Advertisement

Bengaluru: ಚಿನ್ನಾಭರಣ ಮಳಿಗೆಯಲ್ಲಿ ತಡರಾತ್ರಿ ದುಷ್ಕರ್ಮಿಗಳಿಂದ ಕಳವಿಗೆ ಯತ್ನ

12:42 PM Sep 15, 2024 | Team Udayavani |

ಬೆಂಗಳೂರು: ದುಷ್ಕರ್ಮಿಗಳು ಚಿನ್ನಾಭರಣ ಮಳಿಗೆಯೊಂದರ ಕಬ್ಬಿಣದ ಶಟರ್‌ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬನ ಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬನಶಂಕರಿ 2ನೇ ಹಂತದ ಬಿಡಿಎ ಕಾಂಪ್ಲೆಕ್ಸ್‌ ಎದುರಿನ 21ನೇ ಮುಖ್ಯರಸ್ತೆಯ ರಾಜಲಕ್ಷ್ಮೀ ಜ್ಯುವೆಲ್ಲರಿ ಅಂಗಡಿಯಲ್ಲಿ ಸೆ.5ರಂದು ಮುಂಜಾನೆ 1 ಗಂಟೆಯಿಂದ 2 ಗಂಟೆ ಅಂತರದಲ್ಲಿ ಘಟನೆ ನಡೆದಿದೆ. ಜ್ಯುವೆಲ್ಲರಿ ಅಂಗಡಿ ಮಾಲಿಕ ಗೋದಾರಾಮ್‌ ಚೌಧರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸೆ.5ರಂದು ಮುಂಜಾನೆ ಸುಮಾರು 1 ಗಂಟೆಗೆ ಇಬ್ಬರು ಅಪರಿಚಿತರು ಜ್ಯುವೆಲ್ಲರಿ ಅಂಗಡಿ ಬಳಿ ಬಂದಿದ್ದು, ಬಳಿಕ ತಾವು ತಂದಿದ್ದ ಚಿಕ್ಕ ಬ್ಯಾಗ್‌ನಿಂದ ಗ್ಯಾಸ್‌ ಕಟರ್‌ ತೆಗೆದು ಅಂಗಡಿ ಶೆಟರ್‌ ಬಾಗಿಲು ಕತ್ತರಿಸಲು ಮುಂದಾಗಿದ್ದಾರೆ. ಇದೇ ಸಮಯಕ್ಕೆ ಪಕ್ಕದ ಅಂಗಡಿಯಲ್ಲಿ ಮಲಗಿದ್ದ ಯುವಕರು ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ ಅಂಗಡಿ ಬಾಗಿಲ ಬಳಿ ಬೆಳಕು ಕಾಣಿಸಿದೆ. ಈ ವೇಳೆ ಆ ಯುವಕರು ಕಳ್ಳ ಕಳ್ಳ ಎಂದು ಜೋರಾಗಿ ಕೂಗಿದ್ದಾರೆ. ಅದರಿಂದ ಗಾಬರಿಗೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ಅಂಗಡಿ ಶೆಟರ್‌ ಬಾಗಿಲು ಕತ್ತರಿಸುವ ದೃಶ್ಯ ಘಟನಾ ಸ್ಥಳದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಜ್ಯುವೆಲ್ಲರಿ ಅಂಗಡಿ ಮಾಲಿಕ ನೀಡಿದ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.