಶನಿವಾರ ಬೆಳಿಗ್ಗೆ ಶ್ರೀರಾಮೇಶ್ವರ ದೇವರ ಓಕಳಿ ಸ್ನಾನ ನಡೆಯಿತು. ಸಂಜೆ ಶ್ರೀದೇವರ ಪಲ್ಲಕ್ಕಿ ಉತ್ಸವ ಮೂರ್ತಿಯನ್ನು ತೆಪ್ಪದಲ್ಲಿ ಇರಿಸಿ ತುಂಗಾನದಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಈ ವರ್ಷ ತೆಪ್ಪೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಅತೀ ಸುಂದರವಾದ ತೆಪ್ಪ ನಿರ್ಮಾಣ ಮಾಡಲಾಗಿತ್ತು.
ಜೊತೆಗೆ ವಿಶೇಷ ಆಕರ್ಷಣೆಯಾಗಿ ನೂರಾರು ಬೆಳಕಿನ ದೀಪಗಳನ್ನು ಆಕಾಶದಲ್ಲಿ ಹಾರಿಬಿಡಲಾಯಿತು. ಬಣ್ಣ ಬಣ್ಣದ ಪಟಾಕಿ ಪ್ರದರ್ಶನ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ರೀತಿಯಲ್ಲಿ ಪಟಾಕಿ ಸಿಡಿಸಲಾಯಿತು. ಆಕರ್ಷಕವಾದ ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿದ್ದ ಅಯೋಧ್ಯೆಯ ರಾಮಮಂದಿರ,ಕಮಾನು ಸೇತುವೆ ನೆರದಿದ್ದ ಲಕ್ಷಾಂತರ ಜನರಿಗೆ ಸಂತಸಕೊಟ್ಟಿತ್ತು.
ಒಟ್ಟಾರೆ ಅದ್ದೂರಿಯಾಗಿ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ತೆರೆ ಬಿದ್ದಿತು. ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಸಂಸದ ಬಿ. ವೈ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್,
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಸೇರಿದಂತೆ ಲಕ್ಷಾಂತರ ಮಂದಿ ಉಪಸ್ಥಿತರಿದ್ದರು.