ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಉಭಯ ಜಗದ್ಗುರುಗಳ ಪೂರ್ಣಾನುಗ್ರಹದಿಂದ ಲೋಕಕಲ್ಯಾಣಕ್ಕಾಗಿ ಮಹಾರುದ್ರ ಪುರಶ್ಚರಣೆ ಹೋಮ ಮಾಡಲಾಯಿತು.
ಸೆ.10, ಭಾನುವಾರದಂದು ದೇವತಾ ಪ್ರಾರ್ಥನೆ ಮೂಲಕ ಆರಂಭವಾಗಿ ತುಂಗಾ ನದಿಯಿಂದ “ಆಕ್ರೋದಕ ಅನಯನ”ವನ್ನು ತಂದು ಗಣಹೋಮ, “ಮಹಾರುದ್ರ ಪಠಣೆ ಹಾಗೂ ಸೋಮವಾರ(ಸೆ.11) “ಪುಣ್ಯಾಹ” “ಮಹಾರುದ್ರ ಪುರಶ್ಚರಣೆ ಹೋಮ” ನಂತರ ಪೂರ್ಣಾಹುತಿ, ಸಾರ್ವಜನಿಕ ಅನ್ನಸಂತರ್ಪಣೆ ನೆಡೆಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್. ಎಂ. ಮಂಜುನಾಥ್ ಗೌಡ ಹಾಗೂ ಡಿವೈಎಸ್ ಪಿ ಗಜಾನನ ವಾಮನ ಸುತಾರ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು. ಸೊಪ್ಪುಗುಡ್ಡೆ ರಾಘವೇಂದ್ರರವರ ನೇತೃತ್ವದ ಸಮಿತಿ ಸದಸ್ಯರು ಅಚ್ಚುಕಟ್ಟಾಗಿ ಧಾರ್ಮಿಕ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದರು.
ವೇ. ಬ್ರ. ಶ್ರೀ. ಲಕ್ಷ್ಮೀಶ ತಂತ್ರಿಗಳಿಗೆ ಸನ್ಮಾನ
ಇತ್ತೀಚಿಗೆ ದೆಹಲಿಯ ನೂತನ ಸಂಸತ್ ಭವನ ನಿರ್ಮಾಣದ ಪೂಜೆಯಲ್ಲಿ ಭಾಗಿಯಾಗಿದ್ದ ತೀರ್ಥಹಳ್ಳಿಯ ಕಲ್ಲಾರೆ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಬ್ರ.ಶ್ರೀ. ಲಕ್ಷ್ಮೀಶ ತಂತ್ರಿಗಳಿಗೆ ರಾಮೇಶ್ವರ ದೇವಸ್ಥಾನದ ಸಮಿತಿ ಸದಸ್ಯರು ಸನ್ಮಾನ ಮಾಡಿದರು.