Advertisement

ಕೊವಿಶೀಲ್ಡ್‌ ಡೋಸ್‌ ಅಂತರ ತಗ್ಗಿಸಲು ಚಿಂತನೆ

11:35 PM Aug 05, 2021 | Team Udayavani |

ಹೊಸದಿಲ್ಲಿ: ಕೊವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಇಳಿಸುವ ಬಗ್ಗೆ ಕೇಂದ್ರ ಸರಕಾರ ಪರಿಶೀಲನೆ ನಡೆಸುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಈ ಅಂತರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಲಸಿಕೆಯ ಲಭ್ಯತೆ ಹೆಚ್ಚಳವಾಗಿರುವ ಕಾರಣ ಮತ್ತು ಅಂತರ ಹೆಚ್ಚಿರುವ ಕುರಿತು ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರಕಾರ ಈ ಚಿಂತನೆ ನಡೆಸುತ್ತಿದೆ. ಪ್ರಸ್ತುತ ಕೊವಿಶೀಲ್ಡ್‌ನ ಒಂದು ಡೋಸ್‌ ಪಡೆದವರು 12-16 ವಾರಗಳ ಅನಂತರ ಎರಡನೇ ಡೋಸ್‌ ಪಡೆಯಬೇಕು ಎಂಬ ನಿಯಮ ಜಾರಿಯಲ್ಲಿದೆ. ಭಾರತೀಯ ಲಸಿಕೆ ಸಂಬಂಧಿ ರಾಷ್ಟ್ರೀಯ ತಾಂತ್ರಿಕ ಸಲಹೆ ಸಮಿತಿ (ಎನ್‌ಟಿಎಜಿಐ)ಯ ಸಭೆ ಮುಂದಿನ ವಾರ ನಡೆಯಲಿದ್ದು, ಈಗಾಗಲೇ ಸಂಗ್ರಹಿಸಿರುವ ವೈಜ್ಞಾನಿಕ ದತ್ತಾಂಶಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ. ಕೊವಿಶೀಲ್ಡ್‌ನ ಒಂದೇ ಡೋಸ್‌ ಕೂಡ ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿ ಎಂಬ ಅಂಶವು ಈಗಾಗಲೇ ಸಾಬೀತಾಗಿದೆ ಎಂದು ಸಮಿತಿಯ ಮುಖ್ಯಸ್ಥ ಡಾ| ಎನ್‌.ಕೆ. ಅರೋರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next