Advertisement

ಶೋರೂಂನಲ್ಲಿ ಬೆಲೆಬಾಳುವ ಮೊಬೈಲ್ ಕದ್ದು ಪೇಚಿಗೆ ಸಿಲುಕಿದ ಕಳ್ಳ…ಅಲ್ಲಿ ನಡೆದಿದ್ದೇನು?

04:57 PM Dec 14, 2022 | Team Udayavani |

ಬ್ರಿಟನ್: ಸ್ಮಾರ್ಟ್ ಫೋನ್ ಖರೀದಿಸಲು ಬಂದ ವ್ಯಕ್ತಿಯೊಬ್ಬ ಏಕಾಏಕಿ ಸ್ಮಾರ್ಟ್ ಫೋನ್ ಕದ್ದು ಓಡಿಹೋಗಲು ಯತ್ನಿಸಿ ಪೇಚಿಗೆ ಸಿಲುಕಿರುವ ಘಟನೆ ಬ್ರಿಟನ್ ನ ಡ್ಯೂಸ್ ಬರಿಯಲ್ಲಿ ನಡೆದಿದೆ. ತನ್ನ ಅದ್ಭುತ ಸಮಯಪ್ರಜ್ಞೆಯಿಂದ ಕಳ್ಳನ ಸಂಚನ್ನು ವಿಫಲಗೊಳಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Advertisement

ಸಿಸಿಟಿವಿ ಕ್ಯಾಮರಾದ ವೈರಲ್ ವಿಡಿಯೋದಲ್ಲಿ, ಗ್ರಾಹಕರ ಸೋಗಿನಲ್ಲಿ ಬಂದ ಮೊಬೈಲ್ ಶೋರೂಂಗೆ ಬಂದ ಕಳ್ಳ, ವಿವಿಧ ಕಂಪನಿಗಳ ಮೊಬೈಲ್ ಗಳನ್ನು ಪರಿಶೀಲಿಸುತ್ತಿದ್ದ. ಆದರೆ ಆತ 1600(ಅಂದಾಜು 1 ಲಕ್ಷದ 63 ಸಾವಿರ ರೂಪಾಯಿ) ಪೌಂಡ್ಸ್ ಮೌಲ್ಯದ ಸ್ಮಾರ್ಟ್ ಫೋನ್ ಅನ್ನು ಕಳವು ಮಾಡುವ ಯೋಚನೆಯಲ್ಲಿ ಬಂದಿದ್ದ.

ಮೊಬೈಲ್ ಪರಿಶೀಲಿಸುತ್ತಿದ್ದ ಕಳ್ಳ ತನ್ನ ಇಷ್ಟದ ಮೊಬೈಲ್ ಅನ್ನು ಏಕಾಏಕಿ ತೆಗೆದುಕೊಂಡು ಶಾಪ್ ನಿಂದ ಹೊರಗೋಡಿದ್ದ. ಆದರೆ ಕೆಲವೇ ಕ್ಷಣದಲ್ಲಿ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ ಬಂದುಬಿಟ್ಟಿದ್ದ! ಅದಕ್ಕೆ ಕಾರಣ ಕಳ್ಳ ಮೊಬೈಲ್ ಕದ್ದು ಓಡುತ್ತಿದ್ದಂತೆಯೇ ಅಂಗಡಿ ಮಾಲೀಕ ರಿಮೋಟ್ ಕಂಟ್ರೋಲ್ ನಲ್ಲಿ ಮೈನ್ ಡೋರ್ ಲಾಕ್ ಮಾಡಿಬಿಟ್ಟಿದ್ದ ಎಂದು ಮೆಟ್ರೋ ನ್ಯೂಸ್ ವರದಿ ಮಾಡಿದೆ.

ಮೊಬೈಲ್ ಕದ್ದು ಓಡಿಹೋಗಲು ಸಾಧ್ಯವಾಗದೇ ವಾಪಸ್ ಬಂದ ಕಳ್ಳ ಮೊಬೈಲ್ ಅನ್ನು ಅಂಗಡಿ ಮಾಲೀಕನಿಗೆ ನೀಡಿ ಗಡಿಬಿಡಿಯಿಂದಲೇ ಮುಖಮುಚ್ಚಿಕೊಂಡು ಡೋರ್ ನತ್ತ ದೌಡಾಯಿಸಿದ್ದ, ಆದರೆ ಆಗಲೂ ಡೋರ್ ಲಾಕ್ ಆಗಿಯೇ ಇತ್ತು. ಆ ಕಡೆ, ಈ ಕಡೆ ನೋಡುತ್ತಿದ್ದಾಗ, ಮಾಲೀಕ ಅನ್ ಲಾಕ್ ಮಾಡಿದ ಕೂಡಲೇ ಬಾಗಿಲಿನಿಂದ ಹೊರಗೆ ಓಡಿಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next