ನಟಿ ರೂಪಿಕಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ! ಇತ್ತೀಚೆಗೆ ಸ್ಲಿಮ್ ಆಗಿದ್ದು ಬಿಟ್ಟರೆ ರೂಪಿಕಾದ್ದು ಬೇರೆ ಯಾವ ಸುದ್ದಿಯೂ ಇರಲಿಲ್ಲ. ಮೊನ್ನೆ ಮೊನ್ನೆಯಷ್ಟೇ “ಭರತನಾಟ್ಯ’ ಮಾಡಿ ಒಂದಷ್ಟು ಸುದ್ದಿಯಾಗಿದ್ದ ರೂಪಿಕಾ, ಇದೀಗ ಹೊಸ ಸಿನಿಮಾವೊಂದರ ನಾಯಕಿಯಾಗಿದ್ದಾರೆ. ಹೌದು, ರೂಪಿಕಾ
“ಥರ್ಡ್ ಕ್ಲಾಸ್’ ಎಂಬ ಹೊಸಬರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಬುಧವಾರ ಸದ್ದಿಲ್ಲದೆ ಚಾಲನೆಯೂ ಸಿಕ್ಕಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ, ತಂಡಕ್ಕೆ ಶುಭಹಾರೈಸಿದ್ದಾರೆ. ನಟಿ ಪ್ರಿಯಾಮಣಿ, ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ಶರವಣ ಸೇರಿದಂತೆ ಇತರೆ ಗಣ್ಯರು ಕೂಡ ಈ ವೇಳೆ ಹಾಜರಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಈ ಚಿತ್ರದ ಮೂಲಕ ಅಶೋಕ್ ದೇವ್ ನಿರ್ದೇಶಕ ರಾಗುತ್ತಿದ್ದಾರೆ. ಇದಕ್ಕೂ ಮುನ್ನ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಅಶೋಕ್ ದೇವ್. ಇನ್ನು, ಚಿತ್ರಕ್ಕೆ ಜಗದೀಶ್ ಪವಾರ್ ನಾಯಕರಾಗುತ್ತಿದ್ದಾರೆ. ಸೆವೆನ್ ಹಿಲ್ಸ್ ಸ್ಟುಡಿಯೋ ಬ್ಯಾನರ್ ನಲ್ಲಿ ಜಗದೀಶ್ ಪವಾರ್ ಅವರೇ ನಿರ್ಮಾ ಣದ ಜವಾಬ್ದಾರಿ ಹೊತ್ತಿದ್ದಾರೆ. ಶಶಿನಾಯಕ್, ಬಿ.ಎಂಕೃಷ್ಣಪ್ಪ ಸಹ ನಿರ್ಮಾಪಕರು.
ಇಲ್ಲಿ ದಿವ್ಯಾರಾವ್ ಎಂಬ ಇನ್ನೊಬ್ಬ ನಾಯಕಿಯೂ ಇದ್ದಾರೆ. ಅವರಿಗೂ ಇದು ಮೊದಲ ಸಿನಿಮಾ. “ಏನಿದು ಚಿತ್ರದ ಶೀರ್ಷಿಕೆ ಹೀಗಿದೆ. ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕು’ ಎಂಬ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿದರೆ, “ಥರ್ಡ್‌ಕ್ಲಾಸ್’ ಅನ್ನುವುದನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. “ಮೂರನೇ ಕ್ಲಾಸ್’ ಅಂದುಕೊಳ್ಳಲೂ ಅಡ್ಡಿಯಿಲ್ಲ. ಶೀರ್ಷಿಕೆಗೆ “ಹಣೆ ಬರಹಕ್ಕೆ ಹೊಣೆ…?’ ಎಂಬ ಅಡಿಬರಹವೂ ಇದೆ. ಶೀರ್ಷಿಕೆ ಯಾಕೆ ಹೀಗೆ ಎಂಬುದಕ್ಕೆ ಸಿನಿಮಾದಲ್ಲೇ ಉತ್ತರ ಸಿಗಲಿದೆ’ ಎನ್ನುತ್ತಾರೆ ಅಶೋಕ್ ದೇವ್.
ಹಾಗಾದರೆ, ಈ “ಥರ್ಡ್‌ಕ್ಲಾಸ್’ ಕಥೆಯ ಗುಟ್ಟೇನು? ಈ ಪ್ರಶ್ನೆಗೆ ಉತ್ತರವಾಗುವ ಅಶೋಕ್‌ದೇವ್, ಇಲ್ಲಿ ಲೋ ಕ್ಲಾಸ್, ಮಿಡ್ಲ್ಕ್ಲಾಸ್ ಮತ್ತು ಹೈ ಕ್ಲಾಸ್’ ಎಂಬ ಮೂರು ಕಾನ್ಸೆಪ್ಟ್ಗಳಿವೆ. ಇವುಗಳ ಜತೆ ತಂದೆ ಮಗಳ ಸೆಂಟಿಮೆಂಟ್, ಪ್ರೀತಿ, ಗೆಳೆತನ, ಹಾಸ್ಯ ಎಲ್ಲವೂ ಒಳಗೊಂಡಿದೆ.
ನಿರ್ಮಾಪಕ ಜಗದೀಶ್ ಪವಾರ್ ಅವರ ಕಥೆಗೆ ನಾನು ಗೆಳೆಯರೊಂದಿಗೆ ಸೇರಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ. ಚಿತ್ರದಲ್ಲಿ ಅವಿನಾಶ್, ರಮೇಶ್‌ಭಟ್, ಮೋಹನ್ ಜುನೇಜಾ, “ಮಜಾ ಟಾಕೀಸ್’ ಪವನ್, ಪೆಟ್ರೋಲ್ ಪ್ರಸನ್ನ, ಸಂಗೀತಾ, ಶಶಿಕಲಾ, ಹರೀಶ್, ನಿಪ್ಪು ಹಾಗೂ ಖಳನಟರಾಗಿ ರಾಜ್ ಉದಯ್ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸುತ್ತಿದ್ದೇನೆ. ಜೆಸ್ಸಿಗಿಫ್ಟ್
ಸಂಗೀತವಿದೆ.