ಸೇತುವೆ, ರಸ್ತೆಗಳನ್ನು ಕಾರ್ಯಗತಗೊಳಿಸಿ ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಅನುಕೂಲಕ್ಕೆ ಈ ರಸ್ತೆ ಬಳಸಲು ಉದ್ದೇಶಿಸ ಲಾಗಿತ್ತು. ಆದರೆ ಮಳೆಗಾಲಕ್ಕೂ ಮುನ್ನವೇ ಕಾಮಗಾರಿಯಲ್ಲಿನ ಸಮಸ್ಯೆಯಿಂದ ಜಮೀನಿನಲ್ಲಿ ನೀರು ತುಂಬಿರುವುದು ಸಮಸ್ಯೆ ತಂದೊಡ್ಡಿದೆ.
ಆರಂಭದಲ್ಲೇ ವಿರೋಧವಿತ್ತು
5 ದೊಡ್ಡ ಪೈಪ್‌ಗ್ಳನ್ನು ಹಾಕಿ ನಿರ್ಮಿಸ ಲಾಗುತ್ತಿದ್ದ ಸೇತುವೆ ಅವೈಜ್ಞಾನಿಕ ವಾಗಿದೆ ಎಂದು ಜನರು ಆಕ್ಷೇಪಿಸಿದ್ದರು. ಆದರೆ ಇಲಾಖೆ ಎಂಜಿನಿಯರ್‌ಗಳು ಇಲ್ಲಿ ಮಳೆ ಗಾಲದಲ್ಲಿ ಕಾಮಿನಿ ನದಿಯ ನೀರು ಈ ಸೇತುವೆ ಮೂಲಕವೇ ಸಮುದ್ರ ಸೇರಲಿದೆ. ರಸ್ತೆ, ಸೇತುವೆಗಳಿಗೇನೂ ಹಾನಿಯಾಗದು. ಜನರಿಗೂ ತೊಂದರೆಯಾಗದು ಎಂದಿದ್ದರು.
Advertisement
ಇದೀಗ ಕಾಮಿನಿ ನದಿಯು ತಗ್ಗಲ್ಲಿದೆ. ಸೇತುವೆ ಎತ್ತರದಲ್ಲಿದೆ. ಮರಳು ದಿಣ್ಣೆಗಳನ್ನು ಕಡಿದು ಸೇತುವೆ ಎದುರು ನೀರು ಹರಿಯಲು ತೋಡು ಮಾಡಿಕೊಡಲಾಗಿದೆ. ಸಮುದ್ರ ಇಳಿತ ಇದ್ದಾಗ ಒಂದಷ್ಟು ನೀರು ಹರಿದು ಹೋಗುತ್ತಿದ್ದರೂ, ಉಬ್ಬರ ಸಂದರ್ಭಗಳಲ್ಲಿ ನೀರು ಹಿಂದಕ್ಕೆ ಬರುತ್ತಿದೆ. ಇದರಿಂದ ಮರಳು ರಾಶಿ ಮತ್ತೆ ಸೃಷ್ಟಿಯಾಗುತ್ತಿದೆ. ಇದೂ ನೆರೆ ಪರಿಸ್ಥಿತಿ ಉಂಟುಮಾಡಲು ಕಾರಣವಾಗಿದೆ.
ಸಮುದ್ರ ಮತ್ತು ಕಾಮಿನಿ ನದಿ ಮಧ್ಯೆ ನಿರ್ಮಾಣವಾದ ಹೊಸ ರಸ್ತೆ, ಸೇತುವೆಯಿಂದಾಗಿ ನೀರು ಸಮುದ್ರ ಸೇರದೆ, ಮೊದಲ ಮಳೆಗೇ ಆಸುಪಾಸಿನ ಜಾಗಗಳಿಗೆ ನೀರು ನುಗ್ಗಿ ನೆರೆ ಪರಿಸ್ಥಿತಿ ತಲೆದೋರಿದೆ. ಸಾಮಾನ್ಯವಾಗಿ ಇಲ್ಲಿ ವರ್ಷವೂ ಸ್ಥಳೀಯರು ಪಡುಬಿದ್ರಿ ಗ್ರಾ.ಪಂ. ನೀಡುವ 15 ಸಾವಿರ ಬಳಸಿ ಮರಳು ದಿಬ್ಬಗಳನ್ನು ತೆರವುಗೊಳಿಸುತ್ತಿದ್ದರು. ಇದರಿಂದ ನೀರು ಸರಾಗ ಹರಿದುಹೋಗುತ್ತಿತ್ತು.
ಅವೈಜ್ಞಾನಿಕ
ಸೇತುವೆ ಕಾರ್ಯ
ಸೇತುವೆ ಕಾರ್ಯ ಅವೈಜ್ಞಾನಿಕವಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇನ್ನು ಮಳೆಗಾಲದಲ್ಲಿ ದೋಣಿಗಳನ್ನು ನದಿ ಪಾತ್ರಕ್ಕೆ ತರುತ್ತಿದ್ದೆವು. ಆದರೀಗ ತೂಬಿನ ರೀತಿಯ ಸೇತುವೆಯಿಂದ ದೋಣಿಗಳನ್ನೂ ತರಲು ಸಾಧ್ಯವಿಲ್ಲದಂತಾಗಿದೆ.
– ಗಂಗಾಧರ ಕರ್ಕೇರ,
ಸ್ಥಳೀಯರು ಪರಿಹಾರ ಕಲ್ಪಿಸಿ
ಸೇತುವೆ ಅಡಿಯ ಮಣ್ಣು ಸಮುದ್ರ ಕೊರೆತಕ್ಕೊಳಗಾದರೆ, ಸೇತುವೆ ಬಾಳಿಕೆ ಬರಲು ಸಾಧ್ಯವಿಲ್ಲ. ಈ ಬಗ್ಗೆ ಕೂಡಲೇ ಪರಿಹಾರ ಕಲ್ಪಿಸಬೇಕಿದೆ.
– ಲೋಹಿತಾಕ್ಷ ಸುವರ್ಣ, ಪಡುಹಿತ್ಲು
Related Articles
Advertisement