Advertisement

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3ನೇ ಬಲಿ ; ಶತಕ ಬಾರಿದ ಸೋಂಕಿತರ ಸಂಖ್ಯೆ

07:09 PM May 27, 2020 | sudhir |

ಬೀದರ್ : ಗಡಿ ಜಿಲ್ಲೆ ಬೀದರ್ ನಲ್ಲಿ ತಲ್ಲಣ ಮೂಡಿಸುತ್ತಿರುವ ರಕ್ಕಸ ಕೋವಿಡ್ ಸೋಂಕಿಗೆ ಮೂರನೇ ಬಲಿ ಆಗಿದೆ.

Advertisement

ಇನ್ನೊಂದೆಡೆ ಮಹಾರಾಷ್ಟ್ರ ಕಂಟಕದಿಂದಾಗಿ ಕೋವಿಡ್ ಸೋಂಕಿತರ ಸಂಖ್ಯೆಯೂ ನೂರರ ಗಡಿ ದಾಟಿದೆ.

ಬುಧವಾರ ಅತಿ ಹೆಚ್ಚು 13 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟದ ತೊಂದರೆಯಿಂದ ಕಳೆದ ಮೇ 19ರಂದು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬೀದರನ ವಿದ್ಯಾನಗರ ಬಡಾವಣೆಯ 49 ವರ್ಷದ ವ್ಯಕ್ತಿ ಬುಧವಾರ ಮೃತಪಟ್ಟಿದ್ದಾರೆ. ಪಿ- 1712 ಸಂಖ್ಯೆಯ ಈ ರೋಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಬೀದರನ ಓಲ್ಡ್ ಸಿಟಿಯ 82 ವರ್ಷದ (ಪಿ-590) ಮತ್ತು ಚಿಟಗುಪ್ಪಾದ 50 ವರ್ಷದ (ಪಿ-1041) ರೋಗಿಗಳು ಈ ಹಿಂದೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಈಗ ಮೂರನೇ ಸಾವು ಸಂಭವಿಸಿದಂತಾಗಿದೆ.

ಇನ್ನೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ತಬ್ಲೀಘಿ ಬಳಿಕ ಈಗ ಮಹಾರಾಷ್ಟ್ರ ಕಂಟಕ ಬೀದರಗೆ ಬೆಂಬಿಡದೇ ಕಾಡುತ್ತಿದೆ. ಮಹಾ ನಂಟಿನಿಂದಾಗಿ ಗ್ರಾಮೀಣ ಭಾಗದಲ್ಲಿ ದಿನಕ್ಕೊಂದು ಊರುಗಳಿಗೆ ವೈರಾಣು ವ್ಯಾಪಿಸುತ್ತಿರುವುದು ರೋಗ ನಿಯಂತ್ರಣಕ್ಕೆ ಹೋರಾಡುತ್ತಿರುವ ಜಿಲ್ಲಾಡಳಿತಕ್ಕೆ ತಲೆ ನೋವು ಆಗಿದ್ದರೆ, ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾಗಿರುವ 13 ಜನ ಸೋಂಕಿತರಲ್ಲಿ ಇಬ್ಬರು ಗರ್ಭೀಣಿ ಮಹಿಳೆಯರು, ಒಬ್ಬ ಬಾಲಕ ಸೇರಿದ್ದಾನೆ. ಹುಮನಾಬಾದ ಪಟ್ಟಣದ ಒಂದು, ಇನ್ನುಳಿದ 12 ಸೋಂಕಿತರು ಬಸವಕಲ್ಯಾಣ ತಾಲೂಕಿನ ಕೋಹಿನೂರ್, ಶಿರೂರ ಮತ್ತು ಗದ್ಲೇಗಾಂವ್ (ಕೆ) ಗ್ರಾಮದವರಾಗಿದ್ದಾರೆ. ಎಲ್ಲರೂ ಮಹಾರಾಷ್ಟ್ರದ ಸಂಪರ್ಕ ಹೊಂದಿದ್ದಾರೆ. ಕೋಹಿನೂರ್ ಗ್ರಾಮದಲ್ಲಿ ಮಂಗಳವಾರ ಒಂದೇ ದಿನ 10 ಪ್ರಕರಣಗಳು ವರದಿಯಾಗಿದ್ದವು. ಹೊಸ ಸೋಂಕಿತರ ಗ್ರಾಮಗಳನ್ನು ಸಿಲ್‌ಡೌನ್ ಮಾಡಲಾಗಿದೆ.

31 ವರ್ಷದ ಪಿ- 2309, 25 ವರ್ಷದ ಪಿ- 2310, 12 ವರ್ಷದ ಪಿ- 2311, 31 ವರ್ಷದ ಪಿ- 2312, 28 ವರ್ಷದ ಪಿ-2313, 35 ವರ್ಷದ ಪಿ-2314, 43 ವರ್ಷದ ಪಿ-2315, 34 ವರ್ಷದ ಪಿ-2316, 28 ವರ್ಷದ ಪಿ-2317, 25 ವರ್ಷದ ಪಿ-2318, 21 ವರ್ಷದ ಪಿ- 2319, 20 ವರ್ಷದ ಪಿ- 2320 ಮತ್ತು 68 ವರ್ಷದ ಪಿ-2406 ರೋಗಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಇನ್ನೂ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ 3 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 108 ಪಾಸಿಟಿವ್ ಪ್ರಕರಣಗಳು ವರದಿಯಾದಂತಾಗಿದೆ. ಅದರಲ್ಲಿ ಮೂವರು ಮೃತಪಟ್ಟಿದ್ದರೆ, 24 ಮಂದಿ ಡಿಸ್ಚಾರ್ಜ್ ಆಗಿದ್ದು, 81 ಸಕ್ರಿಯ ಪ್ರಕರಣಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next