Advertisement

ಅವರು BJP ಗೆ ಕರೆಯುತ್ತಿದ್ದಾರೆ, ನಾನು ಹೋಗಲ್ಲ: ಕೇಜ್ರಿವಾಲ್‌

11:55 PM Feb 04, 2024 | Team Udayavani |

ಹೊಸದಿಲ್ಲಿ: “ನಾನು ಬಿಜೆಪಿಗೆ ಸೇರಬೇಕು ಎಂದು ಆಹ್ವಾನ ನೀಡುತ್ತಿದ್ದಾರೆ. ಆದರೆ ನಾನು ಹೋಗುವುದೇ ಇಲ್ಲ’ ಹೀಗೆಂದು ದಿಲ್ಲಿ ಸಿಎಂ ಮತ್ತು ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ಬಿಜೆಪಿಗೆ ಸವಾಲು ಹಾಕಿದ್ದಾರೆ. ಪಕ್ಷದ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿರುವಂತೆಯೇ ಅವರು ಈ ಮಾತುಗಳನ್ನಾಡಿದ್ದಾರೆ.

Advertisement

ಹೊಸದಿಲ್ಲಿಯ ಕಿರಾರಿ ಎಂಬಲ್ಲಿ ಶಾಲೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಕೇಜ್ರಿವಾಲ್‌ ಮಾತನಾಡಿದರು. “ಅವರು (ಬಿಜೆಪಿ) ನನ್ನ ವಿರುದ್ಧ ಏನೂ ಕ್ರಮಗಳನ್ನು ಬೇಕಾದರೂ ಮಾಡಬಹುದು. ಆದರೆ ಏನು ಮಾಡಲು ಕೂಡ ಸಾಧ್ಯವಿಲ್ಲ,. ನಾನು ಅವರ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ನಾನು ಬಿಜೆಪಿ ಸೇರಬೇಕು ಎಂಬ ಬಗ್ಗೆ ಆಹ್ವಾನದ ಜತೆಗೆ ಒತ್ತಡವನ್ನೂ ಹೇರುತ್ತಿದ್ದಾರೆ. ಆದರೆ ಅದಕ್ಕೆ ಮಣಿದು ಸೇರುವ ಪ್ರಶ್ನೆಯೇ ಇಲ್ಲ’ ಎಂದು ಸವಾಲು ಹಾಕಿದ್ದಾರೆ. ಯಾವ ಅಪರಾಧವನ್ನು ನಾವು ಮಾಡಿದ್ದೇವೆ ಎಂಬ ಕಾರಣಕ್ಕಾಗಿ ಬಿಜೆಪಿಯವರು ನಮ್ಮನ್ನು ಕ್ಷಮಿಸಬೇಕು ಎಂದು ಪ್ರಶ್ನಿಸಿದ್ದಾರೆ ದಿಲ್ಲಿ ಸಿಎಂ.

ಬಂಧನಕ್ಕೆ ಒಳಗಾದರೂ ನಿಲ್ಲದು: ಯಾವುದಾದರೂ ಒಂದು ರೀತಿಯಲ್ಲಿ ತಮ್ಮ ಬಂಧನ ಆದರೂ ಕೂಡ ದಿಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಅಭಿವೃದ್ಧಿ ಯೋಜನೆಗಳು ನಿಲ್ಲಲಾರವು ಎಂದು ಸವಾಲು ಹಾಕಿದ್ದಾರೆ. ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ ಮೊಹಲ್ಲಾ ಕ್ಲಿನಿಕ್‌ಗಳು ಕೂಡ ಕಾರ್ಯವೆಸಗಲಿವೆ ಎಂದು ಪ್ರಕಟಿಸಿದರು.

ಏನಿದು ಬೆಳವಣಿಗೆ?: ಆಪ್‌ ಶಾಸಕರನ್ನು ಬಿಜೆಪಿ ಖರೀದಿ ಮಾಡಲು ಯತ್ನಿಸುತ್ತಿದೆ. ಪ್ರತಿ ಶಾಸಕರಿಗೆ 25 ಕೋಟಿ ರೂ. ನೀಡುವ ಆಮಿಷ ಒಡ್ಡಿತ್ತು ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಜ.27ರಂದು ಆರೋಪಿಸಿದ್ದರು. 2025ರ ಫೆಬ್ರವರಿಯಲ್ಲಿ ನಡೆಯ ಲಿರುವ ವಿಧಾನಸಭೆ ಚುನಾವಣೆಗೆ ಅನುಗುಣವಾಗಿ ಶಾಸಕರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ಅದಕ್ಕೆ ಪೂರಕವಾಗಿ ಅವರ ಪಕ್ಷದ ನಾಯಕಿ ಮತ್ತು ಸಚಿವೆ ಆತಿಷಿ ಮಲೇನಾ ಕೂಡ ಆರೋಪ ಮಾಡಿದ್ದರು.

ಆಪ್‌ ಸಚಿವೆ ಮನೆಗೆ ತೆರಳಿ ನೋಟಿಸ್‌ ಕೊಟ್ಟ ಪೊಲೀಸರು
ಶಾಸಕರಿಗೆ ಆಮಿಷ ಒಡ್ಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಿಲ್ಲಿ ಕ್ರೈಮ್‌ ಬ್ರ್ಯಾಂಚ್‌ ಪೊಲೀಸರು ಸಚಿವೆ ಮತ್ತು ಆಪ್‌ ನಾಯಕಿ ಆತಿಷಿ ಮಲೇನಾ ಅವರ ನಿವಾಸಕ್ಕೆ ಶನಿವಾರ ತೆರಳಿ ನೋಟಿಸ್‌ ನೀಡಿದ್ದಾರೆ. ಈ ಬಗ್ಗೆ ಖುದ್ದು ಆತಿಷಿ ಮಲೇನಾ ಅವರೇ ಸುದ್ದಿಗೋಷ್ಠಿಯಲ್ಲಿ ತಿಳಿಸಿ ದ್ದಾರೆ. “ನನಗೆ ನೀಡಲಾಗಿರುವ ನೋಟಿಸ್‌ನಲ್ಲಿ ಎಫ್ಐಆರ್‌ ದಾಖಲಿಸಿದ ಅಂಶವಿಲ್ಲ. ರಾಜಕೀಯ ಬಾಸ್‌ಗಳ ಒತ್ತಡದಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ’ ಎಂದು ಟೀಕಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next