Advertisement

ಸುದ್ದಿ ಕೋಶ: ರೈಲ್ವೇಗೆ ಕಳ್ಳರ ತಲೆನೋವು!

06:00 AM May 25, 2018 | Team Udayavani |

2017-18ರ ಅವಧಿಯಲ್ಲಿ ದೇಶಾ ದ್ಯಂತ ನಾನಾ ರೈಲುಗಳು, ನಿಲ್ದಾಣಗಳಿಂದ ಪ್ರಯಾಣಿಕರಿಂದಲೇ ಕಳ್ಳತನವಾಗಿದ್ದ ರೈಲ್ವೇ ಇಲಾಖೆಗೆ ಸಂಬಂಧ ಪಟ್ಟ ಸಾಮಗ್ರಿಗಳಲ್ಲಿ ಬಹುತೇಕ ವಸ್ತುಗಳನ್ನು ಮರುವಶಪಡಿಸಿಕೊಳ್ಳುವಲ್ಲಿ ರೈಲ್ವೆ ಇಲಾಖೆ ಸಫ‌ಲವಾಗಿದೆ. ರೈಲ್ವೇ ಸುರಕ್ಷಾ ಪಡೆ (ಆರ್‌ಪಿಎಫ್) ವಶಪಡಿಸಿಕೊಂಡ ಈ ಸಾಮಗ್ರಿಗಳ ಒಟ್ಟು ಮೌಲ್ಯ 2.97 ಕೋಟಿ ರೂ. ಇಂಥ ಕಳ್ಳತನದ ಪ್ರಕರಣಗಳು ರೈಲ್ವೆ ಇಲಾ ಖೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

Advertisement

ಇಲಾಖೆ ಆತಂಕ
1 ಲಕ್ಷ ಕಿ.ಮೀ. ವರೆಗಿನ ರೈಲು ಮಾರ್ಗಗಳಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿ ಡುವುದು ಅಸಾಧ್ಯ. ಕಳ್ಳತನ ಪ್ರಮಾಣ ಏರುತ್ತಿರುವುದು ಆತಂಕಕಾರಿ. ಎಂಜಿನಿಯರಿಂಗ್‌ ವಿಭಾಗದ ಪರಿಕರಗಳನ್ನೇ ಹೆಚ್ಚು ಕದಿಯುತ್ತಿರುವುದು ಅಪಘಾತಗಳಿಗೂ ಕಾರಣವಾಗಬಹುದು ಎಂಬ ಆತಂಕವನ್ನು ಹಿರಿಯ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ. 

ಚೆಂಬಿನಿಂದ ತಾಂತ್ರಿಕ ಸಾಮಗ್ರಿವರೆಗೆ!
ಬೋಗಿಗಳ‌ ಟಾಯ್ಲೆಟ್‌ಗಳಲ್ಲಿನ ಚೆಂಬು, ಬೆಡ್‌ ಶೀಟುಗಳನ್ನೂ ಬಿಡದೇ ಕದ್ದಿರುವ ಜನ, ಒಳಗಿರುವ ಸೀಲಿಂಗ್‌ ಫ್ಯಾನುಗಳು, ವಾಶ್‌ರೂಂಗಳಲ್ಲಿನ ಶವರ್‌ಗಳು, ಕಿಟಕಿಗಳಿಗೆ ಅಳವಡಿಸಲಾಗುವ ಕಬ್ಬಿಣದ ಗ್ರಿಲ್‌ ಜತೆಗೆ ರೈಲು ನಿಲ್ದಾಣಗಳಲ್ಲಿ ಇರಿಸಿರುವ ಕೆಲ ಎಂಜಿನಿಯರಿಂಗ್‌ ಪರಿಕರಗಳನ್ನೂ ಕದ್ದಿದ್ದಾರೆ. 

ಯಾವ ವಿಭಾಗದಲ್ಲಿ ಏನೇನು ಕಳವು? 
ಎಂಜಿನಿಯರಿಂಗ್‌: ರೈಲ್ವೆ ಟ್ರ್ಯಾಕ್‌ ಪರಿ ಕರ, ಫಿಶ್‌ ಪ್ಲೇಟ್‌ಗಳು 
ಮೆಕ್ಯಾನಿಕಲ್‌: ವಾಷ್‌ ಬೇಸಿನ್‌, ಶವರ್‌, ಕನ್ನಡಿ, ನಲ್ಲಿಗಳು 
ಸಿಗ್ನಲಿಂಗ್‌ ಮತ್ತು ಟೆಲಿಕಮ್ಯೂನಿಕೇಷನ್‌: ಓವರ್‌ ಹೆಡ್‌ ಕೇಬಲ್‌ಗಳು, ಸೋಲಾರ್‌ ಪ್ಲೇಟ್‌ಗಳು, ರಿಲೇ, ಟೆಲಿಫೋಗಳು
ವಿದ್ಯುತ್‌: ಬ್ಯಾಟರಿಗಳು, ಎಲೆಕ್ಟ್ರಿಕ್‌ ಕೋಚ್‌ ಫ್ಯಾನ್‌ಗಳು, ಸ್ವಿಚ್‌ಗಳು

74,456 ಆರ್‌ಪಿಎಫ್ಗೆ ಮಂಜೂರಾಗಿರುವ ಸಿಬಂದಿ
67,000 ಆರ್‌ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬಂದಿ

Advertisement

ಯಾವ ವರ್ಷ,ಎಷ್ಟೆಷ್ಟು?
ವರ್ಷ          ಪ್ರಕರಣ         ಮೌಲ್ಯ
2016-17      5,219           1.58
2017-18       5,239            2.97
(ರೂ. ಕೋಟಿಗಳಲ್ಲಿ )

Advertisement

Udayavani is now on Telegram. Click here to join our channel and stay updated with the latest news.

Next