Advertisement

ಆಲೋಚಿಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ: ಜಯಪ್ರಕಾಶ್‌ ಹೆಗ್ಡೆ

09:11 PM Jan 25, 2020 | mahesh |

ಉಡುಪಿ: ಇಂದಿನ ರಾಜಕೀಯ ಸನ್ನಿವೇಶಕ್ಕೆ ಒಂದು ರೀತಿಯಲ್ಲಿ ಪ್ರಜೆಗಳು ನೇರ ಕಾರಣ. ಮತದಾನದ ಸಮಯದಲ್ಲಿ ಪ್ರಜೆಗಳು ಯೋಚಿಸಿ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕೆಂದು ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಅವರು ಅಭಿಪ್ರಾಯಿಸಿದರು.

Advertisement

ಎಂಜಿಎಂ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಕಾಲೇಜಿನ ಕಲಾವಿಭಾಗ ಸಂಘ, ರಾಜಕೀಯಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ಮತದಾರ ಮತ್ತು ಪ್ರಜಾಪ್ರಭುತ್ವ ದಿನಾಚಾರಣೆ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಪ್ರತಿನಿಧಿಯಾದವರು ಸಂವಿಧಾನದ ಅಧ್ಯಯನ ಮಾಡದಿದ್ದರೆ ಸದನಗಳ ಮಹತ್ವ ಹೇಗೆ ಅರಿಯಲು ಸಾಧ್ಯ? ಒಂದು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತ್ರ ದೃಷ್ಟಿ ಕೇಂದ್ರೀಕರಿಸದೆ, ಒಟ್ಟಾರೆ ರಾಜ್ಯದ ಅಭಿವೃದ್ಧಿಗೆ ಏನೆಲ್ಲ ಕಾರ್ಯಗಳು ಆಗಬೇಕೆಂಬ ಚರ್ಚೆಗಳನ್ನು ಜನಪ್ರತಿನಿಧಿಯಾದವರು ಮಾಡಬೇಕೆಂದು ಅವರು ಅಭಿಪ್ರಾಯಿಸಿದರು.

ಜನಪತ್ರಿನಿಧಿಗಳು ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯ ಹೆಸರು, ಪ್ರತಿಷ್ಠೆಯನ್ನು ಬಳಸಿ ಗೆಲ್ಲುವುದು ನಿಜವಾದ ಗೆಲುವಲ್ಲ. ಜನರು ಕೂಡ ತಮ್ಮ ಕ್ಷೇತ್ರದ ಯೋಗ್ಯ ವ್ಯಕ್ತಿಯನ್ನು ಆರಿಸಬೇಕೆ ಹೊರತು, ಪಕ್ಷ ನೋಡಿ ಅಲ್ಲ. ಜನಪ್ರತಿನಿಧಿಗಳು ಸದನ ಸೇರಿದಂತೆ ಕ್ಷೇತ್ರದಲ್ಲಿ ಏನೆಲ್ಲ ಕಾರ್ಯ ಮಾಡುತ್ತಿದ್ದಾರೆ ಎಂಬ ಬಗೆಗೆ ಜನರು ಗಮನಿಸಿ, ಶಾಸಕರನ್ನು ಪ್ರಶ್ನೆ ಮಾಡಬೇಕು. ಎಷ್ಟು ಅವಧಿ ಅಧಿಕಾರದಲ್ಲಿದೆ ಅನ್ನುವುದಕ್ಕಿಂತ ಅಧಿಕಾರದ ಅವಧಿಯಲ್ಲಿ ಎನ್ನೆಲ್ಲ ಅಭಿವೃದ್ಧಿ ಕಾರ್ಯಗಳು ಮಾಡಲಾಗಿದೆ ಎಂಬ ತೃಪ್ತಿ ರಾಜಕೀಯ ವ್ಯಕ್ತಿಗೆ ಇರಬೇಕೆಂದು ಎಂದು ತಿಳಿಸಿದರು.

ಬಳಿಕ ವಿದ್ಯಾರ್ಥಿಗಳ ಸಂವಾದದಲ್ಲಿ 2 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುವುದು ಸರಿಯೇ ಎಂಬ ಪ್ರಶ್ನೆಗೆ ಇದು ಸರಕಾರ, ಪ್ರಜೆಗಳ ಬೊಕ್ಕಸದ ಮೇಲೆ ಪರಿಣಾಮ ಬೀರುತ್ತದೆ. 2 ಕ್ಷೇತ್ರದಲ್ಲಿ ಸ್ಪರ್ಧಿಸುವುದರಿಂದ ಅಭ್ಯರ್ಥಿಗೆ ಕ್ಷೇತ್ರದ ಪರಿಚಯವೂ ಇಲ್ಲದೆ ಅಲ್ಲಿ ಹೇಗೆ ಅಭಿವೃದ್ದಿ ಕೆಲಸ ನಡೆಯಲು ಸಾಧ್ಯ? ಹಿಂದೆಯೂ ಈ ಬಗ್ಗೆ ಚರ್ಚೆಗಳಾಗಿದ್ದು ಮತದಾರ ಈ ಬಗ್ಗೆ ಮತ್ತೆ ಪ್ರಶ್ನಿಸುವ ಅಗತ್ಯ ಇದೆ ಎಂದರು. ಬಳಿಕ ರಾಜಕೀಯ ವ್ಯಕ್ತಿಗಳ ನಿವೃತ್ತಿ ವಯಸ್ಸಿನ ಕುರಿತ ಚರ್ಚೆಯಲ್ಲಿ ಪ್ರಮಾಣಿಕವಾದ ಜನಪ್ರತಿನಿಧಿ ವಯಸ್ಸಾದ ಬಳಿಕ ಹೊಸ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕೆಂದು ಜಯಪ್ರಕಾಶ್‌ ಹೆಗ್ಡೆ ಅವರು ಅಭಿಪ್ರಾಯಿಸಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ ಅವರು ಮಾತನಾಡಿ, ಪ್ರತಿನಿಧಿಗಳನ್ನು ಕರೆದು ಅವರೊಂದಿಗೆ ವಿದ್ಯಾರ್ಥಿಗಳು ಚರ್ಚೆ ಮಾಡುವ ಮೂಲಕ ಪರಸ್ಪರ ವಿಷಯ ವಿನಿಮಯವಾಗಲು ಸಾಧ್ಯವಾಗುತ್ತದೆ. ರಾಜಕೀಯ ರಂಗದಲ್ಲಿ ಬದಲಾವಣೆ ಆಗಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಯುವಶಕ್ತಿಗಳಾದ ವಿದ್ಯಾರ್ಥಿಗಳ ಮೇಲೆ ದೊಡ್ಡ ಜವಾಬ್ದಾರಿ ಇದೆ. ರಾಜಕೀಯ ರಂಗದ ಕೊಳಕನ್ನು ತೆಗೆದು ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರು ಶ್ರಮಿಸಲಿ ಎಂದು ಅವರು ತಿಳಿಸಿದರು.ಎಂಜಿಎಂ ಪಿಯು ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ವಿದ್ಯಾರ್ಥಿ ನಾಯಕ ನವೀನ್‌ ಉಪಸ್ಥಿತರಿದ್ದರು.

Advertisement

ರಾಜಕೀಯಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಸುರೇಂದ್ರನಾಥ್‌ ಶೆಟ್ಟಿ ಅವರು ಸ್ವಾಗತಿಸಿ, ರಾಜಕೀಯಶಾಸ್ತ್ರದ ವಿಭಾಗದ ಮುಖ್ಯಸ್ಥ ವಿದ್ಯಾನಾಥ್‌ ಅವರು ವಂದಿಸಿದರು. ಶ್ರೇಯಸ್‌ ಕಾರ್ಯಕ್ರಮವನ್ನು ನಿರೂಪಿಸಿದರು

ಸ್ವಚ್ಛ ರಾಜಕೀಯ ವ್ಯವಸ್ಥೆ
ಆಲೋಚಿಸಿ ಮತಚಲಾಯಿಸಬೇಕೆ ವಿನಾ 5 ವರ್ಷ ಜನಪ್ರತಿನಿಧಿಯನ್ನು ದೂರುತ್ತಾ ಕೂರುವುದಲ್ಲ . ಮತದಾರ ಚುನಾವಣೆಯ ಸಂದರ್ಭದಲ್ಲಿ ಜನಪ್ರತಿನಿಧಿ ಸರಿ ಇಲ್ಲ ಎಂದು ಮತ ನೀಡದೆ ತಿರಸ್ಕಾರಿಸಿದಾಗ ಸಂಬಂಧ ಪಟ್ಟ ಪಕ್ಷ ಕಾರ್ಯೋನ್ಮುಖವಾಗಿ ಹೊಸ ಅಭ್ಯರ್ಥಿಯನ್ನು ಪರಿಚಯಿಸುತ್ತದೆ. ಹಾಗೇಯೆ ಇಂದಿನ ಯುವಕರಲ್ಲಿ ಅದರಲೂ ಮುಖ್ಯವಾಗಿ ವಿದ್ಯಾವಂತ ವಿದ್ಯಾರ್ಥಿಗಳ ಮೇಲೆ ಸ್ವಚ್ಛ ರಾಜಕೀಯ ವ್ಯವಸ್ಥೆಯನ್ನು ಮರು ಹುಟ್ಟುಹಾಕುವ ದೊಡ್ಡ ಹೊಣೆ ಇದೆ ಎಂದು ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next