ಚಿಕ್ಕಮಗಳೂರು : ನಾನು ದಲಿತ ಎಂದು ಹೀಗೆಲ್ಲಾ ಮಾಡುತ್ತಿದ್ದಾರೆ, ಬೇರೆ ಸಾಮಾನ್ಯ ಶಾಸಕ ಆಗಿದ್ದರೆ ಹೀಗೆ ಮಾಡುತ್ತಿದ್ದರಾ ಎಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಗುರುವಾರ ಕಣ್ಣೀರಿಟ್ಟಿದ್ದಾರೆ.
ಮೂಡಿಗೆರೆ ಐಬಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಬಣ ರಾಜಕೀಯ ಮತ್ತು ಸಾವಿರಾರು ಮಂದಿಯ ವಿರೋಧ ದ ಘಟನೆ ನೆನೆದು ಕುಮಾರಸ್ವಾಮಿ ಕಣ್ಣೀರಿಟ್ಟರು.
ಟಿಕೆಟ್ ನೀಡಬಾರದು ಎಂದು ಆಗ್ರಹ
ಮೂಡಿಗೆರೆಯಲ್ಲಿ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರ ಆಕ್ರೋಶ ಬಹಿರಂಗವಾಗಿದ್ದು ಗುರುವಾರ ನೂರಾರು ಕಾರ್ಯಕರ್ತರು ನಡು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದಾರೆ. ವಿಜಯ ಸಂಕಲ್ಪ ಯಾತ್ರೆಗೆ ಬಿ.ಎಸ್. ಯಡಿಯೂರಪ್ಪ ಅವರು ಬರುವ ಮಾರ್ಗದಲ್ಲಿ ರಸ್ತೆ ಅಡ್ಡಗಟ್ಟಿ ಕೂಗಾಟ ನಡೆಸಿ ಕುಮಾರಸ್ವಾಮಿ ಬೇಡವೇ ಬೇಡ, ಹೊಸ ಮುಖಕ್ಕೆ ಟಿಕೆಟ್ ಕೊಡಿ ಅಂತ ಕೂಗಾಡಿದ್ದಾರೆ.
1000ಕ್ಕೂ ಅಧಿಕ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಶಾಸಕ ಕುಮಾರಸ್ವಾಮಿ ಅವರನ್ನು ಪೊಲೀಸರು ಬೇರೆ ಕಡೆ ಕರೆದೊಯ್ದಿದ್ದರು.
ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಫೈಟ್ ತೀವ್ರವಾಗಿದ್ದು, ಅಸಮಾಧಾನ ಸ್ಟೋಟವಾಗಿದೆ. ವಿಜಯ ಸಂಕಲ್ಪಯಾತ್ರೆ ಅಂಗವಾಗಿ ಮಧ್ಯಾಹ್ನ ರೋಡ್ ಶೋ ಮುನ್ನ ಮೂಡಿಗೆರೆ ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಬಂಡಾಯ ಗುಂಪಿನಿಂದ ಪ್ರತ್ಯಕ ಸಭೆ ನಡೆಸಲಾಗಿದೆ. ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಬಂಡಾಯದ ಸಭೆಗೆ ಕರೆದಿರುವ ಆಡಿಯೋ, ಪೋಸ್ಟ್ ವೈರಲ್ ಆಗಿತ್ತು.