Advertisement

ಬಸ್‌ ಪಾಸ್‌ ನೀಡಲು ಚಿಂತನೆ: ಸಚಿವ

01:02 PM Jan 11, 2018 | Team Udayavani |

ಮಾಗಡಿ: ಛಾಯಾಚಿತ್ರ ಮತ್ತು ವಿಡಿಯೋ ಗ್ರಾಫ‌ರ್ಗಳಿಗೆ ಸರ್ಕಾರಿ ಬಸ್‌ ಪಾಸ್‌ ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದು
ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು.

Advertisement

ಪಟ್ಟಣದ ಕನ್ನಿನಾ ಮಹಲ್‌ನಲ್ಲಿ ಫೋಟೊ ಮತ್ತು ವಿಡಿಯೋ ಗ್ರಾಫ‌ರ್ಗಳ ಜಿಲ್ಲಾ ಮಟ್ಟದ “ಛಾಯಾ ಹಬ್ಬ’ದ ಪ್ರಥಮ ವರ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಪ್ಪು ಮತ್ತು ಬಿಳುಪಿನ ನಡುವೆ ಗ್ರಾಹಕರ ಛಾಯಾಚಿತ್ರ ಮತ್ತು ವಿಡಿಯೋ ಗ್ರಾಫ‌ರ್ಗಳ ಬದುಕು ಸಾಗಿದೆ. ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ನಿಮ್ಮ ನೋವಿಗೆ ತಾವು ಸ್ಪಂದಿಸುತ್ತೇವೆ. ಸಮಸ್ಯೆಗಳ ನಿವಾರಣೆಗೆ ತಮ್ಮ ಸಹಕಾರ
ಸಂಪೂರ್ಣವಿದೆ. ತಮ್ಮ ಮಕ್ಕಳಲ್ಲಿನ ಪ್ರತಿಭೆ ಅನಾವರಣ ಗೊಳಿಸುವಂತ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ಇನ್ನಿತರೆ
ಯಾವುದೇ ಕಾರ್ಯ ಕ್ರಮಗಳಿರಲಿ ತಮ್ಮ ಸಹಕಾರ ನೀಡಲು ಸದಾ ಬದ್ಧನಾಗಿದ್ದೇನೆ. ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಛಾಯಾಚಿತ್ರಗಾರರ ನೆರವಿಗೆ ಸರ್ಕಾರ ಸ್ಪಂದಿಸಲಿ: ಜಿಪಂ ಸದಸ್ಯ ಎ.ಮಂಜು ಮಾತನಾಡಿ, ಹಿಂದಿನ ನೆನಪುಗಳನ್ನು ಮಾಡಿಕೊಳ್ಳುವುದಕ್ಕೆ ಫೋಟೊಗಳೇ ಸಾಕ್ಷಿಯಾಗಿದ್ದವು. ಇತ್ತೀಚಿಗೆ ಛಾಯಾಚಿತ್ರಗಾರಿಗೆ ಕೆಲಸವಿಲ್ಲದಂತಾಗಿದ್ದು, ನೋವಿನ ವಿಚಾರ. ಅವರ ನೆರವಿಗೆ ಸರ್ಕಾರ ಬರಬೇಕಿದೆ. ಸರ್ಕಾರಿ ಕಚೇರಿಗಳಲ್ಲಿಯೂ ಅಧಿಕಾರಿಗಳ ಮೊಬೈಲ್‌ ಬಳಕೆ ನಡೆದಿದೆ. ಇದರಿಂದ ಫೋಟೊ ಮತ್ತು ವಿಡಿಯೋ ಗ್ರಾಫ‌ರ್‌ಗಳಿಗೆ ಕೆಲಸವಿಲ್ಲದಂತಾಗಿ ಜೀವನ ಕಷ್ಟಕರವಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ರಾಜ್ಯದಲ್ಲೂ ಅಕಾಡೆಮಿ ಸ್ಥಾಪಿಸಲಿ: ಕೆಪಿಎ ರಾಜ್ಯ ಉಪಾಧ್ಯಕ್ಷ ನಾಗೇಶ್‌ ಮಾತನಾಡಿ, ನೆರೆ ರಾಜ್ಯಗಳಲ್ಲಿ ಫೋಟೊ ಮತ್ತು ವಿಡಿಯೋ ಗ್ರಾಫ‌ರ್ಗಳಿಗೆ ಅಕಾಡೆಮಿ ಸ್ಥಾಪಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ಅಕಾಡೆಮಿ ಸ್ಥಾಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
 
ಇದೇ ವೇಳೆ ಹಿರಿಯ ಚಿತ್ರ ಗ್ರಾಹಕರು ಮತ್ತು ವಿಡಿಯೋ ಗ್ರಾಹಕರುಗಳಿಗೆ ಸಂಘದ ವತಿಯಿಂದ ಶಾಲು ಹೊದಿಸಿ
ಸನ್ಮಾನಿಸಲಾಯಿತು. ಗುಮ್ಮಸಂದ್ರ ಮಠದ ಚಂದ್ರಶೇಖರಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಾಸಕ ಎಚ್‌.ಸಿ.ಬಾಲಕೃಷ್ಣ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎ.ಎಚ್‌. ಬಸವರಾಜು, ಡಾ.ಎಂ.ಜಿ. ರಂಗಧಾಮಯ್ಯ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಜಿಪಂ ಮಾಜಿ ಅಧ್ಯಕ್ಷ
ಎಂ.ಕೆ.ಧನಂಜಯ, ಪಿ.ವಿ.ಸೀತಾರಾಂ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್‌.ಸುರೇಶ್‌ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್‌, ಶಶಿಧರ್‌, ಚಿಕ್ಕಣ್ಣ, ಸುರೇಶ್‌ ಜಿಲ್ಲಾಧ್ಯಕ್ಷ ಸುರೇಶ್‌, ತಾಲೂಕು ಅಧ್ಯಕ್ಷ ನಿಂ.ಪ್ರಕಾಶ್‌, ಉಪಾಧ್ಯಕ್ಷ ಎ.ವಿ. ಮಹೇಶ್‌, ಗೌರವಾಧ್ಯಕ್ಷ ಸತೀಶ್‌, ಕಾರ್ಯದರ್ಶಿ ಲಕ್ಷ್ಮೀಪತಿ, ಖಜಾಂಚಿ ಎಂ.ಎಸ್‌.ರವಿ, ರಾಜಶೇಖರ್‌, ಶಿವರಾಜು, ಶಿವಕುಮಾರ್‌ ವೆಂಕಟೇಶ್‌, ಸಿದ್ದಮಾದು ಬದರೀನಾಥ್‌, ಮಂಜುನಾಥ್‌, ಶ್ರೀನಿವಾಸಮೂರ್ತಿ, ಜಯಣ್ಣ, ಬಾಬು, ಆನಂದಕುಮಾರ್‌, ದೇವರಾಜು ಸೇರಿದಂತೆ ಇತರರು ಇದ್ದರು.

Advertisement

ಮೊಬೈಲ್‌ ಕ್ಯಾಮರಾಗಳು ನಿಷೇಧಿಸಿದರೆ ಮಾತ್ರ ಫೋಟೋ ಮತ್ತು ವಿಡಿಯೋ ಗ್ರಾಫ‌ರ್ಗಳು ಉಳಿಯಲು ಸಾಧ್ಯ,
ಇಲ್ಲದಿದ್ದರೆ ಅವರ ಬದುಕು ಕತ್ತಲು ಮನೆಯಂತಾಗಲಿದೆ. ಮೊಬೈಲ್‌ ಕ್ಯಾಮರಾ ನಿಷೇಧ ಕುರಿತು ಸದನದಲ್ಲಿ
ಚರ್ಚಿಸಲಾಗುವುದು.  ಫೋಟೋ ಮತ್ತು ವಿಡಿಯೋ ಗ್ರಾಫ‌ರ್ಗಳ ಸಂಘದ ಭವನ ನಿರ್ಮಿಸಿಕೊಳ್ಳಲುಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ಸಿಎ ಜಾಗದಲ್ಲಿ ಉಚಿತವಾಗಿ ನಿವೇಶನ ಕೊಡಲಾಗುವುದು.
●ಎಚ್‌.ಸಿ.ಬಾಲಕೃಷ್ಣ , ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next