Advertisement
ಮನುಷ್ಯನೆಂದ ಮೇಲೆ ಸುಖ, ದು:ಖ, ಧೈರ್ಯ, ಭಯ, ಕೋಪ, ಪ್ರೀತಿ, ದ್ವೇಷ, ತೃಪ್ತಿ -ಅತೃಪ್ತಿ , ಕೀಳರಿಮೆ ಅಹಂಕಾರ ಇದ್ದೇ ಇರುತ್ತದೆ. ಕಷ್ಟ -ನೋವು ಮತ್ತು ಲಾಭ- ನಷ್ಟದ ಜತೆಗೆ ಸೋಲು- ಗೆಲುವು ಮತ್ತು ಯಶಸ್ಸು ನಿರಾಶೆಗಳೂ ಇದೆ. ಈ ನಕಾರಾತ್ಮಕ ಭಾವನೆಗಳನ್ನು ಸರಿಯಾಗಿ ನಿಭಾಯಿಸದಿದ್ದರೆ ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಿಂದ ಹೊರಬರಲು ಸಕಾರಾತ್ಮಕ ಚಿಂತನೆಯೇ ದಾರಿ. ಸಣ್ಣಪುಟ್ಟ ಸಂಗತಿಗಳಿಗೆ. ಅನುಕೂಲತೆಗಳಿಗೆ ಸಂತೋಷಪಡಿ. ನಕಾರಾತ್ಮಕ ಆಲೋಚನೆಗಳನ್ನು ಹಾಗೂ ಅನುಭವಗಳನ್ನು ಬದಲಿಸಿ ಸಕಾರಾತ್ಮಕವಾಗಿ ಆಶಾವಾದಿಯಾಗಿ ಯೋಚಿಸಿ ಮತ್ತು ಕಾರ್ಯಪ್ರವೃತ್ತರಾಗಿ ವಾಸ್ತವಿಕತೆಯನ್ನು , ಸತ್ಯವನ್ನು ಒಪ್ಪಿಕೊಳ್ಳಿ ಮತ್ತು ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿ. ಎಲ್ಲರಿಗೆ ಪ್ರೀತಿ , ವಾತ್ಸಲ್ಯ, ಸ್ನೇಹವನ್ನು ಕೊಡಿ. ನಾನು ಏನೂ ಅಲ್ಲ ನಾನೇ ಎಲ್ಲಾ ಎಂಬುವುದನ್ನು ಬಿಟ್ಟು ನನ್ನಿಂದಲೂ ಸಾಧ್ಯವಿದೆ ಎಂದು ಮುಂದುವರಿಯುವುದೇ ಸಕಾರಾತ್ಮಕ ಚಿಂತನೆ. ಈ ಸಕಾರಾತ್ಮಕ ಮನೋಭಾವನೆ ಕುರಿತು ಮಕ್ಕಳಲ್ಲೂ ಅರಿವು ಮೂಡಿಸಬೇಕು.
· ಆತ್ಮವಿಶ್ವಾಸ ಹೆಚ್ಚಿಸುವುದು
· ಮಾನಸಿಕ ಒತ್ತಡ ಕಡಿಮೆಯಾಗುವುದು
· ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು
· ಸಂಶೋಧನೆಗಳ ಪ್ರಕಾರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
· ಸುದೀರ್ಘ ಮತ್ತು ಸಂತೋಷದ ಜೀವನವನ್ನು ಅನುಭವಿಸಬಹುದು.
· ಶಾಂತ ಚಿತ್ತ ಮನಸ್ಸು ಮತ್ತು ನಿದ್ರೆ
· ನಾವು ಸಕಾರಾತ್ಮಕವಾಗಿ ಯೋಚಿಸಿದಾಗ ನಮ್ಮ ಮಿದುಳಿನಿಂದ ಎಂಡಾರ್ಫಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಅದು ನಮ್ಮ ದೇಹದ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. - ಡಾ| ರೇಷ್ಮಾ ಭಟ್, ಬೆಂಗಳೂರು