Advertisement
ಪ್ರಕರಣ-1ಜೆ.ಪಿ. ನಗರ ನಿವಾಸಿ ವೆಂಕಟೇಶ್ ಅಯ್ಯರ್ ಸಂಬಂಧಿಯೊಬ್ಬರಿಗೆ ಗುಜರಾತಿ ಗಾಗ್ರಾ ಖರೀದಿಸಲು ಲೋಕ್ಯಾಂಟೋ ವೆಬ್‌ಸೈಟ್ ಶೋಧಿಸಿದ್ದರು. ಅದರಲ್ಲಿ ಉಲ್ಲೇಖೀಸಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಆರೋಪಿಗಳು, ಉತ್ತಮ ಕಂುಪನಿಯ ಗಾಗ್ರಾ ಇದ್ದು, ಕಳುಹಿಸುತ್ತೇವೆ. ಮುಂಗಡವಾಗಿ ಡೆಲಿವರಿ ಶುಲ್ಕ ಎಂದು ಹಂತ-ಹಂತವಾಗಿ 4,400 ರೂ. ದೋಚಿದ್ದಾರೆ. ಅನಂತರ ಮೊಬೈಲ್ ಸ್ವಿಚ್x ಆಫ್ ಮಾಡಿಕೊಂಡಿದ್ದಾರೆ. ವೆಂಕಟೇಶ್ ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಲಹಂಕ ನಿವಾಸಿ ಪುರುಷೋತ್ತಮ್ ಉತ್ತಮ ಕಂಪೆನಿಯ ಮೊಬೈಲ್ ಖರೀದಿಗೆ ಮುಂದಾಗಿದ್ದರು. ಆಗ ಇನ್‌ಸ್ಟ್ರಾಗ್ರಾಂನಲ್ಲಿ ಬಂದಿದ್ದ ವೆಬ್‌ಸೈಟ್‌ವೊಂದರ ಲಿಂಕ್ ತೆರೆದು, 39 ಸಾವಿರ ರೂ. ಮೌಲ್ಯದ ಮೊಬೈಲ್ ಬುಕ್ ಮಾಡಿದ್ದಾರೆ. ಆದರೆ, ಮೊಬೈಲ್ ಬಂದಿಲ್ಲ. ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪುರುಷೋತ್ತಮ್ ದೂರು ದಾಖಲಿಸಿದ್ದಾರೆ. ಪ್ರಕರಣ-3
ಚಾಮರಾಜಪೇಟೆ ನಿವಾಸಿ ಮಧುಸೂದನ್, ಒಎಲ್‌ಎಕ್ಸ್‌ನಲ್ಲಿ ನೀಡಿದ್ದ ವಾಹನ ಮಾರಾಟದ ಜಾಹಿರಾತು ಕಂಡು, ಉಲ್ಲೇಖೀಸಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ. ಮುಂಗಡ ಹಣ ಕೊಡಬೇಕೆಂದು 15 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡು, ನಂಬರ್ ಮೊಬೈಲ್ ಸ್ವಿಚ್x ಆಫ್ ಮಾಡಿಕೊಂಡಿದ್ದಾನೆ. ಅಲ್ಲದೆ, ಜಾಹಿರಾತು ಕೂಡ ಡಿಲೀಟ್ ಮಾಡಲಾಗಿದೆ. ಈ ಕುರಿತು ಪಶ್ಚಿಮ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement
ನಕಲಿ ವೆಬ್‌ಸೈಟ್ ಪತ್ತೆ ಕಷ್ಟ!ಸಾಮಾನ್ಯವಾಗಿ ನಕಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳು ಪತ್ತೆ ಹಚ್ಚುವುದು ಸಾಮಾನ್ಯ ವ್ಯಕ್ತಿಗೆ ಕಷ್ಟವಾಗುತ್ತದೆ. ವೆಬ್‌ಸೈಟ್ ಯಾರದ್ದು? ಮಾಲಕರ್ಯಾರು? ಎಂದೆಲ್ಲ ಶೋಧಿಸುವುದು ಸವಾಲಿನ ಕೆಲಸ. ಜತೆಗೆ ಅಸಲಿ ವೆಬ್‌ಸೈಟ್‌ಗಳ ಮಾದರಿಯಲ್ಲೇ ಇರುವುದರಿಂದ, ಕೆಲವೊಂದು ರಿಯಾಯಿತಿಗಳ ಆಮಿಷವೊಡ್ಡುವುದರಿಂದ ಸಾರ್ವಜನಿಕರು ಬೇಗನೆ ವಂಚನೆಗೊಳ್ಳಗಾಗುತ್ತಿದ್ದಾರೆ. ಮತ್ತೂಂದೆಡೆ ವೆಬ್‌ಸೈಟ್ ತೆರೆಯಲು ಕಠಿನವಾದ ನಿಯಮಗಳು ಭಾರತದಲ್ಲಿ ಇಲ್ಲ. ಕೇಂದ್ರ ಸರಕಾರ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡುವ ಬದಲು, ಕಠಿನವಾದ ಮಾನದಂಡಗಳನ್ನು ಜಾರಿಗೆ ತರಲಿ. ಅವುಗಳನ್ನು ಪೂರೈಸದಿರುವ ವೆಬ್‌ಸೈಟ್‌ಗಳನ್ನು ನಿಷ್ಟ್ರೀಯಗೊಳಿಸಬೇಕು ಎನ್ನುತ್ತಾರೆ ಸೈಬರ್ ತಜ್ಞೆ ಶುಭಮಂಗಳ. ಸಾರ್ವಜನಿಕರು ಏನು ಮಾಡಬೇಕು?
-ಯಾವುದೇ ಇ-ಕಾಮರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೊದಲು ಪರಿಶೀಲಿಸಬೇಕು.
-ವಿಮರ್ಶೆಗಳ ಬಗ್ಗೆ ಜಾಗೃತರಾಗಿರಿ.
-ಒಂದು ವೇಳೆ ವೆಬ್‌ಸೈಟ್ ಬಗ್ಗೆ ಅನುಮಾನವಿದ್ದರೆ “ಕ್ಯಾಶ್ ಆನ್ ಡೆಲಿವರಿ’ ಆಯ್ಕೆ ಮಾಡಿಕೊಳ್ಳಿ.
-ಯಾವುದೇ ಕಾರಣಕ್ಕೂ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ, ನೆಟ್‌ಬ್ಯಾಂಕ್ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೊಂದಾಯಿಸಬೇಡಿ. ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್‌ನಲ್ಲಿ ಮಾರಾಟ ವಸ್ತುಗಳ ಜಾಹಿರಾತು ಅಥವಾ ಫೋಟೋಗಳನ್ನು ಸಾರ್ವಜನಿಕರು ನಂಬಬಾರದು. ಸ್ಟಾಂಡರ್ಡ್ ಕಂಪನಿಗಳಲ್ಲಿ ವಸ್ತುಗಳ ಖರೀದಿಸಿದರೆ ಉತ್ತಮ. ಜತೆಗೆ ಅಪರಿಚಿತ ಮತ್ತು ಅಧಿಕೃತ ಜಾಹಿರಾತು ನೀಡದ ವೆಬ್‌ಸೈಟ್‌ಗಳಲ್ಲಿ ಯಾವುದೇ ವ್ಯವಹಾರ ನಡೆಸಬಾರದು. ಉತ್ತಮ ಗುಣಮಟ್ಟದ ವಸ್ತುಗಳ ರಿಯಾಯಿತಿ,. ಆಫರ್‌ಗಳ ಬಗ್ಗೆ ಶೋಧಿಸುವುದು ಅಗತ್ಯ. ಮತ್ತೂಂದೆಡೆ ಇಂತಹ ವೆಬ್‌ಸೈಟ್‌ಗಳ ವಿಮರ್ಶೆ ಕೂಡ ನಕಲಿಯಾಗಿರುತ್ತದೆ. ಅದನ್ನು ನಂಬಬಾರದು.
– ಅನೂಪ್ ಶೆಟ್ಟಿ, ಈಶಾನ್ಯ ವಿಭಾಗದ ಡಿಸಿಪಿ ಕೇಂದ್ರ ಸರ್ಕಾರ ಸೈಬರ್ ಭದ್ರತೆ ಬಗ್ಗೆ ಕಠಿಣ ಕ್ರಮಕೈಗೊಳ್ಳುತ್ತಿಲ್ಲ. ನಕಲಿ ವೆಬ್‌ಸೈಟ್‌ಗಳನ್ನು ನಿಷ್ಕ್ರಿಯಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಭವಿಷ್ಯದಲ್ಲಿ ಎದುರಾಗುವ ಸೈಬರ್ ಸಮಸ್ಯೆ ತಡೆಯಲು ಈಗಲೇ ಪ್ರಮುಖವಾಗಿ ಕೇಂದ್ರದಲ್ಲಿ ಸೈಬರ್ ಸೆಕ್ಯೂರಿಟಿ ಸಚಿವಾಲಯ ತೆರೆಯಬೇಕಿದೆ.
– ಶುಭಮಂಗಳ. ಸೈಬರ್ ತಜ್ಞೆ. -ಮೋಹನ್ ಭದ್ರಾವತಿ