Advertisement

ಕಳ್ಳತನದ ವೇಳೆ ಹೃದಯಾಘಾತ : ಕದ್ದ ಹಣಕ್ಕಿಂತ ಹೆಚ್ಚು ಆಸ್ಪತ್ರೆ ಬಿಲ್ ಕಟ್ಟಿದ ಜೋರರು  

01:59 PM Apr 02, 2021 | Team Udayavani |

ಉತ್ತರ ಪ್ರದೇಶ : ದರೋಡೆ ವೇಳೆ ತಮ್ಮ ನಿರೀಕ್ಷೆಗಿಂತ ಅಧಿಕ ಹಣ ಸಿಕ್ಕಿದ್ದರಿಂದ ಸಂತಸಗೊಂಡ ಕಳ್ಳನಿಗೆ ಹಾರ್ಟ್ ಅಟ್ಯಾಕ್ ಆದ ಘಟನೆ ಉತ್ತರಪ್ರದೇಶದ ಬಿಜೋರ್‌ನ ಕೊತ್ವಾಲಿ ದೇಹತ್ ಎಂಬಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಕಳೆದ ಮಾರ್ಚ್ ತಿಂಗಳಿನಲ್ಲಿ ಕೊತ್ವಾಲ್ ದೇಹತ್ ಏರಿಯಾದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಬುಧವಾರ (ಮಾರ್ಚ್.31) ನವಾಜ್ (30) ಹಾಗೂ ಇಯಾಜ್ (30) ಹೆಸರಿನ ಇಬ್ಬರು ಖದೀಮರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಬಂಧಿತರು ಆಲಿಪುರ್ ಮತ್ತು ನಗೀನಾ ನಿವಾಸಿಗಳೆಂದು ವಿಚಾರಣೆ ಸಂದರ್ಭದಲ್ಲಿ ತಿಳಿದಿದೆ.

ಕಳ್ಳತನ ಮಾಡಲು ಹೋಗಿದ್ದ ಕಳ್ಳನಿಗೆ ಆತನ ನಿರೀಕ್ಷೆಗೂ ಮೀರಿ ಹಣ ದೊರೆತಿದೆ. ಈ ಖುಷಿಗೆ ಚೋರನಿಗೆ ಹೃದಯಾಘಾತವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು.ಕಳ್ಳತನ ಮಾಡಿದ ಹಣಕ್ಕೂ ಹೆಚ್ಚು ಆಸ್ಪತ್ರೆ ಬಿಲ್ ಕಟ್ಟಬೇಕಾಯಿತು ಎಂದು ಬಂಧಿತ ಖದೀಮರು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ.

ಇನ್ನು ಕಳೆದ ತಿಂಗಳು ಸಾರ್ವಜನಿಕ ಸೇವಾ ಕೇಂದ್ರದ ಮಾಲೀಕರಾದ ನವಾಬ್ ಹೈದರ್ ಫೆ.16, 17ರಂದು ಏಳು ಲಕ್ಷ ಕಳುವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕಳ್ಳತನದ ಜಾಡು ಹಿಡಿದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಜ್ ಹಾಗೂ ಇಯಾಜ್ ಎಂಬ ಇಬ್ಬರು ಕಳ್ಳರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆಗ ಈ ಘಟನೆ ಬಗ್ಗೆ ತಿಳಿದು ಬಂದಿದೆ ಎಂದು ಬಿಜೋರ್ ಪೊಲೀಸ್ ಇನ್ಸ್‍ಪೆಕ್ಟರ್ ಧರ್ಮವೀರ್ ಸಿಂಗ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next