Advertisement

Viral News: ಕಳ್ಳತನಕ್ಕೆಂದು ಮನೆಗೆ ನುಗ್ಗಿ ಎಸಿಯ ಗಾಳಿಗೆ ಗಾಢವಾಗಿ ನಿದ್ರಿಸಿದ ಕಳ್ಳ.!

11:21 AM Jun 03, 2024 | Team Udayavani |

ಲಕ್ನೋ: ಮನೆ ಕಳ್ಳತನ ಬಂದ ಕಳ್ಳನೊಬ್ಬ ಮನೆಯಲ್ಲಿದ್ದ ಎಸಿಯ ಗಾಳಿಗೆ ಗಾಢ ನಿದ್ರೆಗೆ ಜಾರಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

Advertisement

ಭಾನುವಾರ(ಜೂ.2 ರಂದು) ಮುಂಜಾನೆ ಈ ಘಟನೆ ನಡೆದಿದ್ದು, ಲಕ್ನೋದ ಇಂದಿರಾನಗರ ಪ್ರದೇಶದಲ್ಲಿದ್ದ ಖಾಲಿ ಮನೆಯೊಂದಕ್ಕೆ ವ್ಯಕ್ತಿಯೊಬ್ಬ ಕಳ್ಳತನ ಮಾಡಲು ಬಂದಿದ್ದಾನೆ. ಈ ಮನೆ ಡಾ. ಸುನೀಲ್ ಪಾಂಡೆ ಎಂಬುವವರಿಗೆ ಸೇರಿದ್ದು, ಘಟನೆಯ ಸಮಯದಲ್ಲಿ ಅವರು ಮನೆಯಲ್ಲಿ ಇಲ್ಲದ ಕಾರಣ ಕಳ್ಳ ಮನೆಯ ಗೇಟ್‌ ತೆರೆದು ಮನೆಯೊಳಗೆ ಕಳ್ಳತನಕ್ಕೆ ಬಂದಿದ್ದಾನೆ.

ಮದ್ಯ ಸೇವಿಸಿ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿ ಮನೆಯ ಒಳಗೆ ಹೋಗಿದ್ದಾನೆ. ಮನೆಯಲ್ಲಿ ಎಸಿ ಆನ್‌ ಇರುವುದು ಕಂಡಿದ್ದಾನೆ. ಸ್ವಲ್ಪ ಸಮಯ ವಿಶ್ರಾಂತಿ ಮಾಡಿ ಕಳ್ಳತನ ಮಾಡಲೆಂದು ವ್ಯಕ್ತಿ ಸೋಫಾದ ಬಳಿ ಎಸಿಯ ತಣ್ಣಗೆಯ ಗಾಳಿಗೆ ಕೂತಿದ್ದಾನೆ.

ಮನೆಯ ಮಾಲೀಕ ಮನೆಯಲ್ಲಿ ಇಲ್ಲದೆ ಇದ್ದಾಗ, ಮನೆಯ ಗೇಟ್‌ ಹೇಗೆ ತೆರೆದಿದೆ ಎಂದು ಅಕ್ಕಪಕ್ಕದವರು ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಡಾ. ಪಾಂಡೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಏರ್ ಕಂಡಿಷನರ್ ಆನ್ ಮಾಡಿ ಆರಾಮವಾಗಿ ಮಲಗಿದ್ದ ವ್ಯಕ್ತಿಯನ್ನು ಕಂಡಿದ್ದಾರೆ. ವ್ಯಕ್ತಿಯನ್ನು ಎಚ್ಚರಿಸಿ ವಿಚಾರಿಸಿದಾಗ ಆತ ಕಳ್ಳತನಕ್ಕೆಂದು ಮನೆಯೊಳಗಡೆ ಬಂದಿದ್ದಾಗಿ ಹೇಳಿದ್ದಾನೆ.

Advertisement

ಸದ್ಯ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದೆಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next