Advertisement

ಆಸ್ತಿಗಾಗಿ ವ್ಯಕ್ತಿ ಅಪಹರಿಸಿದ್ದ ಗ್ಯಾಂಗ್‌ ಅಂದರ್‌

01:19 PM May 10, 2020 | Suhan S |

ಬೆಳಗಾವಿ: ಕೋಟ್ಯಂತರ ರೂ. ಮೌಲ್ಯದ ಜಮೀನು ಹಾಗೂ ಹಣ ಕಬಳಿಸಲು ಹೊಂಚು ಹಾಕಿ ಶ್ರೀಮಂತ ವ್ಯಕ್ತಿಯನ್ನು ಅಪಹರಣ ಮಾಡಿದ್ದ 9 ಜನರ ಗ್ಯಾಂಗ್‌ನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ನಗರದ ಮಹಾದ್ವಾರ ರಸ್ತೆಯ ವಿನಾಯಕ ಶಂಕರ ಪ್ರಧಾನ, ನ್ಯೂ ಗಾಂಧಿ ನಗರದ ಶಿವನಾಥ ಉರ್ಫ ಪಿಂಟು ರಾನಬಾ ರೇಡೇಕರ, ಪುಲಬಾಗ ಗಲ್ಲಿಯ ಅಮೀತ ಯಲ್ಲಪ್ಪ ಮಜಗಾಂವಿ, ಗಾಂಧಿ  ನಗರದ ದೀಪಕ ಗಲ್ಲಿಯ ಮುರಾರಿ ಬಾಬಾಜಾನ ಖಾನಾಪೂರಿ, ಮಹಾರಾಷ್ಟ್ರದ ಗಡಹಿಂಗ್ಲಜ್‌ ತಾಲೂಕಿನ ಹಡಲಗೆ ಗ್ರಾಮದ ಸುರೇಶ ಮಹಾದೇವ ಪಾಟೀಲ, ಬೆಳಗಾವಿ ತಾಲೂಕಿನ ಬೆಳವಟ್ಟಿ ಗ್ರಾಮದ ಚೇತನ ನಾರಾಯಣ ಪಾಟೀಲ, ಅನಗೋಳದ ಸಂಜಯ ಪ್ರಕಾಶ ಕೌಜಲಗಿ ಉರ್ಫ ಭಜಂತ್ರಿ, ಬೆಳಗಾವಿ ಮಾರುತಿ ನಗರದ ರಾಜು ಜ್ಞಾನೇಶ್ವರ ಗೋಣಿ, ರೈತ ಗಲ್ಲಿಯ ಅಮೀತ ಪರುಶರಾಮ ಧಾಮಣೇಕರ ಎಂಬವರನ್ನು ಬಂಧಿಸಲಾಗಿದೆ. ಬಂಧಿ ತರಿಂದ ಕಾರು, ಐದು ದ್ವಿಚಕ್ರ ವಾಹನಗಳು ಹಾಗೂ 11 ಮೊಬೆ„ಲ್‌ಗ‌ಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಪಹರಣ ನಡೆದದ್ದು ಏಕೆ?: ನಗರದ ಬಾಂಧೂರ ಗಲ್ಲಿಯ ಅಣ್ಣಾಸಾಹೇಬ ಚೌಗಲೆ ಎಂಬ ಶ್ರೀಮಂತ ವ್ಯಕ್ತಿಯನ್ನು ಈ ಗ್ಯಾಂಗ್‌ ನಾಲ್ಕು ತಿಂಗಳ ಹಿಂದೆ ಅಪಹರಿಸಿತ್ತು. ಅಣ್ಣಾಸಾಹೇಬನ ತಂದೆ-ತಾಯಿ ಮತ್ತು ಮದುವೆಯಾಗದ ಮೂವರು ಸಹೋದರಿಯರು ಮೃತಪಟ್ಟಿದ್ದಾರೆ. ಅಣ್ಣಾಸಾಹೇಬ ಕೂಡ ಬ್ರಹ್ಮಚಾರಿಯಾಗಿದ್ದಾರೆ. ಈತನಿಗೆ ಯಾರೂ ವಾರಸುದಾರರು ಇರಲಿಲ್ಲ. ಇದನ್ನೇ ಹೊಂಚು ಹಾಕಿದ ಖದೀಮರು ಅಣ್ಣಾಸಾಹೇಬನನ್ನು ಅಪಹರಿಸಿ ಆಸ್ತಿ ಹಾಗೂ ಹಣವನ್ನು ಕಬಳಿಸುವ ಪ್ರಯತ್ನ ನಡೆಸಿದ್ದರು.

ಆಸ್ತಿ-ಹಣ ದೋಚುವ ಯತ್ನ: ಫೆ. 23ರಂದು  ಅಣ್ಣಾಸಾಹೇಬನನ್ನು ಐವರು ಖದೀಮರು ಅಪಹರಿಸಿಕೊಂಡು ಹೋಗಿದ್ದರು. ನಂತರ ಬೇರೆ ಬೇರೆ ಕಡೆಗಳ ಫಾರ್ಮ್ ಹೌಸ್‌ ಮತ್ತು ಮಹಾರಾಷ್ಟ್ರದ ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದ ಖದೀಮರು ಆಣ್ಣಾಸಾಹೇಬ ಚೌಗಲೆ ಹೆಸರಿನಲ್ಲಿ ನಗರದ ಪೋದ್ದಾರ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಬಳಿಯ 3 ಎಕರೆ ಜಾಗ ಮತ್ತು ಇನ್ನೊಂದು ಕಡೆಗೆ 60 ಗುಂಟೆ ಜಾಗ ಮಾರಾಟ ಮಾಡಿದ್ದ 35 ಲಕ್ಷ ರೂ. ಹಣವನ್ನು ದೋಚಲು ಹೊಂಚು ಹಾಕಿದ್ದರು.

ಲಾಕ್‌ಡೌನ್‌ದಿಂದಾಗಿ ಸಿಕ್ಕಿ ಬಿದ್ದ ಗ್ಯಾಂಗ್‌: ಲಾಕ್‌ ಡೌನ್‌ ಮುಗಿದ ಮೇಲೆ ಸಬ್‌ ರೆಜಿಸ್ಟ್ರಾರ್‌ ಕಚೇರಿಗೆ ಬಂದು ಜಾಗ ತಮ್ಮ ಹೆಸರಿಗೆ ಮಾಡಿಕೊಳ್ಳುವ ಪ್ಲ್ಯಾನ್‌ ಮಾಡಿದ್ದರು. ಅಷ್ಟರೊಳಗೆ ಅಣ್ಣಾಸಾಹೇಬನ ಹೆಸರಿನ ಖಾತೆಯಲ್ಲಿರುವ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ಖದೀಮರು ಸೊಸೆ„ಟಿಗೆ ಬಂದಿದ್ದರು. ಮಾರ್ಕೆಟ್‌ ಎಸಿಪಿ ಎನ್‌.ವಿ. ಭರಮಣಿ ಅವರಿಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಸೊಸೈಟಿಗೆ ಹೋಗಿ ದಾಳಿ ಮಾಡಿದಾಗ ಅಪಹರಣಕಾರರು ಸಿಕ್ಕಿ ಬಿದ್ದಿದ್ದಾರೆ.

Advertisement

ನಾಲ್ಕು ತಿಂಗಳ ಹಿಂದೆಯೇ ಅಣ್ಣಾಸಾಹೇಬ ಚೌಗಲೆ ನಾಪತ್ತೆ ಆಗಿದ್ದಾನೆ ಎಂದು ಮಾರ್ಕೆಟ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಈತನ ಶೋಧಕ್ಕೆ ಕಾರ್ಯಾಚರಣೆ ನಡೆಸಿದ್ದರು. ಬೆಳವಟ್ಟಿ ಗ್ರಾಮದ ಚೇತನ ಪಾಟೀಲ ಫಾರ್ಮ್ ಹೌಸ್‌ನಲ್ಲಿ 40 ದಿನ ಹಾಗೂ ಮಹಾರಾಷ್ಟ್ರದ ಗಡಹಿಂಗ್ಲಜ್‌ ತಾಲೂಕಿನ ಕಡಲಗಿ ಗ್ರಾಮದ ಸುರೇಶ ಪಾಟೀಲ ಎಂಬಾತನ ಮನೆಯಲ್ಲಿ ಒಂದು ತಿಂಗಳು ಕಾಲ ಕೂಡಿ ಇಟ್ಟಿದ್ದರು. ಕೋಟ್ಯಂತರ ರೂ. ಹಣವನ್ನು ಲಪಟಾಯಿಸುವ ಷಡ್ಯಂತ್ರ ರೂಪಿಸಿದ್ದ ಗ್ಯಾಂಗ್‌ ಬಂಧಿ ಸುವಲ್ಲಿ ಮಾರ್ಕೆಟ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾರ್ಕೆಟ್‌ ಎಸಿಪಿ ಎನ್‌.ವಿ. ಭರಮಣಿ, ಇನ್ಸಪೆಕ್ಟರ್‌ ಸಂಗಮೇಶ ಶಿವಯೋಗಿ, ಪಿಎಸ್‌ಐಗಳಾದ ವಿಠಲ ಹಾವಣ್ಣವರ, ಎಂ.ಎಸ್‌. ವಠಾರೆ, ಸಿಬ್ಬಂದಿಗಳಾದ ಶಂಕರ ಫಾಟೀಲ, ಅನಿಲ್‌, ನವೀನ್ಮ ಡಾಲೆ, ಮಹೇಶ ಕೌಜಲಗಿ, ಎಸ್‌.ಬಿ. ಖಾನಾಪುರೆ, ಎಲ್‌.ಎಸ್‌. ಕಡೋಲಕರ, ಎಸ್‌.ಟಿ. ತೇಲಿ, ಆಶೀರ್‌ ಜಮಾದಾರ, ವಿಶ್ವನಾಥ ಮಾಳಗೆ, ಎಂ.ಎಸ್‌. ಚಾವಡಿ, ವಿರೂಪಾಕ್ಷಿ ಬೂದನವರ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next