Advertisement

ಕುಡಿಯುವ ನೀರಿಗೆ ಸೇರುತ್ತಿದೆ ಕೋಳಿ ತ್ಯಾಜ್ಯ: ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನತೆ

02:39 PM Sep 03, 2021 | Team Udayavani |

ತೀರ್ಥಹಳ್ಳಿ: ಕೋವಿಡ್‌  ಸಾಂಕ್ರಾಮಿಕ ರೋಗಗಳ ಭಯದ ನಡುವೆಯೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ ಹದಿನಾಲ್ಕರ ಕುರುವಳ್ಳಿ ಬಾದಾಳಗುಂಡಿ ಹತ್ತಿರ ಹಳ್ಳದಲ್ಲಿ ಕೋಳಿ ಅಂಗಡಿಯವರೊಬ್ಬರು ಪ್ರತಿದಿನ ಮುಂಜಾನೆ ರಾಶಿ-ರಾಶಿ ಕೋಳಿ ತ್ಯಾಜ್ಯವನ್ನು ತಂದು ಹಳ್ಳಕ್ಕೆ ಎಸೆಯುವುದು ಕಂಡು ಬರುತ್ತಿದ್ದು, ಈ ಕೋಳಿ ತ್ಯಾಜ್ಯದ ನೀರು ಕೊಳೆತು ನೇರವಾಗಿ ಬಾದಾಳಗುಂಡಿ ಮೂಲಕ ತುಂಗಾನದಿ ಸೇರುತ್ತಿದೆ. ಈ ಕೋಳಿ ತ್ಯಾಜ್ಯವನ್ನು ತಿನ್ನಲು ನಾಯಿ,  ಹದ್ದು, ನರಿ, ಕಾಗೆಗಳು ಮುಗಿ ಬೀಳುತ್ತಿವೆ.

Advertisement

ಈ ಬಾದಾಳಗುಂಡಿ ನೀರು ಪುತ್ತಿಗೆ ಮಠದ ಎದುರು ಇರುವ ಮೇಲಿನ ಕುರುವಳ್ಳಿ ಗ್ರಾಮ  ಪಂಚಾಯಿತಿಯ ಕುಡಿಯುವ ನೀರಿನ ಪಂಪ್‌ಹೌಸ್‌ ಬಳಿ ಶೇಖರಣೆಯಾಗಿ ತುಂಗಾ ನದಿ ಸೇರುತ್ತಿದೆ. ಈ ನೀರು ಸೇರುವ ಪಕ್ಕದಲ್ಲಿ ವಿಶೇಷವಾಗಿ  ಅರ್ಚಕವೃಂದದವರಿಂದ ಪ್ರತಿನಿತ್ಯ ಶ್ರದ್ಧಾ ಭಕ್ತಿಯಿಂದ ತುಂಗಾ ನದಿಗೆ ತುಂಗಾರತಿ ನಡೆಯುತ್ತಿದ್ದು ಪ್ರತಿ ದಿನ ತಹಶೀಲ್ದಾರರು ಭಾಗವಹಿಸುತ್ತಾರೆ ಮತ್ತು ತ್ಯಾಜ್ಯ ಎಸೆದ  ಪ್ರದೇಶದಲ್ಲಿನ ಬಾದಾಳಗುಂಡಿ ಹಳ್ಳ ದುರ್ವಾಸನೆ ಬೀರುತ್ತಿದೆ. ಇದೇ ಬಾದಾಳಗುಂಡಿಯಿಂದ ತುಂಗಾ ನದಿ ಸೇರಿದ ನೀರನ್ನು ಗ್ರಾಮ ಪಂಚಾಯಿತಿಯವರು ಮೇಲಿನ ಕುರುವಳ್ಳಿಯಲ್ಲಿ ಟ್ಯಾಂಕ್ ಒಂದರಲ್ಲಿ ಶೇಖರಣೆ ಮಾಡಿ ನೀರನ್ನು ಶುದ್ಧೀಕರಣ ಮಾಡದೆ ಮೇಲಿನ ಕುರುವಳ್ಳಿ, ಗ್ರಾಮದ ಜನರಿಗೆ ಕುಡಿಯುವ ನೀರು ಎಂದು ಮನೆ ಮನೆಗೆ ಬಿಡುತ್ತಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಪಾಲಿಕೆಯ ಮೇಲೆ ಯಾರ ಹಿಡಿತವೂ ಇಲ್ಲ: ಬಿಜೆಪಿ ವಿರುದ್ಧ ಹೆಬ್ಬಾಳ್ಕರ್ ಟೀಕೆ

ಈ ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ದಿಸೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ನಿದ್ದೆ ಮಂಪರುವಿನಿಂದ ಎದ್ದು ಯಾರು ಈ ತ್ಯಾಜ್ಯವನ್ನು ಹಾಕುವುದು ಎಂದು ಕಂಡು ಹಿಡಿದು ತಕ್ಷಣ  ಕೋಳಿ ಅಂಗಡಿಯವರನ್ನು ಕರೆಯಿಸಿ  ಕೋಳಿ ತ್ಯಾಜ್ಯವನ್ನು ಹಳ್ಳಕ್ಕೆ ಹಾಕುವುದಕ್ಕೆ ಕಡಿವಾಣ ಹಾಕಲಿ. ಇಲ್ಲದೆ ಹೋದಲ್ಲಿ ತುಂಗಾ ನದಿಯ ನೀರು ಮಲಿನವಾಗುವುದರ ಜೊತೆಗೆ ಈ ಕಲುಷಿತ ನೀರು ಕುಡಿದು ರೋಗರುಜಿನ ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next