Advertisement

Thirthahalli: ಕಾರ್ಮಿಕರಿಗೆ ಕಿಟ್ ವಿತರಿಸಿದ ಆರಗ ಜ್ಞಾನೇಂದ್ರ

11:34 AM Sep 18, 2024 | Team Udayavani |

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸೆ.18ರ ಬುಧವಾರ 300 ಜನ ಕಾರ್ಮಿಕರಿಗೆ ಕಿಟ್ ಕೊಡುವ ಕೆಲಸವಾಗಿದೆ. ಕೋವಿಡ್ ಪೂರ್ವದಲ್ಲಿ ಇಲಾಖೆಯಲ್ಲಿ ಸಾವಿರ ಕೋಟಿ ರೂ. ಹಣ ಇತ್ತು, ಹಾಗಾಗಿ ಕಾರ್ಮಿಕ ಇಲಾಖೆಯಲ್ಲಿ ಹಣ ಇದೆ ಅದನ್ನು ಕಾರ್ಮಿಕರಿಗೆ ಕೊಡುವ ಕೆಲಸ ಮಾಡೋಣ ಎಂದು ತಿಳಿಸಿದ್ದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

Advertisement

ಪಟ್ಟಣದ ಲಯನ್ಸ್ ಭವನದಲ್ಲಿ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಕಾರ್ಮಿಕರಿಗೆ ಉಪಕರಣ ಕೊಡುವ ಕೆಲಸ ಸರ್ಕಾರದಿಂದ ಆಗುತ್ತಿದೆ. ಮದುವೆ, ಮಕ್ಕಳ ಶಿಕ್ಷಣ, ಅಪಘಾತ ಹೀಗೆ ಸರ್ಕಾರದಿಂದ ಹಣ ಬರುತ್ತಿದೆ ಎಂದಾಗ ಮಕ್ಕಳಿಗೆ ಸ್ಕಾಲರ್ ಶಿಪ್ ಬರುತ್ತಿಲ್ಲ ಎಂದು ಅಲ್ಲೇ ಇದ್ದ ಕಾರ್ಮಿಕರು ತಿಳಿಸಿದರು. ಯಾಕೆ ಎಂದು ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಕ್ಕೆ ಅಧಿಕಾರಿಗಳಿಂದ ತೇಪೆ ಹಚ್ಚುವ ಕೆಲಸ ಕೂಡ ನಡೆಯಿತು. ತಕ್ಷಣವೇ 15 ದಿನದೊಳಗೆ ಬಂದಿಲ್ಲ ಎಂದರೆ ನನ್ನ ಗಮನಕ್ಕೆ ತನ್ನಿ, ಬೆಂಗಳೂರಿನಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಮಿಕ ಇಲಾಖೆಯಲ್ಲಿ ಏನೇ ಅನ್ಯಾಯ ಆದರೂ ನನ್ನ ಗಮನಕ್ಕೆ ತನ್ನಿ, ಅಧಿಕಾರಿಗಳಿಂದ ತೊಂದರೆಯಾದರೆ ತಿಳಿಸಿ, ಕಾರ್ಮಿಕ ಕಾರ್ಡ್ ರಿನೀವಲ್ ಮಾಡಿಕೊಳ್ಳಬೇಕು ಎಂದರೆ ಪ್ರತಿಯೊಬ್ಬರು ಮಾಡಿಸಿಕೊಳ್ಳಿ. ನಿಮಗೆ ಬರುವ ಸೌಲಭ್ಯ ತಪ್ಪಿ ಹೋಗಬಾರದು ಎಂಬುದು ನನ್ನ ಇಚ್ಛೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next