Advertisement

ತಾಜ್ ಮಹಲ್ ಅಡಿಯಲ್ಲಿ ಪ್ರಧಾನಿಯ ಡಿಗ್ರಿ ಹುಡುಕುತ್ತಿದ್ದಾರೆ: ಓವೈಸಿ ವ್ಯಂಗ್ಯ

03:46 PM May 29, 2022 | Team Udayavani |

ಮುಂಬೈ: ತಾಜ್ ಮಹಲ್ ಅಡಿಯಲ್ಲಿ ಕೆಲವರು ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟನ್ನು ಹುಡುಕುತ್ತಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ಭೀವಂಡಿಯ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಒಂದೆರಡು ವಾರಗಳ ಹಿಂದೆ ಭುಗಿಲೆದ್ದ ತಾಜ್ ಮಹಲ್ ವಿವಾದದ ಹಿನ್ನೆಲೆಯಲ್ಲಿ ಓವೈಸಿ ಈ ಮಾತುಗಳನ್ನಾಡಿದ್ದಾರೆ. ಆಗ್ರಾದ ತಾಜ್‌ಮಹಲ್‌ನಲ್ಲಿರುವ 22 ಬೀಗ ಹಾಕಿದ ಕೋಣೆಗಳ ಹಿಂದೆ “ಸತ್ಯವನ್ನು ಕಂಡುಹಿಡಿಯಿರಿ” ಎಂದು ಬಿಜೆಪಿ ನಾಯಕರೊಬ್ಬರು ಅರ್ಜಿ ಸಲ್ಲಿಸಿದ್ದರು. ಸಮಾಧಿಯು ವಾಸ್ತವವಾಗಿ ಹಳೆಯ ಶಿವ ದೇವಾಲಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಆದರೆ ಮೇ 12 ರಂದು, ಅಲಹಾಬಾದ್ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತು ಮತ್ತು ಅಂತಹ ವಿಷಯಗಳನ್ನು “ಇತಿಹಾಸಕಾರರಿಗೆ ಬಿಡಬೇಕು” ಎಂದು ಹೇಳಿದೆ.

ಅದೇ ಭಾಷಣದಲ್ಲಿ ಅಸಾದುದ್ದೀನ್ ಓವೈಸಿ, ಮೊಘಲರು ಭಾರತದ ಹೊರಗಿನಿಂದ ಹೇಗೆ ಬಂದರು ಎಂಬುದರ ಕುರಿತು ಬಿಜೆಪಿ ಮಾತನಾಡುತ್ತಲೇ ಇರುತ್ತದೆ. ಆದರೆ ಪ್ರಪಂಚದ ವಿವಿಧ ಭಾಗಗಳಿಂದ ಹಲವಾರು ಇತರ ಸಮುದಾಯಗಳು ಭಾರತಕ್ಕೆ ಬಂದಿದೆ. ದ್ರಾವಿಡರು ಮತ್ತು ಆದಿವಾಸಿಗಳು ಮಾತ್ರ ಮೂಲ ಭಾರತದವರು ಎಂದು ಹೇಳಿದರು.

ಇದನ್ನೂ ಓದಿ:ಕೇದಾರನಾಥದ ಕಸದ ರಾಶಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

Advertisement

“ಭಾರತ ನನ್ನದಲ್ಲ, ಠಾಕ್ರೆಯವರದ್ದಲ್ಲ, ಮೋದಿ-ಶಾ ಅವರದ್ದಲ್ಲ, ಭಾರತ ಯಾರದ್ದಾದರೂ ಇದ್ದರೆ ಅದು ದ್ರಾವಿಡರು ಮತ್ತು ಆದಿವಾಸಿಗಳದ್ದು. ವಾಸ್ತವವಾಗಿ ಆಫ್ರಿಕಾ, ಇರಾನ್, ಪೂರ್ವ ಏಷ್ಯಾ, ಮಧ್ಯ ಏಷ್ಯಾದಿಂದ ಜನರು ವಲಸೆ ಬಂದ ನಂತರ ಭಾರತ ರೂಪುಗೊಂಡಿತು” ಎಂದು ಲೋಕಸಭೆ ಸಂಸದ ಓವೈಸಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next