Advertisement
ಇದನ್ನೂ ಓದಿ:ಆಲಮಟ್ಟಿ ಜಲಾಶಯದ ಒಳ ಹರಿವು ಹೆಚ್ಚಳ : ಕೃಷ್ಣಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
Related Articles
Advertisement
ಮಹಾನಗರದಲ್ಲಿ ಜೀವನ ಸಾಗಿಸುವುದು ಸುಲಭವಲ್ಲ. ಒಂದನ್ನು ಪಡೆದುಕೊಳ್ಳಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು. ಹಾಗಿರುವಾಗ ಯಾವುದು ನಮಗೆ ಹೆಚ್ಚು ಅಗತ್ಯವೋ ಎಂಬುದುನ್ನು ನೋಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಹೀಗಿರುವಾಗ ಇಲ್ಲಸಲ್ಲದ ಆಸೆಗಳನ್ನು ಮನದಲ್ಲಿ ಹುದುಗಿಡಬೇಕು ಎಂದೇನಿಲ್ಲ. ನಮಗೆ ಯಾವುದು ಸಾಧ್ಯವೋ ಅದನ್ನು ಈಡೇರಿಸಿಕೊಳ್ಳಬಹುದು. ದೊಡ್ಡ ಆಸೆ ಅಲ್ಲದಿದ್ದರೂ ಚಿಕ್ಕಪುಟ್ಟ ಆಸೆಗಳನ್ನು ಈಡೇರಿಸಿಕೊಂಡು ಕುಟುಂಬ ಸಮೇತ ಎಲ್ಲರೂ ಖುಷಿ ಪಡಬಹುದು.
ನಿಜವಾದ ಖುಷಿ ಇರೋದು ದೊಡ್ಡದನ್ನು ಪಡೆದರೆ ಮಾತ್ರವಲ್ಲ ಚಿಕ್ಕಪುಟ್ಟ ಆಸೆಗಳನ್ನು ಈಡೇರಿಸಿದರೂ ಅದರಲ್ಲಿ ಹೆಚ್ಚು ಖುಷಿ ಸಿಗುತ್ತದೆ. ದೊಡ್ಡದ್ದನ್ನು ಪಡೆದಾಗ ಕೇವಲ ಖುಷಿ ಮಾತ್ರ ನಮ್ಮದಾಗುವುದಿಲ್ಲ. ಅದರೊಂದಿಗೆ ಸಾಕಷ್ಟು ಜವಾಬ್ದಾರಿಯೂ ನಮ್ಮನ್ನು ಅರಸಿಕೊಂಡು ಬರುವುದು. ಹೀಗಾಗಿ ಎಲ್ಲದಕ್ಕೂ ಸಜ್ಜಾಗುವ ಮೊದಲು ನಮಗೆ ಅದರ ಅಗತ್ಯವೇನಿದೆ ಎಂಬುದನ್ನೊಮ್ಮೆ ಪರಿಶೀಲಿಸಬೇಕು. ಕುಟುಂಬ ಎಂದರೆ ಅಲ್ಲಿ ನಾವೊಬ್ಬರೇ ಅಲ್ಲ. ನಮ್ಮವರೂ ಇರುತ್ತಾರೆ. ಹೀಗಿರುವಾಗ ನಮ್ಮ ಒಂದು ನಿರ್ಧಾರದಿಂದ ಎಲ್ಲರನ್ನೂ ಸಂಕಷ್ಟಕ್ಕೆ ದೂಡಬಾರದಲ್ಲವೇ. ಹೀಗಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುವುದುಮುಖ್ಯವಾಗುತ್ತದೆ.