ಬೆಂಗಳೂರು: ಭಾರತದಲ್ಲಿ ಈಗಾಗಲೇ ಕೋವಿಡ್ ಎರಡನೇ ಅಲೆ ಹರಡಿದ್ದು, ಇದೀಗ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಏತನ್ಮಧ್ಯೆ ಕೋವಿಡ್ 19 ಸೋಂಕಿನ ಮೂರನೇ ಅಲೆಯು ಅಕ್ಟೋಬರ್ ವೇಳೆಗೆ ಭಾರತದಲ್ಲಿ ಹರಡುವ ಸಾಧ್ಯತೆ ಇದ್ದಿರುವುದಾಗಿ ರಾಯಿಟರ್ಸ್ ನಡೆಸಿದ ವೈದ್ಯಕೀಯ ತಜ್ಞರ ಸಮೀಕ್ಷೆಯಲ್ಲಿ ಅಭಿಪ್ರಾಯವ್ಯಕ್ತವಾಗಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಜಿಂಕೆ ಮಾಂಸ, ಕೊಂಬು ಹಾಗೂ ಜೀವಂತ ಕಾಡುತೂಸು ವಶ : ಆರೋಪಿಗಳು ಪರಾರಿ
ಮೂರನೇ ಅಲೆಯನ್ನು ಈ ಹಿಂದಿನ ಎರಡು ಅಲೆಗಿಂತ ಚೆನ್ನಾಗಿ ನಿಯಂತ್ರಿಸಲ್ಪಟ್ಟರೂ ಕೂಡಾ ಇದು ಸಾರ್ವಜನಿಕವಾಗಿ ಇನ್ನೂ ಒಂದು ವರ್ಷಗಳ ಕಾಲ ಜನರ ಆರೋಗ್ಯದ ಮೇಲೆ ಕಳವಳಕಾರಿಯಾಗಿ ಪರಿಣಮಿಸಲಿದೆ ಎಂದು ವಿವರಿಸಿದೆ.
ಮೂರನೇ ಅಲೆಯ ಸಾಧ್ಯತೆಯ ಕುರಿತು ಜಗತ್ತಿನಾದ್ಯಂತ ಲಸಿಕೆಯನ್ನು ನೀಡಿದ್ದರೂ ಕೂಡಾ ಅದರ ಪರಿಣಾಮದ ಕುರಿತು ವಿಶ್ವದಾದ್ಯಂತ 40 ಆರೋಗ್ಯ ತಜ್ಞರು, ವೈದ್ಯರು, ವಿಜ್ಞಾನಿಗಳು, ವೈರಾಲಜಿಸ್ಟ್ ಗಳು, ಸಾಂಕ್ರಾಮಿಕ ರೋಗ ತಜ್ಞರ ಜತೆ ಜೂನ್ 3ರಿಂದ 17ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯವ್ಯಕ್ತವಾಗಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ ಬಹುತೇಕ ತಜ್ಞರು, ಮುಂದಿನ ಅಲೆ ಅಕ್ಟೋಬರ್ ನಲ್ಲಿ ಮತ್ತೆ ಹರಡಲಿದೆ ಎಂದು ತಿಳಿಸಿದ್ದಾರೆ. ಆಗಸ್ಟ್ ಆರಂಭದಲ್ಲಿ ಹಾಗೂ ಸೆಪ್ಟೆಂಬರ್ ನಲ್ಲಿ ಮೂರನೇ ಕೋವಿಡ್ ಅಲೆಯ ಭೀತಿ ಕಾಣಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.