Advertisement

ಶಶಿಕಲಾ ಆಪ್ತ ಪಳನಿಸ್ವಾಮಿಗೆ ಸಿಎಂ ಪಟ್ಟ; ಸೆಲ್ವಂಗೆ ಮುಖಭಂಗ

12:09 PM Feb 16, 2017 | Team Udayavani |

ಚೆನ್ನೈ:ತಮಿಳುನಾಡಿನ ರಾಜಕೀಯ ಬಿಕ್ಕಟ್ಟಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಶಶಿಕಲಾ ಆಪ್ತ, ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಡುವ ಮೂಲಕ ಕೊನೆಗೂ 10 ದಿನಗಳ ರಾಜಕೀಯ ಅಸ್ಥಿರತೆಗೆ ಗುರುವಾರ ತೆರೆ ಬಿದ್ದಂತಾಗಿದೆ. ಆದರೆ ಶಶಿಕಲಾ ವಿರುದ್ಧ ಸೆಡ್ಡು ಹೊಡೆದಿದ್ದ ಪನ್ನೀರ್ ಸೆಲ್ವಂಗೆ ಮುಖಭಂಗವಾದಂತಾಗಿದೆ.

Advertisement

ತಮಿಳುನಾಡು ರಾಜಭವನಕ್ಕೆ 11.40ಕ್ಕೆ ಆಗಮಿಸಿದ್ದ ಪಳನಿಸ್ವಾಮಿ ಅವರು ರಾಜ್ಯಪಾಲರ ಜೊತೆ ಮಹತ್ವದ ಮಾತುಕತೆ ನಡೆಸಿದ್ದರು. ನಿನ್ನೆ ರಾಜ್ಯಪಾಲರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಪಳನಿಸ್ವಾಮಿ ಅವರು 124 ಶಾಸಕರ ಬೆಂಬಲ ಇರುವುದಾಗಿ ತಿಳಿಸಿ, ಶಾಸಕರ ಸಹಿಯುಳ್ಳ ಪತ್ರವನ್ನು ನೀಡಿದ್ದರು. ಪನ್ನೀರ್ ಸೆಲ್ವಂ ಕೂಡಾ ರಾಜ್ಯಪಾಲರನ್ನು ಭೇಟಿಯಾದ ವೇಳೆ ಕೇವಲ 10 ಮಂದಿ ಶಾಸಕರ ಸಹಿಯುಳ್ಳ ಪತ್ರ ನೀಡಿರುವುದಾಗಿ ರಾಜಭವನದ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ಇಂದು ಸಂಜೆ ನೂತನ ಸರ್ಕಾರ ಅಸ್ತಿತ್ವಕ್ಕೆ?

ಇಕೆ ಪಳನಿಸ್ವಾಮಿ ಇಂದು ಸಂಜೆಯೇ ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

15ದಿನದೊಳಗೆ ಬಹುಮತ ಸಾಬೀತುಪಡಿಸಿ:ಗವರ್ನರ್

Advertisement

ಪಳನಿಸ್ವಾಮಿ ನೂತನ ಸರ್ಕಾರ ರಚಿಸುವಂತೆ ಆಹ್ವಾನ ನೀಡಿರುವ ರಾಜ್ಯಪಾಲರು, 15 ದಿನದೊಳಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ನಂಬರ್ ಗೇಮ್; ಮ್ಯಾಜಿಕ್ ನಂ..117
ತಮಿಳುನಾಡು ವಿಧಾನಸಭೆ ಬಲಾಬಲ 234
ಸರ್ಕಾರದ ಬಹುಮತಕ್ಕೆ 117 ಸದಸ್ಯ ಬಲ ಬೇಕು

ಪಳನಿಸ್ವಾಮಿ(ಶಶಿಕಲಾ) ಪರ ಶಾಸಕರ ಸಂಖ್ಯೆ; 123
ಪನ್ನೀರ್ ಸೆಲ್ವಂ ಪರ ಶಾಸಕರ ಸಂಖ್ಯೆ: 10
ಡಿಎಂಕೆ(89) ಹಾಗೂ ಇತರ ಶಾಸಕರ ಸಂಖ್ಯೆ: 99
ಒಂದು ಸ್ಥಾನ ಖಾಲಿ ಇದೆ

Advertisement

Udayavani is now on Telegram. Click here to join our channel and stay updated with the latest news.

Next