Advertisement

ಕಳ್ಳನ ಕೊಂದು, 15 ವರ್ಷ ಶವ ಬಚ್ಚಿಟ್ಟ!

12:38 AM May 21, 2021 | Team Udayavani |

ಸಿಡ್ನಿ: ಮನೆಗೆ ಕಳ್ಳರು ನುಗ್ಗಿದಾಗ ಗುಂಡು ಹಾರಿಸುವುದು ವಿದೇಶಗಳಲ್ಲಂತೂ ಮಾಮೂಲಿ. ಆದರೆ ಸತ್ತವರನ್ನು ಏನು ಮಾಡುತ್ತಾರೆ? ಆಸ್ಟ್ರೇಲಿಯಾದ ಸಿಡ್ನಿಯ ಎಸ್ಟೇಟ್‌ವೊಂದರಲ್ಲಿ ವಾಸಿಸುತ್ತಿದ್ದ ಬ್ರೂಸ್‌ ರಾಬರ್ಟ್ಸ್ ಎಂಬ ವ್ಯಕ್ತಿ ಕಳ್ಳ ಶೇನ್‌ ಸ್ನೆಲ್‌,ಮ್ಯಾನ್‌ನನ್ನು ಕೊಂದು, ಶವವನ್ನು ಮನೆಯೊಳಗೇ 15 ವರ್ಷಗಳ ಕಾಲ ಬಚ್ಚಿಟ್ಟಿದ್ದ!

Advertisement

ವಾಸನೆ ಬರದೇ ಇರಲಿ ಎಂದು ಶವದ ಸುತ್ತ 71 ಸುಗಂಧ ತುಂಬಿದ್ದ ಶೀಷೆಗಳನ್ನು (ಏರ್‌ಫ್ರೆಶ್ನರ್‌ಗಳು) ಇಟ್ಟಿದ್ದ. ಇದು ಬೆಳಕಿಗೆ ಬಂದಿದ್ದು ನ್ಯಾಯಾಲಯವೊಂದರ ವಿಚಾರಣೆ ವೇಳೆ. ಅದೂ ಇತ್ತೀಚೆಗೆ! 2002ರಲ್ಲಿ ಕೊಲೆಯಾಗಿತ್ತು. ರಾಬರ್ಟ್ಸ್ 2017ರಲ್ಲಿ ಮನೆಯಲ್ಲೇ ಹೆಣವಾಗಿ ಪತ್ತೆಯಾಗಿದ್ದ. 2018ರಲ್ಲಿ ಮನೆಯನ್ನು ಶೋಧ ನಡೆಸಿದಾಗ ಸ್ನೆಲ್‌ಮ್ಯಾನ್‌ ಶವ ಸಿಕ್ಕಿತ್ತು! ಈ ಸಾವಿಗೆ ಕಾರಣವೇನು ಎಂಬುದು ನ್ಯಾಯಾಲಯದಲ್ಲಿ ಸತತ ವಿಚಾರಣೆಯಾದ ಅನಂತರ ಬಹಿರಂಗವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next