Advertisement

ಪ್ರವಾಸಿ ಮಿತ್ರರ ನೇಮಕಕ್ಕೆ ಚಿಂತನೆ : ಪ್ರಿಯಾಂಕ್‌ ಖರ್ಗೆ

12:06 PM Sep 17, 2017 | Team Udayavani |

ಬೆಂಗಳೂರು:ರಾಜ್ಯದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೆ ಸಮರ್ಪಕ  ಮಾಹಿತಿ ನೀಡುವುದರ ಜತೆಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ  ಪ್ರವಾಸೋದ್ಯಮ ಇಲಾಖೆಯಿಂದಲೇ ‘ಪ್ರವಾಸಿ ಮಿತ್ರ’ರನ್ನು ನೇಮಕ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

Advertisement

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ‘ಓಲಾ’ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿರುವ ‘ಜವಾಬ್ದಾರಿಯುತ ಪ್ರವಾಸೋದ್ಯಮ’ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು,   ಪ್ರವಾಸಿ ತಾಣಗಳಲ್ಲಿ ಈಗಾಗಲೇ 500 ಗೃಹರಕ್ಷಕರನ್ನು ಪ್ರವಾಸಿ ಮಿತ್ರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದ್ದು, ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿ¨ªಾರೆ. ಇಲಾಖೆಯಿಂದಲೇ ಶಾಶ್ವತವಾಗಿ ಪ್ರವಾಸಿ ಮಿತ್ರರನ್ನು ನೇಮಕ ಮಾಡಿಕೊಳ್ಳುವ ಬಗ್ಗೆಯೂ ಪರಿಶೀಲನಡೆ ನಡೆಸಲಾಗಿದೆ ಎಂದು ಹೇಳಿದರು.

ಪ್ರವಾಸಿ ಮಿತ್ರರಾಗಿ ನೇಮಕ ಮಾಡಿಕೊಂಡಿರುವವರಿಗೆ ಪ್ರವಾಸಿಗರ ಬಳಿ ಹೇಗೆ ನಡೆದುಕೊಳ್ಳಬೇಕು ಹಾಗೂ ಅವರಿಗೆ ಭದ್ರತೆ ಒಗಿಸುವ ಸಂಬಂಧ ತರಬೇತಿ ನೀಡಲಾಗುವುದು ಎಂದರು.

14 ದಿನಗಳ ಪ್ರವಾಸ
ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಓಲಾ ಸಂಸ್ಥೆ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದರಂತೆ ರಾಜ್ಯಗಳಲ್ಲಿನ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕೊಂಡೊಯ್ಯುವ 14 ದಿನಗಳ  ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ಸಿಗಾಗಿ ಚಿತ್ರನಟಿ  ಶಹನಾಜ್‌ ರಹಾರಿ ಅವರು  ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದ ಪ್ರವಾಸಿ ತಾಣಗಳಾದ ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಂಸ್ಕೃತಿ, ಅಲ್ಲಿನ ಜನಜೀವನ, ಆರ್ಥಿಕ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ಅಭಿಯಾನ ಸಹಕಾರಿಯಾಗಲಿದೆ ಎಂದು ತಿಳಿಸಿದರು.

Advertisement

ಪ್ರವಾಸಿಗರ ಮನೆ ಬಾಗಿಲಿಗೆ ಓಲಾ ಕಾರುಗಳು ತೆರಳಿ ಪ್ರವಾಸಿಗರನ್ನು ಅವರು ಬಯಸಿದ ತಾಣಗಳಿಗೆ ಕರೆದೊಯ್ದು ಮತ್ತೆ ಸುರಕ್ಷಿತವಾಗಿ ಮನೆಗೆ ಬಿಡುವ ಅಭಿಯಾನ ಇದಾಗಿದೆ. ಮಹಿಳೆಯರೂ ಕೂಡ ನಿರ್ಭೀತರಾಗಿ ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ಓಲಾ ಕಂಪನಿ ಸೂಕ್ತ ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು.

ಓಲಾ ಕಂಪನಿಯ ಪ್ರಣಯ್‌ ಜೀವರಾಜ್‌, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next