Advertisement

Bhopal: ಪೊಲೀಸರಿಗೆ ಹೊಡೆದು ಕಳ್ಳನ ಬಿಡಿಸಿದರು!

10:11 PM Apr 08, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಪೊಲೀಸ್‌ ಠಾಣೆಯೊಂದರ ಮೇಲೆ 50 ಮಂದಿಯ ಗುಂಪೊಂದು ದಾಳಿ ನಡೆಸಿ, ಠಾಣೆಯಲ್ಲಿ ಬಂಧಿತನಾಗಿದ್ದ ಓರ್ವ ಡಕಾಯಿತ ಸೇರಿಂತೆ ಮೂವರನ್ನು ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ. ನಾಲ್ವರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಠಾಣೆಗೆ ಶನಿವಾರ ಬೆಳಗ್ಗೆ 3 ಗಂಟೆ ಸಮಯಕ್ಕೆ 50 ಜನರ ಗುಂಪೊಂದು ನುಗ್ಗಿ, ಪೊಲೀಸರ ಮೇಲೆ ದಾಳಿ ನಡೆಸಿದೆ. ಡಕಾಯಿತ ಹೇಮಾ ಮೆಗ್ವಾಲ್‌ ಸೇರಿ, ಆತನ ಜತೆಗಿದ್ದ ಇನ್ನಿಬ್ಬರು ಆರೋಪಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ. ಘಟನೆಯಲ್ಲಿ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next