ನಮ್ಮ ದೇಶದಲ್ಲಿ ಹಲವಾರು ಜನ ಅಪೌಷ್ಟಿಕತೆ ಹಾಗೂ ಹಸಿವಿನಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಮಾತ್ರವಲ್ಲದೆ ಆಫ್ರಿಕಾದಂತಹ ಬಡ ದೇಶಗಳಲ್ಲಿ ಒಂದು ತುತ್ತಿನ ಅನ್ನದ ಅಗುಳಿಗೂ ಜನ ಕಷ್ಟ ಪಡುತ್ತಿದ್ದಾರೆ. ಭಾರತದ ಕೃಷಿ ಸಚಿವಾಲಯವೂ ಪ್ರತಿ ವರ್ಷವೂ ಸುಮಾರು 50,000 ಕೋಟಿ ಮೌಲ್ಯದ ಆಹಾರ ವ್ಯರ್ಥವಾಗುತ್ತಿದೆ ಎಂದು ವರದಿ ಮಾಡಿದೆ.
ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲಾ ಆಹಾರದ 1/3 ಭಾಗವು ತಿನ್ನುವ ಮೊದಲೇ ವ್ಯರ್ಥವಾಗುತ್ತದೆ ಎಂದು FSSAI ವರದಿ ಮಾಡಿದೆ. ಹೆಚ್ಚು ಆಹಾರ ಹೋಟೆಲ್ ಗಳಲ್ಲಿ ಹಾಗೂ ಮದುವೆ ಮಂಟಪಗಳಲ್ಲಿ ವ್ಯರ್ಥವಾಗುತ್ತದೆ. ಆದರೆ ಜನ ಅದು ಸರಿ ಎಂದು ಭಾವಿಸುತ್ತಾರೆ ಏಕೆಂದರೆ ಅದಕ್ಕೆ ಪಾವತಿಸುತ್ತಾರೆಂದು, ಆದರೆ ಅದು ತಪ್ಪು. ಆಹಾರ ಪೋಲಾಗುವುದರಲ್ಲಿ ಚೀನಾ ಮತ್ತು ಭಾರತ ಅಗ್ರ ಸ್ಥಾನದಲ್ಲಿದೆ. ಅಂದಾಜಿನ ಪ್ರಕಾರ 68-76 ಮಿಲಿಯನ್ ಟನ್ ಗಳಷ್ಟು ಆಹಾರ ವ್ಯರ್ಥವಾಗುತ್ತಿದೆ.
ಒಟ್ಟು ಬೆಂಗಳೂರಿನಲ್ಲಿ 531 ಮದುವೆ ಮಂಟಪಗಳಿದ್ದು ವರ್ಷಕ್ಕೆ 84,690 ಮದುವೆಗಳು ನಡೆಯುತ್ತದೆ. ಅದರಲ್ಲಿ 943 ಟನ್ ಗಳಷ್ಟು ಒಳ್ಳೆಯ ಆಹಾರ ವ್ಯರ್ಥವಾಗುತ್ತಿದೆ. ಇದರ ಬೆಲೆ ಸುಮಾರು 339 ಕೋಟಿ ರೂಪಾಯಿ ಇದನ್ನು ಬಳಸಿದರೆ 2 ಕೋಟಿಗೂ ಹೆಚ್ಚು ಜನರ ಹಸಿವನ್ನು ಹೋಗಲಾಡಿಸಬಹುದು ಹಾಗೂ ಆಹಾರ ವ್ಯರ್ಥ ಮಾಡಿದಾಗ ಅದರಿಂದ ಮಿಥೇನ್ ಗ್ಯಾಸ್ ಉತ್ಪತ್ತಿಯಾಗುತ್ತದೆ, ಅದರಿಂದ ತಾಪಮಾನ ಹೆಚ್ಚಾಗುತ್ತದೆ.ಹಾಗಾಗಿ ಆಹಾರ ಪೋಲಾಗದಂತೆ ಎಚ್ಚರ ವಹಿಸೋಣ, ಹಾಗೂ ಅಗತ್ಯ ಇದ್ದವರಿಗೆ ನೀಡೋಣ.
-ಬಿ ಶರಣ್ಯ ಜೈನ್,
ದ್ವಿತೀಯ ಪತ್ರಿಕೋದ್ಯಮ
ಎಸ್.ಡಿ.ಎಂ ಕಾಲೇಜು ಉಜಿರೆ