Advertisement
ಅತ್ಯಾಧುನಿಕ ಸೌಕರ್ಯ: ಸುಮಾರು 62.06 ಎಕರೆ ವಿಸ್ತೀರ್ಣದಲ್ಲಿ ದೇವಸ್ಥಾನ ಹಾಗೂ ದೇಗುಲಕ್ಕೆ ಸಂಬಂಧಿಸಿದ ಸಮುತ್ಛಯಗಳ ನಿರ್ಮಾಣವಾಗಲಿದೆ. ಭಕ್ತಾದಿಗಳಿಗೆ ಅತ್ಯಾಧುನಿಕ ಸೌಕರ್ಯಗಳುಳ್ಳ ವಿಶ್ರಾಂತಿ ಧಾಮ, ಅನ್ನಛತ್ರ, ಅಧ್ಯಾತ್ಮ-ಧಾನ್ಯ ಮಂದಿರ, ಆಡಳಿತ ಕಚೇರಿ, ದೇಗುಲ ಸಿಬಂದಿಗೆ ವಸತಿ ಸಮುತ್ಛಯ ಹಾಗೂ ವಾಹನಗಳಿಗಾಗಿ ಬೃಹತ್ ಪಾರ್ಕಿಂಗ್ ವ್ಯವಸ್ಥೆ ಈ ಜಾಗದಲ್ಲಿ ನಿರ್ಮಾಣವಾಗಲಿವೆ.
ಮಾತಾ ವೈಷ್ಣೋದೇವಿ ರೀತಿಯಲ್ಲಿ ಶ್ರೀ ವೆಂಕಟೇಶ್ವರ ಸನ್ನಿಧಾನವೂ ಪುಣ್ಯಕ್ಷೇತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರವಾಸೋದ್ಯಕ್ಕೆ ಉತ್ತೇಜನ ನೀಡುವ ವಿಶ್ವಾಸವಿದೆ ಎಂದಿದ್ದಾರೆ ಟಿಟಿಡಿ ವಕ್ತಾರ.