ನವ ದೆಹಲಿ : ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವುದನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ಅಕ್ಟೋಬರ್ ನವಂಬರ್ ಸಂದರ್ಭದಲ್ಲಿ ಮೂರನೇ ಅಲೆ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ ಎಂದು ಸರ್ಕಾರಿ ಕೋವಿಡ್ ನಿರ್ವಹಣೆಯ ಸಮಿತಿಯ ತಜ್ಞ ಮಣೀಂದ್ರ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ.
ಮೂರನೇ ಅಲೆಯ ಸಂದರ್ಭದಲ್ಲಿ ದಿನಕ್ಕೆ ಎರಡನೇ ಅಲೆಯ ಸಂದರ್ಭದಲ್ಲಿ ಇರುತ್ತಿದ್ದ ಸೋಂಕಿತರ ಸಂಖ್ಯೆಯ ಅರ್ಧದಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ ನ ಹೊಸ ರೂಪಾಂತರ ‘ಸಾರ್ಸ್-ಕೋವ್-2’ (SARS-CoV-2) ಹರಡಿದರೆ ಮೂರನೇ ಅಲೆಯಲ್ಲಿ ಕೋವಿಡ್ ಸೋಂಕು ಅತ್ಯಂತ ವೇಗವಾಗಿ ಹರಡುವ ವಿಷಯದ ಬಗ್ಗೆಯೂ ಕೂಡ ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಕೋಡಿಹಳ್ಳಿಯಲ್ಲಿ ಅನುಮಾನಾಸ್ಪದ ಸ್ಪೋಟಕಗಳು ಪತ್ತೆ: ಪರೀಕ್ಷೆ ನಡೆಸುತ್ತಿದ್ದ ವ್ಯಕ್ತಿಗೆ ಗಾಯ
ಈ ಬಗ್ಗೆ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಸರಣಿ ಟ್ವೀಟ್ ಮಾಡಿರುವ ಮಣೀಂದ್ರ, ರೋಗ ನಿರೋಧಕ ಶಕ್ತಿ ನಷ್ಟ, ಲಸಿಕಾ ಅಭಿಯಾನ ಕಾರ್ಯಕ್ರಮಗಳ ಪರಿಣಾಮಗಳು ಹಾಗೂ ಸೋಂಕಿನ ಅಧಿಕ ರೂಪಾಂತರಿಗಳ ಸಾಧ್ಯತೆಗಳು ಮುಖ್ಯ ಅಂಶಗಳಾಗಿವೆ ಎಂದಿದ್ದಾರೆ.
ಈ ಪ್ರಮುಖ ಅಂಶಗಳು ಎರಡನೇ ಅಲೆಯ ಮುನಸ್ಊಚನೆಗಳನ್ನು ರಚಿಸುವಾಗ ಇದ್ದಿರಲಿಲ್ಲ, ಈ ಕುರಿತಾಗಿ ವಿಸ್ತೃತ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ನಾವು ಮೂರು ಸನ್ನಿವೇಶಗಳನ್ನು ರಚಿಸಿದ್ದೇವೆ, ಒಂದು ಆಶಾವಾದಿಯಾಗಿದೆ, ಆಗಸ್ಟ್ ವೇಳೆಗೆ ಜೀವನವು ಸಾಮಾನ್ಯ ಸ್ಥಿತಿಗೆ ಬರಲಿದ್ದು, ಮತ್ತು ಹೊಸ ರೂಪಾಂತರಿಗಳ ಸೃಷ್ಟಿಯಾಗುವುದಿಲ್ಲಬವ ಎಂದು ಭಾವಿಸುತ್ತೇವೆ. ಇನ್ನೊಂದು ಮಧ್ಯಂತರವಾಗಿದ್ದು, ಇದರಲ್ಲಿ ಆಶಾವಾದಿ ಸನ್ನಿವೇಶದೊಂದಿಗೆ ಹೆಚ್ಚುವರಿಯಾಗಿ ವ್ಯಾಕ್ಸಿನೇಷನ್ ಶೇಕಡಾ 20 ರಷ್ಟು ಕಡಿಮೆ ಪರಿಣಾಮಕಾರಿ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು, “ಅಂತಿಮ ಸನ್ನಿವೇಶದಲ್ಲಿ ಮಧ್ಯಂತರಕ್ಕಿಂತ ಸನ್ನಿವೇಶಕ್ಕಿಂತ ಭಿನ್ನವಾಗಿವೆ. ಆಗಸ್ಟ್ ನಲ್ಲಿ ಹೊಸದಾಗಿ ಶೇಕಡಾ 25 ರಷ್ಟು ಹೆಚ್ಚು ಸಾಂಕ್ರಾಮಿಕ ರೂಪಾಂತರಿ ಸೋಂಕುಗಳು ಸೃಷ್ಟಿಯಾಗಿ ಹರಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.
ಆಗಸ್ಟ್ ಮಧ್ಯದ ವೇಳೆಗೆ ಎರಡನೇ ಅಲೆಯ ಸೋಂಕು ಇಳಿಮುಖವಾಗುವ ಸಾಧ್ಯತೆ ಇದ್ದು, ಅಕ್ಟೋಬರ್ ಮತ್ತು ನವೆಂಬರ್ ನಡುವೆ ಮೂರನೇ ಅಲೆಯು ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ತೋರಿಸಿದ ಗ್ರಾಫ್ ಅನ್ನು ಸಹ ಅವರು ಇನ್ನೊಂದು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ದಿನಕ್ಕೆ 1.5 ಲಕ್ಷದಿಮದ 2 ಲಕ್ಷದ ತನಕ ಕೋವಿಡ್ ಸೋಂಕು ದಾಖಲಾಗುವ ಸಾಧ್ತತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ತವರಿಗೆ ಆಗಮಿಸಿದ ವೀರಯೋಧ ಕಾಶಿರಾಯ ಪಾರ್ಥಿವ ಶರೀರ: ಪಂಚಭೂತಗಳಲ್ಲಿ ಲೀನ