Advertisement

ಕಾಂಗ್ರೆಸ್‌ ತನ್ನ ಪ್ರೀತಿಯ ಅರ್ಥಕೋಶದಿಂದ ನನ್ನನ್ನು ಮೂರ್ಖ ಪ್ರಧಾನಿ ಎಂದಿತ್ತು: ಮೋದಿ

10:01 AM May 09, 2019 | Team Udayavani |

ಹೊಸದಿಲ್ಲಿ : 2014ರಲ್ಲಿ ನಾನು ಪ್ರಧಾನಿಯಾದ ದಿನದಿಂದಲೇ ಕಾಂಗ್ರೆಸ್‌ ಪಕ್ಷ ತನ್ನ ಪ್ರೀತಿಯ ಅರ್ಥಕೋಶದಿಂದ ನನ್ನನ್ನು ಹೀಯಾಳಿಸುತ್ತಾ, ಮೂದಲಿಸುತ್ತಾ ಬಂದಿದ್ದು ಅದು ನನ್ನನ್ನು ‘ಮೂರ್ಖ ಪ್ರಧಾನಿ’ ಎಂದು ಕೂಡ ಕರೆದಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಹೇಳಿದರು.

Advertisement

ಕಾಂಗ್ರೆಸ್‌ ನೇತಾರ, ಮಾಜಿ ದಿವಂಗತ ಪ್ರಧಾನಿ ರಾಜೀವ್‌ ಗಾಂಧಿಯನ್ನು ಭ್ರಷ್ಟಾಚಾರಿ ನಂಬರ್‌ 1 ಎಂದು ಮೋದಿ ಹೇಳಿರುವುದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ, “ನಿಮ್ಮ ದ್ವೇಷಕ್ಕೆ ನಾವು ಪ್ರತಿಯಾಗಿ ನಿಮಗೆ ಪ್ರೀತಿ ಮತ್ತು ಆಲಿಂಗನವನ್ನು ಮಾತ್ರವೇ ಕೊಡಬಲ್ಲೆವು’ ಎಂದು ಹೇಳಿದ್ದರು.

ಇದಕ್ಕೆ ಉತ್ತರವೆಂಬಂತೆ ಮಾತನಾಡಿದ ಪ್ರಧಾನಿ ಮೋದಿ, “ನಾನು ಪ್ರಧಾನಿಯಾದ ದಿನದಿಂದಲೇ ಕಾಂಗ್ರೆಸ್‌ ನೇತಾರರು ಎಲ್ಲ ಘನತೆ, ಗೌರವ, ಮರ್ಯಾದೆಗಳನ್ನು ಮರೆತು ನನ್ನನ್ನು ಅತ್ಯಂತ ತುಚ್ಚವಾಗಿ ಹೀಯಾಳಿಸಿದ್ದಾರೆ. ಅವರ ಪ್ರೀತಿಯ ಅರ್ಥಕೋಶದಿಂದ ಅವರು ನನನ್ನು ಗದ್ದಾಫಿ, ಮುಸಲೋನಿ, ಹಿಟ್ಲರ್‌ ಎಂದು ಕರೆದಿದ್ದಾರೆ; ನಾನು ಮಾನಸಿಕವಾಗಿ ಅಸ್ಥಿರನೆಂದೂ ಜರೆದಿದ್ದಾರೆ ಮತ್ತು ನಾನು ಪ್ರಧಾನಿಯಾದಂದಿನಿಂದಲೂ ನನ್ನ ಮೇಲೆ ಈ ರೀತಿಯ ಪ್ರೀತಿಯ ಹೂ ಮಳೆ ಸುರಿಸುತ್ತಾ ಬಂದಿದ್ದಾರೆ’ ಎಂದು ಮೋದಿ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next