ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆ ಪ್ರಕರಣಗಳ ಪ್ರಮಾಣ ಇಳಿಕೆಯಾಗುತ್ತಿದ್ದರೂ ಕೂಡಾ ಅದೂ ಸಕ್ರಿಯವಾಗಿದೆ. ಅಲ್ಲದೇ 2021ರ ಆಗಸ್ಟ್ ನಲ್ಲಿ ಕೋವಿಡ್ ಮೂರನೇ ಅಲೆಯನ್ನು ಭಾರತ ಎದುರಿಸಬಹುದು ಎಂದು ಎಸ್ ಬಿಐ ಸೋಮವಾರ (ಜುಲೈ 05) ಬಿಡುಗಡೆಗೊಳಿಸಿರುವ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಎಸ್ ಬಿಐ ಪ್ರಕಟಿಸಿದ ಸಂಶೋಧನಾ ವರದಿಗೆ “ಕೋವಿಡ್ 19: ರೇಸ್ ಟು ಫಿನಿಶಿಂಗ್ ಲೈನ್” ಎಂದು ಹೆಸರಿಡಲಾಗಿದೆ. ಆಗಸ್ಟ್ ನಲ್ಲಿ ಕೋವಿಡ್ 19 ಮೂರನೇ ಅಲೆ ಪ್ರಾರಂಭವಾಗಿ ಸೆಪ್ಟೆಂಬರ್ ನಲ್ಲಿ ಅದು ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಲಿದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.
ಎರಡನೇ ಅಲೆಯ ವೇಳೆ ಪತ್ತೆಯಾದ ಕೋವಿಡ್ ಪ್ರಕರಣಗಳಿಗೆ ಹೋಲಿಸಿದರೆ, ಮೂರನೇ ಅಲೆಯ ಸಂದರ್ಭದಲ್ಲಿ 1.7 ಪಟ್ಟು ಹೆಚ್ಚಳವಾಗಲಿದೆ ಎಂದು ಹೇಳಿದೆ. ಭಾರತದಲ್ಲಿ ಕೋವಿಡ್ ಎರಡನೇ ಅಲೆ ಮೇ 7ರಂದು ಗರಿಷ್ಠ ಪ್ರಮಾಣಕ್ಕೆ ಏರಿತ್ತು. ಏಪ್ರಿಲ್ ನಲ್ಲಿ ದೇಶದಲ್ಲಿ ಎರಡನೇ ಅಲೆ ಪ್ರಾರಂಭವಾಗಿತ್ತು. ಇದರ ಪರಿಣಾಮ ದೆಹಲಿ, ಮಹಾರಾಷ್ಟ್ರ, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ಸಾವಿರಾರು ಕುಟುಂಬ ಮೇಲೆ ಪರಿಣಾಮ ಬೀರಿತ್ತು ಎಂದು ವರದಿ ವಿವರಿಸಿದೆ.
ಪ್ರಸ್ತುತ ಅಂಕಿಅಂಶದ ಪ್ರಕಾರ, ಕೋವಿಡ್ ವಿಚಾರದಲ್ಲಿ ಭಾರತ ಅನುಭವ ಪಡೆದಿದ್ದು, ಜುಲೈ 2ನೇ ವಾರದಲ್ಲಿ ಅಂದಾಜು 10 ಸಾವಿರ ಪ್ರಕರಣಗಳು ಪತ್ತೆಯಾಗಲಿದೆ. ಏತನ್ಮಧ್ಯೆ ಆಗಸ್ಟ್ ವೇಳಗೆ ಎರಡನೇ ಅಲೆ ಮುಂದುವರಿದು ಮೂರನೇ ಅಲೆಗೆ ದಾಟಲಿದೆ ಎಂದು ಎಸ್ ಬಿಐ ವರದಿ ತಿಳಿಸಿದೆ.